ಈ 10 ಐತಿಹಾಸಿಕ ಪ್ರವಾಸಿ ತಾಣಗಳಿಗೆ ರಾತ್ರಿ 9 ಗಂಟೆಯವರೆಗೂ ಭೇಟಿ ನೀಡಬಹುದು..!
ಭಾರತೀಯ ಪುರಾತತ್ವ ಸರ್ವೇಕ್ಷಣಾ ಕೇಂದ್ರದ ವ್ಯಾಪ್ತಿಯಲ್ಲಿರುವ 10 ಐತಿಹಾಸಿಕ ಸ್ಮಾರಕಗಳ ಭೇಟಿ ಸಮಯವನ್ನು ಪ್ರವಾಸಿಗರಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೋಮವಾರ ಪ್ರಕಟಿಸಿದ್ದಾರೆ.ವಿಶೇಷವೆಂದರೆ ಇದರಲ್ಲಿ ಕರ್ನಾಟಕದ ಎರಡು ಪ್ರೇಕ್ಷಣಿಯ ಸ್ಥಳಗಳು ಸ್ಥಾನ ಪಡೆದಿವೆ.
ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಕೇಂದ್ರದ ವ್ಯಾಪ್ತಿಯಲ್ಲಿರುವ 10 ಐತಿಹಾಸಿಕ ಸ್ಮಾರಕಗಳ ಭೇಟಿ ಸಮಯವನ್ನು ಪ್ರವಾಸಿಗರಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೋಮವಾರ ಪ್ರಕಟಿಸಿದ್ದಾರೆ.ವಿಶೇಷವೆಂದರೆ ಇದರಲ್ಲಿ ಕರ್ನಾಟಕದ ಎರಡು ಪ್ರೇಕ್ಷಣಿಯ ಸ್ಥಳಗಳು ಸ್ಥಾನ ಪಡೆದಿವೆ.
ಭುವನೇಶ್ವರದಲ್ಲಿರುವ ರಾಜಾ ರಾಣಿ ದೇವಾಲಯ ಸಂಕೀರ್ಣ, ಮಧ್ಯಪ್ರದೇಶಚಟ್ಟರ್‌ಪುರದ ದುಲ್ಹಾದಿಯೋ ದೇವಸ್ಥಾನ (ಖಜುರಾವ್), ಕುರುಕ್ಷೇತ್ರದಲ್ಲಿ ಶೇಖ್ ಚಿಲ್ಲಿ ಸಮಾಧಿ, ದೆಹಲಿಯ ಸಫ್ದರ್ಜಂಗ್ ಸಮಾಧಿ ಮತ್ತು ಹುಮಾಯೂನ್ ಸಮಾಧಿ, ಕರ್ನಾಟಕದ ಪಟ್ಟದ ಬಾಗಲಕೋಟೆ ಜಿಲ್ಲೆಯಲಿರುವ ಪಟ್ಟದಕಲ್ಲಿನ ಸ್ಮಾರಕಗಳು, ವಿಜಯಪುರದ ಗೋಲ್ ಗುಂಬಜ್ , ಮಹಾರಾಷ್ಟ್ರದ ಗಡಚಿರೋಲಿಯಲ್ಲಿರುವ ದೇವಸ್ತಾನಗಳು,ವಾರಣಾಸಿಯ ಮ್ಯಾನ್ ಮಹಲ್ ಮತ್ತು ರಾಣಿ ಕಿ ವಾವ್, ಈ ಸ್ಮಾರಕಗಳು ಈಗ ಸೂರ್ಯೋದಯದಿಂದ ಸಂಜೆ 9 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತವೆ ಎಂದು ಸಚಿವರು ಹೇಳಿದ್ದಾರೆ.
ಭಾರತದಲ್ಲಿನ ಐತಿಹಾಸಿಕ ಸ್ಮಾರಕಗಳು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಭೇಟಿ ನೀಡುವ ಸಮಯವನ್ನು ವಿಸ್ತರಿಸುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿಗೆ ಆಗಬಹುದು. ಎಎಸ್ಐನ ರಕ್ಷಣೆಯಲ್ಲಿರುವ ಈ 10 ಐತಿಹಾಸಿಕ ಪ್ರವಾಸಿ ತಾಣಗಳಿಗೆ ರಾತ್ರಿ 9 ಗಂಟೆಯವರೆಗೂ ಭೇಟಿ ನೀಡಬಹುದು..! ಈ ಹೆಚ್ಚಿನ ಸ್ಮಾರಕಗಳಲ್ಲಿ ಪ್ರವೇಶ ಶುಲ್ಕವನ್ನು ವಿಧಿಸುವುದರಿಂದ ಇದು ಹೆಚ್ಚಿನ ಆದಾಯವನ್ನು ತರಬಲ್ಲದು. ಎಎಸ್ಐ ಪುರಾತತ್ವ ಸಂಶೋಧನೆ ಇಲಾಖೆ ಮತ್ತು ದೇಶದ ಸಾವಿರಾರು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇತರ ಸ್ಮಾರಕಗಳ ಹಲವು ಭೇಟಿ ಸಮಯಗಳನ್ನು ಸಹ ವಿಸ್ತರಿಸಬಹುದು.