ನವದೆಹಲಿ:ಫೆಬ್ರವರಿ 1, 2020ರಿಂದ ಕೇಂದ್ರ ಸರ್ಕಾರ ಆರ್ಥಿಕ ಆಯವ್ಯಯ ಮಂಡಿಸಲಿದೆ. ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಭಾರಿ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜನಸಾಮಾನ್ಯರಿಗೆ ಹಲವು ಯೋಜನೆಗಳನ್ನು ಹೊತ್ತು ತರಲಿದ್ದಾರೆ ಎನ್ನಲಾಗಿದೆ. ಆದರೂ ಸಹಿತ ಹಲವು  ಸಂಗತಿಗಳಲ್ಲಿ ಬದಲಾವಣೆಯಾಗುತ್ತಿದ್ದು, ನಿಮ್ಮ ಜೇಬಿಗೆ ಭಾರಿಯಾಗಿ ಪರಿಣಮಿಸಲಿವೆ. ಬನ್ನಿ ಹಾಗಾದರೆ ಯಾವ ಯಾವ ಬದಲಾವಣೆಗಳು ಆಗಲಿವೆ ಎಂಬುದನ್ನು ನೋಡೋಣ.


COMMERCIAL BREAK
SCROLL TO CONTINUE READING

LICಯ 23 ಪಾಲಸಿಗಳು ಬಂದ್ ಆಗಲಿವೆ
ಭಾರತೀಯ ಜೀವ ವಿಮಾ ನಿಗಮ 31 ಜನವರಿ 2020ಕ್ಕೆ ತನ್ನ ಒಟ್ಟು 23 ವಿಮಾ ಪಾಲಸಿಗಳನ್ನು ಬಂದ್ ಮಾಡಲಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನವೆಂಬರ್ 2019ರಲ್ಲಿ ಅಧಿಸೂಚನೆಯೊಂದನ್ನು ಜಾರಿಗೊಳಿಸಿ, ಹೊರ ಪ್ರಾಡಕ್ಟ್ ಮಾರ್ಗ ಸೂಚಿಗಳಿಗೆ ಅನುಗುಣವಾಗಿರದ ಪಾಲಸಿಗಳನ್ನು ಹಿಂಪಡೆಯುವಂತೆ ವಿಮಾ ಕಂಪನಿಗಳಿಗೆ ಸೂಚಿಸಿದೆ. ಇದಕ್ಕಾಗಿ ಈ ಮೊದಲು ನವೆಂಬರ್ 30ರವರೆಗೆ ಪ್ರಾಧಿಕಾರ ಗಡುವು ನೀಡಿತ್ತು, ಬಳಿಕ ಅದನ್ನು ಜನವರಿ 31ರವರೆಗೆ ವಿಸ್ತರಿಸಿದೆ.


ವಾಟ್ಸ್ ಆಪ್ ಗೆ ಸಂಬಂಧಿಸಿದನೆ ಈ ದೊಡ್ಡ ಬದಲಾವಣೆ ಆಗಲಿದೆ
ಕಳೆದ ವರ್ಷ ಈ ಕುರಿತು ಘೋಷಣೆ ಮಾಡಿದ್ದ ವಾಟ್ಸ್ ಆಪ್, ಫೆಬ್ರವರಿ 1, 2020ರ ನಂತರ iOS8 ಅಥವಾ ಅದಕ್ಕಿಂತ ಹಳೆಯ ಆವ್ರುತ್ತಿಗಳಲ್ಲಿನ ವಾಟ್ಸ್ ಆಪ್ ಗೆ ತನ್ನ ಸಪೋರ್ಟ್ ಸ್ಥಗಿತಗೊಳಿಸಲಿದೆ. ಅಷ್ಟೇ ಅಲ್ಲ ಅಂಡ್ರಾಯಿಡ್ 2.3.7 ಮತ್ತು ಅದಕ್ಕಿಂತ ಹಳೆ ಆವೃತ್ತಿಗಳಲ್ಲಿಯೂ ಕೂಡ ವಾಟ್ಸ್ ಆಪ್ ತನ್ನ ಕಾರ್ಯ ಸ್ಥಗಿತಗೊಳಿಸಲಿದೆ. ಹೀಗಾಗಿ ಈ ಆವೃತ್ತಿಗಳಲ್ಲಿ ನೀವು ವಾಟ್ಸ್ ಆಪ್ ನ ಹೊಸ ಖಾತೆ ತೆರೆಯುವಂತಿಲ್ಲ. ಜೊತೆಗೆ ಸದ್ಯ ಚಾಲ್ತಿಯಲ್ಲಿರುವ ವಾಟ್ಸ್ ಆಪ್ ಖಾತೆ ಮೂಲಕ ವೆರಿಫೈ ಕೂಡ ಮಾಡಲು ಸಾಧ್ಯವಿಲ್ಲ.


ಹಲವು ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ
ತನ್ನ ಖಜಾನೆಯ ಮೇಲೆ ಗಮನ ಹರಿಸಿರುವ ಕೇಂದ್ರ ಸರ್ಕಾರ 2020ರ ಬಜೆಟ್ ನಲ್ಲಿ ಹಲವು ವಸ್ತುಗಳ ಮೇಲಿನ GST ಹೆಚ್ಚಿಸುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರ ತನ್ನ ಆಮದು ಸುಂಕ ನೀತಿಯಲ್ಲಿ ಹೆಚ್ಚಳ ಮಾಡಿದರೆ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಸರಕು, ರಾಸಾಯನಿಕ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಮೊಬೈಲ್ ಫೋನ್ ಗಳ ಬೆಲೆಯಲ್ಲಿಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.