ಅಲ್ಲಾಪುರ: ಮಂಗನಿಂದ ಮಾನವ ಎಂಬುದು ಹೊಸತೇನಲ್ಲ. ಮಂಗಗಳು ಮತ್ತು ಮಾನವರ ನಡುವಿನ ಸಂಬಂಧವು ವಿಶೇಷವಾಗಿಲ್ಲ. ಸಾಮಾನ್ಯವಾಗಿ ಕೋತಿಗಳು ಜನರಿಗೆ ಹಾನಿ ಮಾಡುತ್ತವೆಂದು ಎಲ್ಲರು ಹೆದರುತ್ತಾರೆ. ಆದರೆ ಇಲ್ಲೊಂದು ಎರಡು ವರ್ಷದ ಮಗುವಿಗೆ ಮಂಗಗಳ ಜೊತೆ ಎಲ್ಲಿಲ್ಲದ ಬಾಂಧವ್ಯ...


COMMERCIAL BREAK
SCROLL TO CONTINUE READING

ಹೌದು, ಎರಡು ವರ್ಷದ ಮಗು ಮತ್ತು ಮಂಗಗಳ ನಡುವಿನ ಸ್ನೇಹ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಕರ್ನಾಟಕದ ಧಾರವಾಡ ಜಿಲ್ಲೆಯ ಅಲ್ಲಾಪುರ ಗ್ರಾಮದಲ್ಲಿ ಎರಡು ವರ್ಷದ ಬಾಲಕ ಸಮರ್ಥ್ ಬಂಗಾರಿ ಮಂಗಗಳ ಜೊತೆ ಆಟವಾಡುವ ರೀತಿ ಇಲ್ಲಿನ ಜನರಿಗೆ ಹಾಟ್ಸ್ಪಾಟ್ ಆಗಿ ಉಳಿದಿದೆ. ಜನರು ಈ ಬಾಲಕನನ್ನು ನೋಡಲು ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದಾರೆ.


ಸಮರ್ಥ್ ನ ತಂದೆ ಹಾಗೂ ತಾಯಿ ಸುನಿಲ್ ಮತ್ತು ನಂದಾ ಬಂಗಾರಿ ರೈತರು. ಕೆಲವು ತಿಂಗಳ ಹಿಂದೆ ಅವರು ತಮ್ಮ ಕಿರಿಯ ಮಗ ಮನೆಯ ಹೊರಗೆ ಸುಮಾರು ಒಂದು ಡಜನ್ ಲಂಗರ್ ಗಳೊಂದಿಗೆ ಆಡುತ್ತಿದ್ದದ್ದು ಕಂಡು ಬಂದಿತು. ಲಂಗೂರ್ಗಳೊಂದಿಗೆ ಆಟವಾಡುವ ಸಮಯದಲ್ಲಿ ಆ ಬಾಲಕ ತುಂಬಾ ಆರಾಮದಾಯಕನಾಗಿದ್ದ. ಸಮರ್ಥ್ ಅವರ ಚಿಕ್ಕಪ್ಪ ಮಲ್ಲಿಕಾರ್ಜುನ ರೆಡ್ಡಿ, ಮಂಗವು ನಮ್ಮ ಮಗುವಿಗೆ ಎಲ್ಲೋ ಹಾನಿಯನ್ನುಂಟು ಮಾಡಬಹುದು ಎಂದು ಆರಂಭದಲ್ಲಿ ನಾವು ಚಿಂತಿತರಾಗಿದ್ದೇವೆ. ಆದರೆ, ನಂತರ ಮಂಗಗಳು ಅವನನ್ನು ಇಷ್ಟಪಡುತ್ತಿವೆ ಮತ್ತು ಅವರು ಪರಸ್ಪರ ಪ್ರೀತಿಸುತ್ತಾರೆ ಎಂದು ಅರಿತುಕೊಂಡೆವು ಎಂದು ಹೇಳಿದರು.


ಬಾಲಕನನ್ನು ಭೇಟಿಯಾಗಲು ಬರುತ್ತವೆ ಮಂಗಗಳು...
ಸಮರ್ಥ್ ಹಳ್ಳಿಯು ರಾಜಧಾನಿ ಬೆಂಗಳೂರು ನಗರದಿಂದ ವಾಯುವ್ಯಕ್ಕೆ 400 ಕಿಲೋಮೀಟರ್ ದೂರದಲ್ಲಿದೆ. ಪ್ರತಿದಿನವೂ, ಸಮರ್ಥ್ ಮನೆಯ ಸಮೀಪವಿರುವ ಮೈದಾನದ ಬಳಿ ಕೋತಿಗಳು ಆತನನ್ನು ಭೇಟಿಯಾಗಲು ಬರುತ್ತವೆ.  "ಪ್ರತಿ ಬೆಳಿಗ್ಗೆ ಸುಮಾರು 6 ಗಂಟೆಗೆ, ಸುಮಾರು 20 ಕೋತಿಗಳು ಮನೆಯಿಂದ ಹೊರಡುವ ಸಮರ್ಥ್ ನೊಂದಿಗೆ ಆಡಲು ಕೂಡಿರುತ್ತವೆ ಮತ್ತು ಆ ಕೋತಿಗಳು  ಮಗು ಸಮರ್ಥ್ ಅನ್ನು ಹೊರತುಪಡಿಸಿ ಮನೆಯ ಯಾವುದೇ ಸದಸ್ಯರ ಬಳಿ ಹೋಗುವುದಿಲ್ಲ" ಎಂದು ಮಲ್ಲಿಕಾರ್ಜುನ ರೆಡ್ಡಿ ಹೇಳಿದರು.


