ಪಣಜಿ: ಗೋವಾದಲ್ಲಿ ಡ್ರಗ್ಸ್ ಮಾಫಿಯಾ ಮತ್ತು ರೇವ್ ಪಾರ್ಟಿಗಳಿಗೆ ಕಡಿವಾಣ ಅಗತ್ಯವೆಂದು ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅಭಿಪ್ರಾಯಪಟ್ಟರು. 


COMMERCIAL BREAK
SCROLL TO CONTINUE READING

ಸೋಮವಾರದಂದು ಇಲ್ಲಿ ಮಾತನಾಡುತ್ತಾ ಯಾರು ಮಾದಕ ವಸ್ತಗಳನ್ನು ಸೇವಿಸುತ್ತಾರೋ ಅವರು ಬೆಳಗಿನ ವೇಳೆಯ ವರೆಗೂ ಡ್ಯಾನ್ಸ್ ಮಾಡಬಹುದು. ಅಲ್ಕೋಹಾಲ್ ಕುಡಿಯುವವರು ಕೇವಲ ಎರಡರಿಂದ ಮೂರು ಗಂಟೆಗಳ ಕಾಲ ಕುಣಿಯಬಹುದು ಎಂದು ಇಲ್ಲಿನ ವಿಧಾನಸೌಧದಲ್ಲಿ ರೇವ್ ಪಾರ್ಟಿ ಮತ್ತು ಮಾದಕ ವಸ್ತುಗಳ ಕುರಿತಾದ ಚರ್ಚೆಯಲ್ಲಿ ಈ ರೀತಿ ಅಭಿಪ್ರಾಯಪಟ್ಟರು. ಈಗಾಗಲೇ ಡ್ರಗ್ ಮಾಪಿಯಾವನ್ನು ಪೊಲೀಸರು ಪತ್ತೆ ಮಾಡಿದ್ದು ,ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಲಾಗುವುದು ಎಂದು ಸದನಕ್ಕೆ ತಿಳಿಸಿದರು.


ಗೋವಾ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವುದರಿಂದ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಪ್ರತಿವರ್ಷ ಭೇಟಿ ನೀಡುತ್ತಾರೆ. ಈ ಸಂಧರ್ಭದಲ್ಲಿ  ಡ್ರಗ್ಸ್ ಮಾರಾಟಗಾರರು ವಿದೇಶಿ ಪ್ರವಾಸಿಗರನ್ನು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇಂತಹ ಎಲ್ಲ ಅಕ್ರಮಗಳಿಗೆ ಸರ್ಕಾರ ಕಡಿವಾಣ ಹಾಕಲು ಚಿಂತಿಸುತ್ತಿದೆ ಎಂದು ಪರಿಕ್ಕರ್ ತಿಳಿಸಿದರು.