ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು 18 ಸಾವಿರ ರೂ.ಗಳಿಂದ 26 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕು ಎಂಬ ಬೇಡಿಕೆಯ ನಡುವೆಯೇ ಈ ರಾಜ್ಯದ ಶಿಕ್ಷಕರಿಗೆ ಬೇಸರದ ಸಂಗತಿ ಕಾದಿದೆ. ಒಡಿಶಾದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಶಿಕ್ಷಕರಿಗೆ ರಾಜ್ಯ ಸರಕಾರ ಒಂದು ನಿಯಮ ಜಾರಿ ಮಾಡುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಕೆಲಸದಲ್ಲಿ ಪಾಲ್ಗೊಳ್ಳದೆ ಧರಣಿ, ಪ್ರತಿಭಟನೆಗಳಲ್ಲಿ ನಿರತರಾಗುವ ಶಿಕ್ಷಕರಿಗೆ 'ನೋ ಪೇ ನೋ ವರ್ಕ್' ಅಡಿಯಲ್ಲಿ ಆ ದಿನದ ವೇತನ ಕಡಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರ ಶಿಕ್ಷಣ ಇಲಾಖೆ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ಒಂದೆಡೆ ರಾಜಸ್ತಾನ,  ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ಶಿಕ್ಷಕರ ವೇತನ ಹೆಚ್ಚಿಸುವ ಕುರಿತು ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಒಡಿಶಾದಲ್ಲಿ ಸರ್ಕಾರ ವೇತನ ಕಡಿತಗೊಳಿಸುವ ಮಾತನಾಡುತ್ತಿದೆ. 


ಒಡಿಶಾ ಸೇರಿದಂತೆ 3 ರಾಜ್ಯಗಳಲ್ಲಿ ಶಿಕ್ಷಕರಿಂದ ಧರಣಿ
ಜೀ ವಾಹಿನಿಯ ಸಹೋದರ ಸಂಸ್ಥೆ india.com ವರದಿಯ ಪ್ರಕಾರ, 7 ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೇವಲ ಒಡಿಶಾದಲ್ಲಿ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕೂಡ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ದೆಹಲಿಯ ಜಂತರ್ ಮಂತರ್ ನಲ್ಲಿಯೂ ಕೂಡ ಕಳೆದ ವಾರ ಈ ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಬಿಹಾರದಲ್ಲಿ ಸರ್ಕಾರದ ವಿರುದ್ಧ ಶಿಕ್ಷಕರು ಬೃಹತ್ ಆಂದೋಲನವನ್ನೇ ನಡೆಸುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎನ್ನಲಾಗಿದೆ.