ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುತ್ತಾರೆ ಎಂದು ಭರವಸೆ ನೀಡಿದ ದೇವೇಂದ್ರ ಫಡ್ನವೀಸ್ ಸಿಎಂ ಪದವಿಗೆ 50:50 ಸೂತ್ರ ಅನ್ವಯದ ವಿಚಾರವನ್ನು ತಳ್ಳಿ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಶಿವಸೇನಾ ಮಹಾರಾಷ್ಟ್ರದಲ್ಲಿ ಸಿಎಂ ಪದವಿಗೆ 50:50 ಸೂತ್ರ ಅನ್ವಯವಾಗುವ ವಿಚಾರವಾಗಿ ಪದೆ ಪದೆ ಪ್ರಸ್ತಾಪಿಸುತ್ತಿರುವ ಹಿನ್ನಲೆಯಲ್ಲಿ ಈಗ ಫಡ್ನವಿಸ್ ಹೇಳಿಕೆ ನೀಡಿ. "ನಾನು ಸಿಎಂ ಆಗುತ್ತೇನೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಮಗೆ ಬಿ ಅಥವಾ ಸಿ ಯೋಜನೆ ಇಲ್ಲ, ಎ ಯೋಜನೆ ಮಾತ್ರ ಇದೆ' ಎಂದು ಫಡ್ನವಿಸ್ ಹೇಳಿದರು.ಬಿಜೆಪಿ-ಸೇನಾ ಮೈತ್ರಿಕೂಟದಲ್ಲಿ ಸಮತೋಲನ ಕುರಿತು ಶಿವಸೇನೆ ನಡೆಸುತ್ತಿರುವ ಟೀಕೆಗಳನ್ನು ದೇವೇಂದ್ರ ಫಡ್ನವೀಸ್ ತಳ್ಳಿಹಾಕಿದರು.


ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಮಾಡಿದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಫಡ್ನವಿಸ್, ಸಾಮ್ನಾದ ಪಾತ್ರ ಮಾತುಕತೆ ಹಳಿ ತಪ್ಪಿಸುವುದು. ಶಿವಸೇನೆಗೆ 5 ವರ್ಷಗಳ ಕಾಲ ಸಿಎಂ ಹುದ್ದೆ ಬೇಕಾಗಬಹುದು, ಏನನ್ನಾದರೂ ಬಯಸುವುದು ಮತ್ತು ಏನನ್ನಾದರೂ ಪಡೆಯುವುದು ಎರಡು ವಿಭಿನ್ನ ಸಂಗತಿ. ಸಿಎಂ ಹುದ್ದೆಗೆ 50:50 ಸೂತ್ರದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಅವರು ಬೇಡಿಕೆಗಳೊಂದಿಗೆ ಬರಬೇಕು, ನಾವು ಮಾತುಕತೆಗೆ ಕುಳಿತಾಗ ಅದರ ಅರ್ಹತೆಯ ಬಗ್ಗೆ ಚರ್ಚಿಸುತ್ತೇವೆ ಎಂದು ಫಡ್ನವೀಸ್ ಹೇಳಿದರು.


ಮಹಾರಾಷ್ಟ್ರ ಸಿಎಂ ಅಧಿಕಾರಾವಧಿಯ ಸಮಾನ ವಿಭಾಗವನ್ನು ಎಂದಿಗೂ ಶಿವಸೇನೆಗೆ ನೀಡಲಾಗುವುದಿಲ್ಲ ಎಂದು ಫಡ್ನವೀಸ್ ವಾದಿಸಿದರು.