ಜಮ್ಮು-ಕಾಶ್ಮೀರದಲ್ಲಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣ: ಗುಲಾಂ ನಬಿ ಅಜಾದ್
ಇಡೀ ಕಣಿವೆಯಲ್ಲಿ ಕರ್ಫ್ಯೂ ಜಾರಿಯಲ್ಲಿ. ಮೂವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಹಲವು ರಾಜಕೀಯ ಮುಖಂಡರು ಗೃಹಬಂಧನದಲ್ಲಿದ್ದಾರೆ ಎಂದು ಗುಲಾಂ ನಬಿ ಅಜಾದ್ ಹೇಳಿದರು.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮೇಲ್ಮನೆಯಲ್ಲಿ ಆದ್ಯತೆಯ ಮೇರೆಗೆ ಚರ್ಚಿಸಬೇಕಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಸೋಮವಾರ ಹೇಳಿದ್ದಾರೆ.
"ಇಡೀ ಕಣಿವೆಯಲ್ಲಿ ಕರ್ಫ್ಯೂ ಜಾರಿಯಲ್ಲಿ. ಮೂವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಹಲವು ರಾಜಕೀಯ ಮುಖಂಡರು ಗೃಹಬಂಧನದಲ್ಲಿದ್ದಾರೆ. ರಾಜ್ಯದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ಆದ್ದರಿಂದ ಇದನ್ನು ಆದ್ಯತೆಯ ಮೇರೆಗೆ ಚರ್ಚಿಸಬೇಕು" ಎಂದು ಆಜಾದ್ ಹೇಳಿದರು.
ಇದಕ್ಕೂ ಮೊದಲು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಕಾಂಗ್ರೆಸ್ ಸಂಸದರು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪವನ್ನು ಮುಂದೂಡಲು ನೋಟಿಸ್ ನೀಡಿದ್ದರು.