ನವದೆಹಲಿ: ಗೃಹ ಸಚಿವಾಲಯ ವಿವಿಐಪಿ ರಕ್ಷಣೆಗೆ ಯಾವುದೇ ನೂತನ ಮಾರ್ಗಸೂಚಿಗಳನ್ನು ಸೂಚಿಸಿಲ್ಲ ಬದಲಾಗಿ ಇವೆಲ್ಲವುಗಳು ಕೂಡ ಮೊದಲೇ ಇದ್ದಂತಹವುಗಳು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ರೋಡ್ ಶೋಗಳಲ್ಲಿ ವಿವಿಐಪಿ ಭದ್ರತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನೇ ಮತ್ತೆ ಪುನರಾವರ್ತನೆ ಮಾಡಲಾಗಿದೆಯೆಂದು ಗೃಹ ಸಚಿವಾಲಯದ ಅಶೋಕ್ ಪ್ರಸಾದ್ ತಿಳಿಸಿದ್ದಾರೆ. ಮಾರ್ಗಸೂಚಿಗಳು / SOP ಗಳು ಹೊಸದಾಗಿ ರೂಪಿಸಿರುವುದು ಅಲ್ಲ ಬದಲಾಗಿ ಅವು ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪುನರಾವರ್ತನೆ ಗೊಳಿಸಿಲಾಗಿದೆ ಎಂದು ತಿಳಿದುಬಂದಿದೆ.
 
ಇತ್ತೀಚಿಗೆ 2019 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆಯೆಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.ಇದಕ್ಕೆ ಈಗ ಗೃಹ ಸಚಿವಾಲಯ ಇದಕ್ಕೆ ಸ್ಪಷ್ಟನೆ ನೀಡಿ ಮಾಧ್ಯಮಗಳ ಸುದ್ದಿಯನ್ನು ಅಲ್ಲಗಳೆದಿದೆ. 


ಇತ್ತೀಚೆಗೆ ಪುಣೆ ಪೋಲಿಸರು ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐದು ಜನರಲ್ಲಿ ಒಬ್ಬರು ನಿವಾಸದಿಂದ ವಶಪಡಿಸಿಕೊಂಡ ಪತ್ರವೊಂದರಲ್ಲಿ  ರಾಜೀವ್ ಗಾಂಧಿ- ರೀತಿಯಲ್ಲಿ ಪ್ರಧಾನಿ ಮೋದಿಯವರನ್ನು ಹತ್ಯೆಗೈಯುವ ಸುಳಿವು ಸಿಕ್ಕ ಹಿನ್ನಲೆಯಲ್ಲಿ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿತ್ತು ಎಂದು ವರದಿಯಾಗಿತ್ತು.