Coronavirus: ರಾಷ್ಟ್ರ ರಾಜಧಾನಿಯಲ್ಲಿ ಈ 5 ಸ್ಥಳಗಳಲ್ಲಿ ಕರೋನಾ ವೇಗವಾಗಿ ಹೆಚ್ಚುತ್ತಿದೆಯಂತೆ
ಹಬ್ಬಗಳ ಸಮಯದಲ್ಲಿ ಕಿಕ್ಕಿರಿದು ತುಂಬಿರುವ ಮಾರುಕಟ್ಟೆಗಗಳಿಗೆ ಶಾಪಿಂಗ್ ಗಾಗಿ ತೆರಳುವುದು ಎಂದರೆ ಕರೋನಾವೈರಸ್ ಅನ್ನು ಆಹ್ವಾನಿಸಿದಂತೆಯೇ ಸರಿ. ಇದಕ್ಕೆ ಸಾಕ್ಷಿ ಎಂಬಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರುಕಟ್ಟೆಗಳು ಸೇರಿದಂತೆ ಈ ಐದು ಸ್ಥಳಗಳನ್ನು ಕರೋನಾ ಸೂಪರ್ ಸ್ಪ್ರೆಡರ್ ಎಂದು ಹೇಳಲಾಗುತ್ತಿದೆ.
ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಕರೋನಾವೈರಸ್ ಅಬ್ಬರ ಜೋರಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಕರೋನಾವೈರಸ್ ವೇಗವಾಗಿ ಹರಡುತ್ತಿರುವುದು ಜನ ಸಾಮಾನ್ಯರ ನಿದ್ದೆಗೆಡಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಕೋವಿಡ್ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ಹಬ್ಬಗಳ ಸಮಯದಲ್ಲಿ ಕಿಕ್ಕಿರಿದು ತುಂಬಿರುವ ಮಾರುಕಟ್ಟೆಗಗಳಿಗೆ ಶಾಪಿಂಗ್ ಗಾಗಿ ತೆರಳುವುದು ಎಂದರೆ ಕರೋನಾವೈರಸ್ ಅನ್ನು ಆಹ್ವಾನಿಸಿದಂತೆಯೇ ಸರಿ. ಇದಕ್ಕೆ ನಿದರ್ಶನ ಎಂಬಂತೆ ರಾಷ್ಟ್ರ ರಾಜಧಾನಿ ದೆಹಲಿ (Delhi) ಯಲ್ಲಿ ಮಾರುಕಟ್ಟೆಗಳು ಸೇರಿದಂತೆ ಈ ಐದು ಸ್ಥಳಗಳನ್ನು ಕರೋನಾ ಸೂಪರ್ ಸ್ಪ್ರೆಡರ್ ಎಂದು ಹೇಳಲಾಗುತ್ತಿದೆ. ಜೊತೆಗೆ ಇಂತಹ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ - Imran Khan: ಕರೋನಾ ನಿಯಮಗಳನ್ನು ಉಲ್ಲಂಘಿಸಿ ನೆಟ್ಟಿಗರ ಟೀಕೆಗೆ ಗುರಿಯಾದ ಪಾಕ್ ಪ್ರಧಾನಿ
ಕರೋನಾ ಸೂಪರ್ ಸ್ಪ್ರೆಡರ್ ಸ್ಥಳಗಳಿವು:
ಸಿನೆಮಾ ಹಾಲ್‌ಗಳು, ಮೆಟ್ರೋ ನಿಲ್ದಾಣಗಳು (Metro Stations), ಸಾಪ್ತಾಹಿಕ ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು ಮತ್ತು ದೆಹಲಿಯ ಮಾಲ್‌ಗಳನ್ನು ಕರೋನಾ (Coronavirus) ಸೂಪರ್ ಸ್ಪ್ರೆಡರ್‌ಗಳು ಎಂದು ವಿವರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಏಕೆಂದರೆ ಸಾಮಾನ್ಯವಾಗಿ, ಈ ಸ್ಥಳಗಳು ಕಿಕ್ಕಿರಿದು ತುಂಬಿರುತ್ತವೆ ಮತ್ತು ಎಲ್ಲರೂ ಕರೋನಾ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗುತ್ತಿದೆ.
ಇದನ್ನೂ ಓದಿ - Coronavirus: ಕರೋನಾದಿಂದ ರಕ್ಷಿಸಬಹುದಾದ ಹ್ಯಾಂಡ್ ಸ್ಯಾನಿಟೈಜರ್‌ಗಳಿಂದ ಕ್ಯಾನ್ಸರ್ ಅಪಾಯ
ವಾಸ್ತವವಾಗಿ ದೇಶದಲ್ಲಿ ಮಹಾರಾಷ್ಟ್ರ (Maharashtra), ಗುಜರಾತ್, ಪಂಜಾಬ್, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚಿನ ಕರೋನಾ ಪ್ರಕರಣಗಳು ಕಂಡುಬರುತ್ತಿವೆ. ಏತನ್ಮಧ್ಯೆ, ಹೋಳಿ ಹಬ್ಬದ ಕಾರಣ, ಮಾರುಕಟ್ಟೆಗಳಲ್ಲಿ ಜನಸಂದಣಿ ಸ್ವಲ್ಪ ಹೆಚ್ಚಾಗಿದೆ. ಈ ಸಂದರ್ಭದಲ್ಲಿ, ಕರೋನಾ ಸೋಂಕು ಹರಡುವ ಅಪಾಯ ಹೆಚ್ಚು. ಈ ಕಾರಣಕ್ಕಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಹೋಳಿ ಆಡಲು ಆಡಳಿತವು ಅನುಮತಿ ನೀಡಿಲ್ಲ. ಎಪ್ರಿಲ್ ತಿಂಗಳಲ್ಲೂ ಹಬ್ಬಗಳು, ಮದುವೆ ಸಮಾರಂಭಗಳು ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಜನಸಂದಣಿ ಕೊಂಚ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಜನರು ಅನಗತ್ಯವಾಗಿ ಮಾರುಕಟ್ಟೆಗಳಿಗೆ ಹೋಗದಿರುವುದು ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.