Ration Card: ರೇಷನ್ ಕಾರ್ಡ್ದಾರರಿಗೆ ಸಿಗಲಿದೆ ಕಾಂಡೋಮ್ ಜೊತೆ ಈ 46 ವಸ್ತುಗಳು!
UP Ration Card: ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಲಭ್ಯವಿದೆ.
ನವದೆಹಲಿ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು ಉಚಿತ ಪಡಿತರದಲ್ಲಿ ಅಕ್ಕಿ, ರಾಗಿ, ಗೋಧಿ ಜೊತೆಗೆ 46 ವಸ್ತುಗಳನ್ನು ವಿತರಿಸಲು ಪಟ್ಟಿ ತಯಾರಿಸಿದೆ. ಈ ಪಟ್ಟಿಯ ಪ್ರಕಾರ ಉತ್ತರಪ್ರದೇಶ ರಾಜ್ಯದ ಜನತೆಗೆ ಉಚಿತವಾಗಿ ಕಾಂಡೋಮ್, ಸ್ಯಾನಿಟರಿ ಪ್ಯಾಡ್‌ಗಳು ಸಹ ದೊರೆಯಲಿವೆ. ಯುಪಿ ಸರ್ಕಾರವು ತನ್ನ ರಾಜ್ಯದ ಜನತೆಗೆ ಉಚಿತವಾಗಿ ನೀಡಲಿರುವ 46 ವಸ್ತುಗಳು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳು ಇನ್ನು ಕಟ್ಟಲೇ ಬೇಕು ಈ ತೆರಿಗೆ !ಇದು ಸುಪ್ರೀಂ ಕೋರ್ಟ್ ಆದೇಶ
ಕಾಫಿ, ಹಾಲು ಮತ್ತು ಹಾಲಿನ ಪ್ಯಾಕೆಟ್
ಟೂತ್‌ಪೇಸ್ಟ್
ನಮ್ಕೀನ್
ಬಿಸ್ಕತ್ತುಗಳು
ಬ್ರೆಡ್
ಡ್ರೈ ಫ್ರೂಟ್ಸ್
ಮಸಾಲೆಗಳು
ಟೀ ಪ್ಯಾಕೆಟ್
ಶಾಂಪೂ
ಸೋಪು
ಆಡಳಿತ ಸಾಮಗ್ರಿ
ರಾಜ್ಮಾ
ಕ್ರೀಮ್
ಸೋಯಾ ಬೀನ್
ಕನ್ನಡಿ
ಸಿಹಿ ತಿಂಡಿ
ಪ್ಯಾಕ್ ಮಾಡಿದ ಹಾಲಿನ ಪುಡಿ
ಬೇಬಿ ಬಟ್ಟೆಗಳು
ಬಾಚಣಿಗೆ
ವಾಷಿಂಗ್ ಪೌಡರ್
ಟೂತ್ ಬ್ರಷ್
ಧೂಪದ್ರವ್ಯ
5KG ಗ್ಯಾಸ್ ಸಿಲಿಂಡರ್
ಸೊಳ್ಳೆ ಪರದೆ
ಪಾತ್ರೆ ತೊಳೆಯುವ ಬಾರ್
ಟಾರ್ಚ್
ವಿದ್ಯುತ್ ಪರಿಕರ
ಗೋಡೆ ಗಡಿಯಾರ
ಬೆಂಕಿ ಕಡ್ಡಿ
ಬೀಗ
ಛತ್ರಿ
ಪೊರಕೆ
ವಾಲ್ ಹ್ಯಾಂಗರ್
ರೇನ್‌ಕೋಟ್
ಬೂಟುಗಳು
ನೈಲಾನ್/ಪ್ಲಾಸ್ಟಿಕ್ ಹಗ್ಗ
ನೀರಿನ ಪೈಪ್
ಮಿನರಲ್ ವಾಟರ್
ಹ್ಯಾಂಡ್ ವಾಶ್
ಪ್ಲಾಸ್ಟಿಕ್
ಬಾತ್ರೂಮ್ ಕ್ಲೀನರ್
ಶೇವಿಂಗ್ ಕ್ರೀಮ್
ಬೇಬಿ ಕೇರ್ ಉತ್ಪನ್ನ
ಸಾಬೂನು
ಡೈಪರ್‌ಗಳು
ಮಸಾಜ್ ಆಯಿಲ್
ಸ್ಯಾನಿಟರಿ ನ್ಯಾಪ್‌ಕಿನ್
ಕಾಂಡೋಮ್
ವೈಬ್ಸ್ ಬಾಡಿ ಲೋಷನ್
ʼಒನ್ ನೇಶನ್ ಒಂದೇ ರೇಷನ್!: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬಗಳನ್ನು ಗುರುತಿಸಿ APL/BPL/AAY ಎನ್ನುವ 3 ಮಾದರಿಯ ಪಡಿತರ ಚೀಟಿಯನ್ನು ಜನರಿಗೆ ನೀಡಲಾಗುತ್ತಿದೆ. ಈ ಪಡಿತರ ವ್ಯವಸ್ಥೆಗೆ ರಾಜ್ಯ ಸರ್ಕಾರದ ಸಹಭಾಗಿತ್ವ ಕೂಡ ಇರುತ್ತದೆ.
ಈ ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ನೀಡುತ್ತಿವೆ. ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತ ಮತ್ತು ಕನಿಷ್ಠ ಬೆಲೆಗೆ ತಿಂಗಳ ಬಳಕೆಯ ಆಹಾರ ಧಾನ್ಯಗಳನ್ನು ನೀಡುವುದು ಇದರ ಉದ್ದೇಶವಾಗಿದೆ. ಸದ್ಯ ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಈಗ ಲಭ್ಯವಿರುತ್ತದೆ. ಇದು ಕೆಲಸದ ನಿಮಿತ್ತ ವಿವಿಧ ಪ್ರದೇಶಕ್ಕೆ ಹೋಗುವ ಜನರಿಗೆ ಅನುಕೂಲ ಆಗುತ್ತಿದೆ.
ಇದನ್ನೂ ಓದಿ: Gold Rate Today: ಅಕ್ಷಯ ತೃತೀಯ ಕಾರಣಕ್ಕೆ ಅಧಿಕ ಮಟ್ಟ ತಲುಪಿದ ಚಿನ್ನದ ಬೆಲೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.