ನವ ದೆಹಲಿ: ನಿಮ್ಮ ಉಳಿತಾಯ ಖಾತೆ ಯಾವ ಬ್ಯಾಂಕ್ ನಲ್ಲಿದೆ? ಖಾತೆಯಲ್ಲಿ, ಉಳಿತಾಯದ ಮೇಲೆ ನೀವು ಎಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಈ ಎಲ್ಲಾ ಮಾಹಿತಿಯನ್ನು ನೀವು ಹೊಂದಿದ್ದೀರಾ? ಇಲ್ಲದಿದ್ದರೆ, ಅದರ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಮುಖ್ಯವಾಹಿನಿಯ ಬ್ಯಾಂಕುಗಳ ಬಗ್ಗೆ ಹೇಳುವುದಾದರೆ, ಎಲ್ಲಾ ಬ್ಯಾಂಕ್ಗಳು ಒಂದೇ ರೀತಿಯ ಬಡ್ಡಿದರವನ್ನು ಹೊಂದಿವೆ. ದೇಶದ ಅತಿದೊಡ್ಡ ಬ್ಯಾಂಕ್ ಬಗ್ಗೆ ಮಾತನಾಡುವುದಾದರೆ ಎಸ್ಬಿಐ ಉಳಿತಾಯ ಖಾತೆಯಲ್ಲಿ ನಿಮ್ಮ ಠೇವಣಿಗೆ 3.5% ವರೆಗೆ ಬಡ್ಡಿ ನೀಡುತ್ತದೆ. ನಿಮ್ಮ ಖಾತೆಯಲ್ಲಿನ ಮೊತ್ತ ಒಂದು ಕೋಟಿಗಿಂತಲೂ ಹೆಚ್ಚಿದ್ದರೆ, ಅದು 4% ನಷ್ಟು ಬಡ್ಡಿ ದರವನ್ನು ನೀಡುತ್ತದೆ. ಇದಲ್ಲದೆ, ಎಸ್ಬಿಐ ಒಂದು ವರ್ಷದ ಮೇರೆಗೆ ಸ್ಥಿರವಾದ ಠೇವಣಿ (ಎಫ್ಡಿ) ಮೇಲೆ 6.25% ವರೆಗೆ ಬಡ್ಡಿಯನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ನಿಮ್ಮ ಠೇವಣಿಗೆ ಹೆಚ್ಚಿನ ಬಡ್ಡಿಯನ್ನು ಪಡೆಯಲು ನೀವು ಬಯಸಿದರೆ, ನಿಮ್ಮ ಹಣವನ್ನು ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಠೇವಣಿ ಮಾಡಬಹುದು. ಹೆಚ್ಚಿನ ಬಡ್ಡಿದರ ಬೇಕೆಂದರೆ ನೀವು ಫಿನ್ಕೈರ್, ಇಎಸ್ಎಎಫ್ ಮತ್ತು ಉತ್ಕರ್ಶ್ ಬ್ಯಾಂಕ್ಗಳಲ್ಲಿ ಖಾತೆ ತೆರೆಯಬಹುದು. ಈ ಬ್ಯಾಂಕ್ಗಳು ನಿಮ್ಮ ಠೇವಣಿಗಳ ಮೇಲೆ 7% ವರೆಗೆ ಬಡ್ಡಿಯನ್ನು ನೀಡುತ್ತವೆ.


