ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿಂದು ಮಂಡಿಸಿದ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟಿನಲ್ಲಿ ಸಾಮಾಜಿಕ ಯೋಜನೆಗಳು ಹಾಗೂ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದಾಗ್ಯೂ ಸಾರಿಗೆ ಭತ್ಯೆ ಹಾಗೂ ವೈದ್ಯಕೀಯ ಭತ್ಯೆಗಳಲ್ಲಿ ಮಾಡಲಾದ ಸಣ್ಣ-ಪುಟ್ಟ ಬದಲಾವಣೆಯಿಂದಾಗಿ ಸಾಸಿವೆಯಷ್ಟು ಪರಿಹಾರ ದೊರೆತಿದೆ. ಇದೇ ಮೊದಲ ಬಾರಿಗೆ ಸಾರಿಗೆ ಭತ್ಯೆಯಾಗಿ ವರ್ಷಕ್ಕೆ 19,200 ರೂ. ಹಾಗೂ ವೈದ್ಯಕೀಯ ಭತ್ಯೆಯಾಗಿ ವರ್ಷಕ್ಕೆ 40,000ರೂ. ವರೆಗೆ ವಿನಾಯಿತಿ ದೊರೆತಿದೆ.


COMMERCIAL BREAK
SCROLL TO CONTINUE READING

ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ನೀವು ಹಣ ಉಳಿಸುವ ಬಗೆ ಹೇಗೆ ಎಂಬುದನ್ನು ಲೆಕ್ಕ ಪರಿಶೋಧಕ ಮನೀಶ್ ಗುಪ್ತಾ ತಿಳಿಸಿದ್ದಾರೆ.


ಆದಾಯ 3 ಲಕ್ಷ ರೂ. ಆದಲ್ಲಿ
ನಿಮ್ಮ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಯಾಗಿದ್ದರೆ. ನೀವು 50,000 ರೂ.ಗೆ ತೆರಿಗೆ ಪಾವತಿಸಬೇಕು. ಒಂದುವೇಳೆ ನೀವು 40,000ರೂ.ಗಳಿಗೆ ತೆರಿಗೆ ವಿನಾಯಿತಿ ಪಡೆದಿದ್ದೆ ಆದರೆ 10,000 ರೂ.ಗಳಿಗೆ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ. ಇದು 500 ರೂ.ಗೆ ಶೇ.5ರಷ್ಟು ಆಗಿರುತ್ತದೆ. ಈ ರೀತಿಯಾಗಿ ನೀವು 2,000 ರೂ. ಉಳಿಸಬಹುದು.


ಆದಾಯ 6 ಲಕ್ಷ ರೂ. ಆದಲ್ಲಿ
ನಿಮ್ಮ ವಾರ್ಷಿಕ ಆದಾಯ 6 ಲಕ್ಷ ರೂಪಾಯಿಗಳಿದ್ದರೆ ಮತ್ತು ನೀವು ಯಾವುದೇ ರಿಯಾಯಿತಿಗಳನ್ನು ಪಡೆಯದಿದ್ದರೆ ನಿಮ್ಮ ತೆರಿಗೆಯ ಆದಾಯವು 3.5 ಲಕ್ಷ ರೂ. ಇದರಿಂದ ನೀವು 40 ಸಾವಿರ ರೂಪಾಯಿಗಳ ತೆರಿಗೆ ವಿನಾಯಿತಿ ಪಡೆಯುವ ಮೂಲಕ 3.10 ಲಕ್ಷ ರೂ.ಗೆ ಮಾತ್ರ ತೆರಿಗೆ ಪಾವತಿಸಬಹುದು. ನೀವು 3.5 ಲಕ್ಷ ರೂ.ಗೆ ಪಾವತಿಸಬೇಕಾದ ತೆರಿಗೆ ಮೊತ್ತ 32,500 ರೂಪಾಯಿ. 3.10 ಲಕ್ಷ ರೂ.ಗೆ ಪಾವತಿಸುವ ತೆರಿಗೆ ಮೊತ್ತ 24,500 ರೂ.. ಈ ರೀತಿಯಲ್ಲಿ ನೀವು 8000 ರೂಪಾಯಿಗಳನ್ನು ಉಳಿಸುತ್ತೀರಿ.


ಆದಾಯ 11 ಲಕ್ಷ ರೂ. ಆದಲ್ಲಿ
ನಿಮ್ಮ ವಾರ್ಷಿಕ ಆದಾಯ 11 ಲಕ್ಷ ರೂಪಾಯಿಗಳಿದ್ದರೆ ಮತ್ತು ನೀವು ಯಾವುದೇ ವಿನಾಯಿತಿಗಳನ್ನು ಪಡೆಯದಿದ್ದರೆ, 8.5 ಲಕ್ಷ ರೂ.ಗೆ ತೆರಿಗೆ ಪಾವತಿಸಬೇಕು. ಇದರಲ್ಲಿ ನೀವು 40 ಸಾವಿರ ರೂಪಾಯಿಗಳ ವಿನಾಯಿತಿಯನ್ನು ಪಡೆಯಬಹುದು. ಅಂದರೆ, ತೆರಿಗೆ ಪಾವತಿಸುವ ಆದಾಯವು 8.10 ಲಕ್ಷ ರೂಪಾಯಿಗಳಾಗುತ್ತದೆ. ಈ ವಿನಾಯಿತಿಯಿಂದ ನೀವು 1,42,500 ರೂ. ತೆರಿಗೆ ಪಾವತಿಸುವ ಬದಲು  ರೂ. 1,30,500 ತೆರಿಗೆಯನ್ನು ಪಾವತಿಸುತ್ತೀರಿ. ಈ ರೀತಿಯಲ್ಲಿ ನೀವು 12,000 ರೂ. ಉಳಿಸಬಹುದು.