ನವದೆಹಲಿ: ರಜನಿಕಾಂತ್ ರವರ ಇತ್ತೀಚಿಗೆ ರಾಜಕೀಯ ಪ್ರವೇಶದೊಂದಿಗೆ ತಮಿಳುನಾಡಿನ ರಾಜಕಾರಣಕ್ಕೆ ಮತ್ತೊಮ್ಮೆ ತಾರಾ ಮೆರಗು ಬಂದಿದೆ,ಈ ಸೂಪರ್ ಸ್ಟಾರ್ ನ ರಾಜಕೀಯ ಪ್ರವೇಶದ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್  ಕಮಲ್ ಹಾಸನ್ ಕೂಡ  ರಾಜಕೀಯ ಪ್ರವೇಶದ ಕುರಿತಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೆ ವೇಳೆ ರಜನಿಕಾಂತ್ ರೊಂದಿಗೆ ಮೈತ್ರಿ ಸಾಧಿಸುವ ಕುರಿತು ಪ್ರತಿಕ್ರಯಿಸಿರುವ ಅವರು" ರಜನಿಯ ರಾಜಕಾರಣದಲ್ಲಿ ಸಾಕಷ್ಟು ಕೇಸರಿ ರಾಜಕೀಯದ ಮಿಶ್ರಣವಿದೆ ಆದ್ದರಿಂದ ಅದು ಬದಲಾಗದ ಹೊರತು ಅವರೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಕಮಲ್ ಹಾಸನ್  ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ  naalainamadhe.maiam.com, ವೆಬ್ ಸೈಟ್ ಗೆ ಚಾಲನೆ ನೀಡುವ ಸಂದರ್ಭದಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮುಂದುವರೆದು "ನನ್ನ ರಾಜಕೀಯ ಖಂಡಿತವಾಗಿ ಕೇಸರಿಯಲ್ಲ" ಎಂದು ತಿಳಿಸಿದರು.


"ತಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದರು ಕೂಡಾ ರಾಜಕೀಯ ಸಂಗತಿ ಭಿನ್ನ" ಎಂದು ಕಮಲ್ ಹಾಸನ್ ತಿಳಿಸಿದ್ದಾರೆ,"ತಾವು ಸ್ವಂತ ಪಕ್ಷವನ್ನು ಪ್ರಾರಂಭಿಸುವ ಕಾರಣ ಸದ್ಯ ಅಸ್ತಿತ್ವದಲ್ಲಿರುವ ಯಾವುದೇ ಪಕ್ಷಗಳೊಂದಿಗೆ ಕಾರ್ಯನಿರ್ವಹಿಸಲು ಇಚ್ಚಿಸುವುದಿಲ್ಲ" ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ವೆಬ್ಸೈಟ್  ಕುರಿತು ಮಾತನಾಡಿದ ಅವರು, ಎಲ್ಲಾ ವಿಭಾಗಗಳ ಜನರನ್ನು ಇದರಲ್ಲಿ ಭಾಗವಹಿಸುವ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ  ಜನರು ಆರೋಗ್ಯ, ಶಿಕ್ಷಣ, ಪರಿಸರ, ಕೃಷಿ, ಹಣಕಾಸು ಮತ್ತು ಇನ್ನು ಹೆಚ್ಚಿನ ವಲಯಗಳ ಹೆಸರಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ನಟ ಹೇಳಿದರು.