ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಬೇಕಾದರೆ ಪಾಸ್ ಪೋರ್ಟ್ ಅವಶ್ಯಕ. ಅದು ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ವ್ಯಕ್ತಿಯವರೆಗೆ ಪಾಸ್ ಪೋರ್ಟ್ ನಿಯಮ ಅನ್ವಯಿಸುತ್ತದೆ. ಇನ್ನು ವಿಶ್ವದಲ್ಲಿ ಪಾಸ್ ಪೋರ್ಟ್ ವ್ಯವಸ್ಥೆ ಆರಂಭವಾಗಿ 102 ವರ್ಷಗಳಾಗಿವೆ. ಆದರೆ ಪ್ರಪಂಚದ 200ಕ್ಕೂ ಹೆಚ್ಚು ದೇಶಗಳಿಗೆ ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸಬಹುದಾದ 3 ವಿಶೇಷ ವ್ಯಕ್ತಿಗಳಿದ್ದಾರೆ. ಅವರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 30ರ ಹರೆಯದ WWE ʼಟಫ್ ಎನಫ್ʼ ಫೈಟರ್‌ ನಿಧನ : ನಿನ್ನೆ ಆರೋಗ್ಯವಾಗಿದ್ದ ಲೀ ಇಂದಿಲ್ಲ..!


ಅನೇಕ ವರ್ಷಗಳ ಹಿಂದೆ ಯಾವುದೇ ದೇಶದ ಪ್ರಜೆಗಳು ಬೇರೆ ದೇಶಕ್ಕೆ ಹೋದಾಗ ಅವರ ಬಳಿ ನಿಖರವಾದ ದಾಖಲೆಗಳಿರಬೇಕು ಎಂಬ ಒಪ್ಪಂದ ಜಗತ್ತಿನ ದೇಶಗಳ ನಡುವೆ ಇರಲಿಲ್ಲ. ಒಂದು ವೇಳೆ ಇದಕ್ಕೆ ಪೂರಕ ನಿಯಮ ಜಾರಿಗೊಳಿಸದಿದ್ದರೆ ಸಮಸ್ಯೆ ತಪ್ಪಿದ್ದಲ್ಲ ಎಂದು ಭಾವಿಸಿ, ಪಾಸ್ ಪೋರ್ಟ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.


ಇವಷ್ಟೇ ಅಲ್ಲದೆ, ಅಕ್ರಮವಾಗಿ ವಲಸಿಗರು ಬರುವುದು, ಅವರಿಂದ ಆಗುತ್ತಿದ್ದ ಸಮಸ್ಯೆಗಳನ್ನು ತಡೆಯಲು ವಿಶ್ವದಾದ್ಯಂತ ಪಾಸ್‌ಪೋರ್ಟ್‌ನಂತಹ ವ್ಯವಸ್ಥೆಯನ್ನು ಜಾರಿಗೊಳಿಸಲು ಅಮೆರಿಕ ಮುಂದಾಗುತ್ತಿದೆ ಎಂದು ಲೀಗ್ ಆಫ್ ನೇಷನ್ಸ್‌ನಲ್ಲಿ ಗಂಭೀರವಾಗಿ ಪರಿಗಣಿಸಲಾಯಿತು. ಇದಾದ ಬಳಿಕ 1924 ರಲ್ಲಿ ಅಮೆರಿಕಾ ಹೊಸ ಪಾಸ್​ಪೋರ್ಟ್​ ವ್ಯವಸ್ಥೆಯನ್ನು ಜಾರಿಗೆ ತಂದಿತು. 


ಇದೆಲ್ಲದರ ಜೊತೆ ಜಗತ್ತಿನಲ್ಲಿ ಈ ಮೂರು ವಿಶೇಷ ವ್ಯಕ್ತಿಗೆ ಪಾಸ್ ಪೋರ್ಟ್ ಇಲ್ಲದೆ ಎಲ್ಲಿಗೆ ಬೇಕಾದರು ಪ್ರಯಾಣಿಸಬಹುದು. ಅವರು ಯಾರೆಂದರೆ ಬ್ರಿಟನ್ ರಾಜ, ಜಪಾನ್ ರಾಜ ಮತ್ತು ರಾಣಿ. ಚಾರ್ಲ್ಸ್ ರಾಜನಾಗುವ ಮೊದಲು ಈ ವಿಶೇಷ ಸೌಲಭ್ಯ ರಾಣಿ ಎಲಿಜಬೆತ್‌ಗೆ ಇತ್ತು.


ಇದೀಗ ಬ್ರಿಟನ್ ರಾಜ ಚಾರ್ಲ್ಸ್ ಗೆ ಈ ಸವಲತ್ತು ಲಭಿಸಿದೆ. ಆದರೆ ಅವರ ಹೆಂಡತಿ ಕ್ಯಾಮಿಲಾಗೆ ಈ ಹಕ್ಕು ಇಲ್ಲ. ಆಕೆ ಬೇರೆ ದೇಶಕ್ಕೆ ಪ್ರಯಾಣಿಸಬೇಕಾದರೆ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಇನ್ನು ಜಪಾನ್ ನ ರಾಜ ಮತ್ತು ರಾಣಿಗೆ ಈ ವಿಶೇಷ ಗೌರವ ಇದೆ.


ಇದನ್ನೂ ಓದಿ: Viral News: ವಿದೇಶದಲ್ಲಿ ಉಚಿತ ಸುತ್ತಾಟ, ಈ ದೇಶವು ಪ್ರವಾಸಿಗರಿಗೆ 5 ಲಕ್ಷ ವಿಮಾನ ಟಿಕೆಟ್ ವಿತರಿಸುತ್ತಿದೆ!


ಇನ್ನು ಇವರ ಹೊರತಾಗಿ ಪ್ರಪಂಚದ ಎಲ್ಲಾ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ಪಾಸ್‌ಪೋರ್ಟ್‌ಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.