ಮಂಗಗಳೊಂದಿಗೆ ವಿಲಕ್ಷಣ ಸಂಬಂಧ...
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಮಗುವನ್ನು ನೋಡುವುದಕ್ಕೆ ಎರಡು ಬಾರಿ ಮಂಗಗಳು ಬರುತ್ತದೆ. ಮಗುವು ಅವನ ಆಹಾರವನ್ನು ಕೂಡಾ ನೀಡುತ್ತಾನೆ. ಕಳೆದ ಹಲವು ದಿನಗಳಿಂದ ತನ್ನ ಆರು ತಿಂಗಳ ಕಿರಿಯ ಸಹೋದರನಿಗೆ ಬದಲಾಗಿ ಸಮರ್ಥ್ ಮಂಗಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾನೆ ಎಂದು ಸಮರ್ಥ್ನ ಸಂಬಂಧಿ ಹೇಳಿದ್ದಾರೆ.


ಬಹಳ ದೂರದಿಂದ ಬರುತ್ತಿದ್ದಾರೆ ಜನ...
ಈ ವಿಶೇಷ ಸ್ನೇಹದ ಹರಡುವಿಕೆಯಿಂದಾಗಿ, ಮಂಗ ಮತ್ತು ಮಗುವಿನ ಈ ಆಟವನ್ನು ವೀಕ್ಷಿಸಲು ರಾಜ್ಯದಾದ್ಯಂತ ಬಹಳ ದೂರದ ಊರುಗಳಿಂದ ಜನರು ದಿನನಿತ್ಯದ ಈ ಹಳ್ಳಿಗೆ ಬರುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳು, ಹುಬ್ಬಳ್ಳಿ, ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ಜನರು ಈ ಬಾಂಧವ್ಯವನ್ನು ನೋಡಲು ಬರುತ್ತಾರೆ. "ಸಮರ್ಥ್ನ ಕೋತಿಗಳೊಂದಿಗೆ ಸಂಬಂಧವನ್ನು ನೋಡಲು ಜನರು ಆಶ್ಚರ್ಯಚಕಿತರಾಗಿದ್ದಾರೆ. ಅವನ ಮೇಲೆ ಆಂಜನೇಯನ ಆಶೀರ್ವಾದವಿದೆ ಎಂದು ರೆಡ್ಡಿ ಹೇಳುತ್ತಾರೆ."


ಮಂಗಗಳಿಗಾಗಿ ಆಹಾರ ವ್ಯವಸ್ಥೆ... 
ಮಗುವು ಪ್ರಾಣಿಗಳಿಗೆ ಆಹಾರ ನೀಡುವ ಭಾವನೆ ಹೊಂದಿರುವುದರಿಂದ, ಕುಟುಂಬ ಈಗ ಕೋತಿಗಳಿಗೆ ಆಹಾರವನ್ನು ತಯಾರಿಸಲು ಪ್ರಾರಂಭಿಸಿದೆ. "ನಾವು ಪ್ರತಿ ದಿನವೂ ಸುಮಾರು 100 ಲಂಗರುಗಳಿಗೆ ಆಹಾರವನ್ನು ತಯಾರಿಸುತ್ತೇವೆ ಎಂದು ರೆಡ್ಡಿ ಹೇಳಿದರು." ಮಕ್ಕಳೊಂದಿಗೆ ಈ ಮಂಗಗಳ ಸೌಹಾರ್ದ ನಡವಳಿಕೆಯನ್ನು ನೋಡಲು ಕುಟುಂಬಕ್ಕೆ ಬಹಳ ಸಂತೋಷವಾಗಿದೆ. "ಈ ಮಗು ಮತ್ತು ಕೋತಿಗಳ ಅನನ್ಯ ಸ್ನೇಹಕ್ಕಾಗಿ ಆಚರಿಸಲು ನನ್ನ ಕುಟುಂಬ ತುಂಬಾ ಸಂತೋಷವಾಗಿದೆ, ಏಕೆಂದರೆ ಇತರ ಜಿಲ್ಲೆಗಳ ಜನರು ಅದನ್ನು ನೋಡಲು ಬರುತ್ತಿದ್ದಾರೆ" ಎಂದು ರೆಡ್ಡಿ ತಮ್ಮ ಸಂತಸ ಹಂಚಿಕೊಂಡರು.