ನವದೆಹಲಿ:  ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸೆಪ್ಟೆಂಬರ್ 5 ರಿಂದ ತಮಗೆ ತಿಹಾರ್ ಜೈಲಿನಲ್ಲಿ ಅವರಿಗೆ ಕುರ್ಚಿ, ದಿಂಬು ಇಲ್ಲ ಇದರಿಂದಾಗಿ ತಮಗೆ ಬೆನ್ನು ನೋವು ಬಂದಿದೆ ಎಂದು ಕೋರ್ಟ್ಗೆ ದೂರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

'ಕೋಣೆಯ ಹೊರಗೆ ಕುರ್ಚಿಗಳಿದ್ದವು, ನಾನು ಹಗಲಿನಲ್ಲಿ ಅಲ್ಲಿ ಕುಳಿತುಕೊಳ್ಳುತ್ತಿದ್ದೆ, ಈಗ ಅದನ್ನೂ ಹಿಂತೆಗೆದುಕೊಳ್ಳಲಾಗಿದೆ. ನಾನು ಅದನ್ನು ಬಳಸುತ್ತಿದ್ದ ಕಾರಣ ಅವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ, ಈಗ ವಾರ್ಡನ್ ಕೂಡ ಕುರ್ಚಿಯಿಲ್ಲದೆ ಇದ್ದಾರೆ' ಎಂದು ಚಿದಂಬರಂ ಕೋರ್ಟ್ ಗೆ ತಿಳಿಸಿದ್ದಾರೆ. ಅವರ ಬಿಡುಗಡೆಗಾಗಿ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಗ್ವಿ ಕೋರ್ಟ್ ನಲ್ಲಿ ವಾದಿಸಿದ್ದಾರೆ.


'ಅವರು ಮೂರು ದಿನಗಳ ಹಿಂದಿನವರೆಗೂ ಕುರ್ಚಿಯನ್ನು ಹೊಂದಿದ್ದರು. ಈಗ ಕುರ್ಚಿ ಇಲ್ಲ ಮತ್ತು ದಿಂಬು ಇಲ್ಲ' ಎಂದು ಸಿಂಗ್ವಿ ಹೇಳಿದರು. ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ' ಇದು ಸಣ್ಣ ಸಮಸ್ಯೆಯಾಗಿದ್ದು, ಅಲ್ಲಿ ಮೊದಲಿನಿಂದಲೂ ಯಾವುದೇ ಕುರ್ಚಿ ಇರಲಿಲ್ಲ ಎಂದು ತಿಳಿಸಿದರು.


ಪಿ ಚಿದಂಬರಂ ಅವರು  ಹಣಕಾಸು ಮಂತ್ರಿಯಾಗಿ 2007 ರಲ್ಲಿ ಐಎನ್‌ಎಕ್ಸ್ ಮೀಡಿಯಾ ಕಂಪನಿಗೆ ವಿದೇಶಿ ನಿಧಿಯನ್ನು ಭಾರಿ ಪ್ರಮಾಣದಲ್ಲಿ ಸೇರಿಸಿದ್ದಾರೆ ಎಂಬ ಆರೋಪವಿದೆ. ಅವರ ಪುತ್ರ ಕಾರ್ತಿ ಚಿದಂಬರಂ ಅವರು ಈ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದಕ್ಕಾಗಿ ಕಿಕ್‌ಬ್ಯಾಕ್ ಸ್ವೀಕರಿಸಿದ್ದಾರೆ ಎಂಬ ಆರೋಪವಿದೆ.