ಫಿನ್ಕೈರ್ ಸಣ್ಣ ಹಣಕಾಸು ಬ್ಯಾಂಕ್...
ನೀವು ಫಿನ್ಕೈರ್ ಸಣ್ಣ ಹಣಕಾಸು ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ಇಟ್ಟುಕೊಂಡರೆ, ನೀವು 1 ಲಕ್ಷದವರೆಗಿನ ವಾರ್ಷಿಕ 6% ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಈ ಮೊತ್ತ ರೂ. 1 ಲಕ್ಷಕ್ಕಿಂತ ಹೆಚ್ಚಿದ್ದರೆ ನೀಮಗೆ ಬ್ಯಾಂಕಿನಿಂದ ವಾರ್ಷಿಕ 7 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಈ ಬ್ಯಾಂಕಿನ ನೋಂದಾಯಿತ ಕಚೇರಿ ಗುಜರಾತ್ನಲ್ಲಿದೆ. ಇದಲ್ಲದೆ, ನೀವು ಒಂದು ವರ್ಷದ ಸ್ಥಿರ ನಿಕ್ಷೇಪವನ್ನು(ಎಫ್ಡಿ ಇಟ್ಟರೆ) ಮಾಡಿದರೆ, ನಿಮಗೆ 8% ಬಡ್ಡಿ ದೊರೆಯುತ್ತದೆ. ಹಿರಿಯ ನಾಗರಿಕರಿಗೆ, ಈ ದರ 8.5 ಪ್ರತಿಶತದಷ್ಟಿರುತ್ತದೆ. ಎರಡು ವರ್ಷಗಳವರೆಗೆ, ಎಫ್ಡಿ ಯಲ್ಲಿ ನೀವು 9% ರಷ್ಟು ಬಡ್ಡಿಯನ್ನು ಪಡೆಯುತ್ತೀರಿ.


ಇಎಸ್ಎಎಫ್ ಸಣ್ಣ ಹಣಕಾಸು ಬ್ಯಾಂಕ್...
ESAF ಸಣ್ಣ ಹಣಕಾಸು ಬ್ಯಾಂಕ್ನಲ್ಲಿ ಒಂದು ಲಕ್ಷಕ್ಕೂ ಕಡಿಮೆ ಹಣದ ಠೇವಣಿಗಳಿಗೆ ವಾರ್ಷಿಕವಾಗಿ 4% ವರೆಗೆ ಬಡ್ಡಿ ನೀಡಲಾಗುತ್ತದೆ. ನಿಮ್ಮ ಠೇವಣಿ ಮೊತ್ತವು 1 ಲಕ್ಷಕ್ಕಿಂತ ಹೆಚ್ಚು ಮತ್ತು 10 ಲಕ್ಷಕ್ಕಿಂತ ಕಡಿಮೆ ಇದ್ದರೆ, ನಂತರ ಬ್ಯಾಂಕಿನ ಬಡ್ಡಿ ದರವು 6.5% ಗೆ ಏರುತ್ತದೆ. 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಣಕ್ಕೆ ಬಡ್ಡಿದರವನ್ನು 7% ಬಡ್ಡಿಯನ್ನು ನೀಡಲಾಗುತ್ತದೆ. ನೀವು ಎಫ್ಡಿ ಮಾಡಿದರೆ ಈ ಬಡ್ಡಿ ದರವು 9 ಪ್ರತಿಶತಕ್ಕೆ ಏರುತ್ತದೆ. ಹಿರಿಯ ನಾಗರಿಕರಿಗೆ ಬಡ್ಡಿ ದರ 9.5% ರಷ್ಟನ್ನು ನೀಡಲಾಗುತ್ತದೆ.


ಉತ್ಕರ್ಶ್ ಸಣ್ಣ ಹಣಕಾಸು ಬ್ಯಾಂಕ್...
ಉತ್ಕರ್ಶ್ ಸಣ್ಣ ಹಣಕಾಸು ಬ್ಯಾಂಕ್ ಉಳಿತಾಯ ಖಾತೆಗೆ 6% ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಇದಲ್ಲದೆ, ಸ್ಥಿರ ಠೇವಣಿ ವಾರ್ಷಿಕ ಶೇಕಡಾ 8 ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಈ ಬಡ್ಡಿದರವನ್ನು 8.5 ಶೇಕಡಕ್ಕೆ ಹೆಚ್ಚಿಸಲಾಗಿದೆ.