ಈ ಯುವತಿಯರಿಗೆ ಪೊಲೀಸರ ಅವಶ್ಯಕತೆ ಇಲ್ವಂತೆ; ಯಾಕೆ ಗೊತ್ತಾ?
ನಮ್ಮನ್ನು ಬೇರೆಯವರು ರಕ್ಷಿಸುತ್ತಾರೆ ಎಂದು ಕಾದು ಕುಳಿತುಕೊಳ್ಳುವ ಬದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿದ್ಯಾರ್ಥಿನಿಯರು ನಿರ್ಧರಿಸಿದ್ದಾರೆ.
ವಡೋದರಾ: ದೇಶಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ಬಗ್ಗೆ ದೇಶವಾಸಿಗಳಲ್ಲಿ ಕೋಪವಿದೆ, ಆದ್ದರಿಂದ ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಮತ್ತು ಕೆಲ ಮನೆ ಬಿಡಲು ತುಂಬಾ ಹೆದರುತ್ತಾರೆ. ಆದರೆ ವಡೋದರಾದ ಎಂ.ಎಸ್. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪೊಲೀಸರನ್ನು ನಂಬದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದನ್ನು ನೋಡಿದ ವಡೋದರಾ ಪೊಲೀಸರ ವೈಫಲ್ಯವನ್ನೂ ಪರಿಗಣಿಸಲಾಗುತ್ತಿದೆ. ಏಕೆಂದರೆ ವಡೋದರಾದ ನವಲಖಿ ಮೈದಾನದಲ್ಲಿ ಅತ್ಯಾಚಾರ ಎಸಗಿದ್ದ ಆರೋಪಿಗಳು ಕಳೆದ 8 ದಿನಗಳಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದು, ಪೊಲೀಸರಿಗೆ ಆವರ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಹೈದರಾಬಾದ್, ದೆಹಲಿ, ಕಥುವಾ, ಉನ್ನಾವೊ ಅಥವಾ ಗುಜರಾತ್‌ನ ವಡೋದರಾ ಎಲ್ಲೇ ಇರಲಿ ಇತ್ತೀಚಿಗೆ ಎಲ್ಲೆಡೆ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇವೆ. ನಗರಗಳಲ್ಲಿ ಅತ್ಯಾಚಾರ ಪ್ರಕರಣಗಳನ್ನು ನೋಡಿದ ದೇಶದ ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಎನ್ನುವುದನ್ನು ಯಾರೂ ನಿರಾಕರಿಸಲಾಗುವುದಿಲ್ಲ, ಆದರೆ ಪ್ರಶ್ನೆ, ಹೀಗೆ ಎಷ್ಟು ಸಮಯ? ದೇಶವನ್ನು ಭಯೋತ್ಪಾದನೆಯಿಂದ ಸುರಕ್ಷಿತವಾಗಿರಿಸುವುದರ ಮೂಲಕ ಯಾವುದೇ ಸರ್ಕಾರವು ತನ್ನನ್ನು ಪ್ರಬಲ ಸರ್ಕಾರವೆಂದು ಪರಿಗಣಿಸಲು ಏಕೆ ಸಾಧ್ಯವಿಲ್ಲ. ಕಾರಣ ದೇಶದ ಗಡಿ ಭಾಗಗಳನ್ನು ಭಯೋತ್ಪಾದಕರಿಂದ ರಕ್ಷಿಸುವಂತೆ, ದೇಶದ ಹೆಣ್ಣುಮಕ್ಕಳನ್ನು ಕಾಮುಕರಿಂದ ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕದಿದ್ದರೆ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಓಡಾಡುವುದಾದರೂ ಹೇಗೆ...? ಎಂಬುದು ಹಲವರ ಪ್ರಶ್ನೆ.
ದೇಶಾದ್ಯಂತ ಅತ್ಯಾಚಾರದ ಸುದ್ದಿ ಬರುತ್ತಿರುವ ಹಿನ್ನೆಲೆಯಲ್ಲಿ, ವಡೋದರಾ ಎಂ.ಎಸ್. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ದೇಶದ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವವರಿಗೆ ತಕ್ಕ ಶಾಸ್ತಿಯಾಗಲಿದೆ.
ವಾಸ್ತವವಾಗಿ, ವಡೋದರಾ ಎಂಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಬಳಿ ತೀಕ್ಷ್ಣವಾದ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಪ್ರಾರಂಭಿಸಿದ್ದಾರೆ. ಹುಡುಗಿಯರು ಕಾಲೇಜಿಗೆ ಹೋಗುವಾಗ ಈ ಶಸ್ತ್ರಾಸ್ತ್ರಗಳನ್ನು ತಮ್ಮ ಬ್ಯಾಗ್ ಗಳಲ್ಲಿ ಮತ್ತು ಕಾರಿನ ಕೀಲಿಗಳಲ್ಲಿ ಇಡುತ್ತಾರೆ. ವಿದ್ಯಾರ್ಥಿಗಳು ಚಾಕು, ಕಟ್ಟರ್, ಮೆಣಸಿನ ಪುಡಿ ಮತ್ತು ಇತರ ತೀಕ್ಷ್ಣ ವಸ್ತುಗಳನ್ನು ತಮ್ಮೊಡನೆ ಕೊಂಡೊಯ್ಯಲು ಪ್ರಾರಂಭಿಸಿದ್ದಾರೆ.
ನಮಗೆ ಯಾವ ಪೊಲೀಸರ ಅವಶ್ಯಕತೆ ಇಲ್ಲ. ನಮ್ಮನ್ನು ಬೇರೆಯವರು ರಕ್ಷಿಸುತ್ತಾರೆ ಎಂದು ಕಾದು ಕುಳಿತುಕೊಳ್ಳುವ ಬದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ನಿರ್ಧರಿಸಿರುವುದಾಗಿ ತಿಳಿಸಿದ ವಿದ್ಯಾರ್ಥಿನಿಯರು, ಇಂದಿನಿಂದ, ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ಯಾರಾದರೂ ನಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯವೆಸಗಳು ಮುಂದಾದರೆ ಅಥವಾ ಪ್ರಯತ್ನಿಸಿದರೆ ಅದರಿಂದಾಗುವ ಪರಿಣಾಮಕ್ಕೆ ಅವರೇ ಜವಾಬ್ದಾರರು. ನಾವು(ಹೆಣ್ಣು ಮಕ್ಕಳು) ಎಷ್ಟು ದಿನ ಹೀಗೆ ಹೆದರಿ ಬದುಕಬೇಕು? ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.