Assembly Election 2021: ಪಂಚರಾಜ್ಯಗಳ ಚುನಾವಣೆಯಲ್ಲಿ ಇವರಿಗೆ ಸಿಗಲ್ಲ Postal Voting ಸೌಲಭ್ಯ
ವಿದ್ಯುನ್ಮಾನವಾಗಿ ಹರಡುವ ಅಂಚೆ ಬ್ಯಾಲೆಟ್ ವ್ಯವಸ್ಥೆ (ETPBS) ಮೂಲಕ ಭಾರತದಿಂದ ಹೊರಗಡೆ ವಾಸಿಸುವ ಜನರು ಮತ ಚಲಾಯಿಸಲು ಸಾಧ್ಯವಿದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಉತ್ತರಿಸಿದರು.
ನವದೆಹಲಿ: ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಯನ್ನು (Assembly Election) ಪ್ರಕಟಿಸಿದೆ. ಪಶ್ಚಿಮ ಬಂಗಾಳ, ಪುದುಚೇರಿ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ನಿನ್ನೆ ದಿನಾಂಕ ಪ್ರಕಟಿಸಿದೆ. ಆದರೆ ಈ ಚುನಾವಣೆಯಲ್ಲಿ ಮೊದಲ ಬಾರಿಗೆ, ದೇಶದ ಹೊರಗೆ ವಾಸಿಸುವ ಭಾರತೀಯರಿಗೆ ಅಂಚೆ ಮತದಾನದ ಅವಕಾಶ ಸಿಗುವುದಿಲ್ಲ.
ಚುನಾವಣಾ ಆಯೋಗ ಈ ಉತ್ತರವನ್ನು ನೀಡಿತು :
ವಿದ್ಯುನ್ಮಾನವಾಗಿ ಹರಡುವ ಅಂಚೆ ಬ್ಯಾಲೆಟ್ ವ್ಯವಸ್ಥೆ (ETPBS) ಮೂಲಕ ಭಾರತದಿಂದ ಹೊರಗಡೆ ವಾಸಿಸುವ ಜನರು ಮತ ಚಲಾಯಿಸಲು ಸಾಧ್ಯವಿದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ (Sunil Arora) ಅವರು ಉತ್ತರಿಸಿದರು. ಐದು ರಾಜ್ಯಗಳಿಗೆ ಚುನಾವಣೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆಯಲಿದೆ. ಎನ್‌ಆರ್‌ಐ (NRI) ಮತದಾರರಿಗೆ ಒಂದೂವರೆ ತಿಂಗಳ ಮೊದಲು ನಾವು ಕಾನೂನು ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದೇವೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಇದರ ನಂತರ ಕಾನೂನು ಸಚಿವಾಲಯವು ಈ ವಿಷಯವನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿತು. ನಾನು ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಮಾತನಾಡಿದೆ. ಅವರೊಂದಿಗಿನ ಸಂಭಾಷಣೆ ತುಂಬಾ ಸಕಾರಾತ್ಮಕವಾಗಿತ್ತು. ಆದರೆ ಅದರ ಬಗ್ಗೆ ಸಭೆ ನಡೆಯಬೇಕಿದೆ. ಇದು ಈಗ ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ - Election Commission: ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ: ಇಲ್ಲಿದೆ ಫುಲ್ ಮಾಹಿತಿ!
ಇದರ ನಂತರ, ಐದು ರಾಜ್ಯಗಳಲ್ಲಿ ಎನ್‌ಆರ್‌ಐ (NRI) ಜನರಿಗೆ ಇಟಿಪಿಬಿಎಸ್ (ETPBS) ಸೌಲಭ್ಯದ ಲಭ್ಯತೆಯನ್ನು ಪ್ರಶ್ನಿಸಿದಾಗ, ಈ ಚುನಾವಣೆಗಳಲ್ಲಿ ಬಹುಶಃ ಅದು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ - Unlock 5.O: ಕೇಂದ್ರ ಸರ್ಕಾರದಿಂದ ಮಾ.31ರವರೆಗೆ 'ಅನ್ ಲಾಕ್ 5.0 ಮಾರ್ಗಸೂಚಿ' ವಿಸ್ತರಣೆ!
ಅನಿವಾಸಿ ಭಾರತೀಯರಿಗೂ ಮತದಾನಕ್ಕೆ ಅವಕಾಶ:
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಇಲ್ಲಿಯವರೆಗೆ, ವಿದೇಶದಲ್ಲಿ ವಾಸಿಸುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಆಯಾ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಿದ್ದಾರೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಅಂತಹ ಮತದಾರರ ಸಂಖ್ಯೆ ಕೇವಲ 10 ರಿಂದ 12 ಸಾವಿರಗಳಷ್ಟಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಎನ್‌ಆರ್‌ಐ ಮತದಾರರಿಗಾಗಿ ನಾವು ಇಟಿಪಿಬಿಎಸ್ ವ್ಯವಸ್ಥೆಯನ್ನು ಜಾರಿಗೆ ತರಬಹುದು ಎಂದು ಕಾನೂನು ಸಚಿವಾಲಯ ಹೇಳಿದ್ದರೂ, ಈ ಬಾರಿ ಚುನಾವಣೆಯಲ್ಲಿ ಚುನಾವಣಾ ಆಯೋಗ ಅದನ್ನು ಮಾಡಲು ನಿರಾಕರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.