ನವದೆಹಲಿ: ಇತ್ತೀಚಿಗೆ ಇಂಡೋ-ಚೀನಾ (Indo-China) ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ 59 ಚೈನೀಸ್ ಆ್ಯಪ್‌ಗಳನ್ನು (Chinese apps) ಭಾರತ ನಿಷೇಧಿಸಿದೆ. ಅಂದಿನಿಂದ ಮೇಡ್ ಇನ್ ಇಂಡಿಯಾದ (Made in india) ಬೇಡಿಕೆ ಕೂಡ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ ಭಾರತದ ಬಳಕೆದಾರರು ಕಿರು ವೀಡಿಯೊ ತಯಾರಿಕೆ ಅಪ್ಲಿಕೇಶನ್‌ಗಳನ್ನು ಇಷ್ಟಪಡುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ರೊಪೊಸೊ ಮತ್ತು ಶೇರ್ ಚಾಟ್ ಅಪ್ಲಿಕೇಶನ್‌ಗಳು ಹೆಚ್ಚಿನ ಲಾಭವನ್ನು ಪಡೆಯುತ್ತಿವೆ.


COMMERCIAL BREAK
SCROLL TO CONTINUE READING

ಸೆನ್ಸಾರ್ ಟವರ್ ಮಾಹಿತಿಯ ಪ್ರಕಾರ ಜೂನ್ 29 ಮತ್ತು ಜುಲೈ 8 ರ ನಡುವೆ ಶೇರ್ ಚಾಟ್ ಡೌನ್‌ಲೋಡ್ 257% ಹೆಚ್ಚಾಗಿದೆ. ಅದೇ ಸಮಯದಲ್ಲಿ, ರೊಪೊಸೊ ಡೌನ್‌ಲೋಡ್ 82% ಹೆಚ್ಚಾಗಿದೆ.


ವಿಶ್ವಾದ್ಯಂತ ಸದ್ದು ಮಾಡಲಿದೆ 'ಮೇಡ್ ಇನ್ ಇಂಡಿಯಾ' ಸರಕುಗಳು


ರೊಪೊಸೊ ಅಪ್ಲಿಕೇಶನ್ ಈಗಾಗಲೇ ಭಾರತದಲ್ಲಿ ಜನಪ್ರಿಯವಾಗಿತ್ತು. ಅಲ್ಲದೆ ಟಿಕ್ ಟಾಕ್  (TikTok) ನಿಷೇಧದ ನಂತರ ಅದರ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಜೂನ್ 19 ಮತ್ತು ಜೂನ್ 28 ರ ನಡುವೆ ರೋಪೊಸೊವನ್ನು ಭಾರತದಲ್ಲಿ 49 ಲಕ್ಷ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಲಾಗಿದೆ. ಆದರೆ ಜೂನ್ 29 ಮತ್ತು ಜುಲೈ 8 ರ ನಡುವೆ ಇದು 82% ರಷ್ಟು ಹೆಚ್ಚಳಗೊಂಡು 89 ಲಕ್ಷ ಡೌನ್‌ಲೋಡ್‌ಗಳಿಗೆ ತಲುಪಿದೆ. ಡೇಟಾದ ಆಧಾರದ ಮೇಲೆ ರೊಪೊಸೊ ಅಪ್ಲಿಕೇಶನ್ ಈಗ ಭಾರತದಲ್ಲಿ 6.5 ಮಿಲಿಯನ್ ಬಳಕೆದಾರರನ್ನು ಹೊಂದಿದೆ.


ಶೇರ್‌ಚಾಟ್ ಕುರಿತು ಹೇಳುವುದಾದರೆ ಹಲೋ ಆ್ಯಪ್ (Helo App) ನಿಷೇಧದ ನಂತರ ಈ ಆ್ಯಪ್‌ನ ಬೇಡಿಕೆ ವೇಗವಾಗಿ ಹೆಚ್ಚಾಗಿದೆ. ಜೂನ್ 19 ಮತ್ತು ಜೂನ್ 28 ರ ನಡುವೆ ಶೇರ್‌ಚಾಟ್ ಅನ್ನು 1.4 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ. ಅದೇ ಸಮಯದಲ್ಲಿ ಇದರ ನಂತರ 10 ದಿನಗಳಲ್ಲಿ ಡೌನ್‌ಲೋಡ್‌ಗಳ ಸಂಖ್ಯೆ 50 ಲಕ್ಷ ಬಳಕೆದಾರರಿಗೆ 257% ಹೆಚ್ಚಾಗಿದೆ.


ಸೆನ್ಸಾರ್ ಟವರ್‌ನ ವರದಿಯ ಪ್ರಕಾರ ಜೂನ್ 29 ಮತ್ತು ಜುಲೈ 8ರ ನಡುವೆ ಸ್ಪಾರ್ಕ್ ಮತ್ತು ಫ್ರೆಂಡ್ಸ್ ಅಪ್ಲಿಕೇಶನ್‌ನ ಡೌನ್‌ಲೋಡ್ 54% ಮತ್ತು 19% ಹೆಚ್ಚಾಗಿದೆ. ಸ್ಪಾರ್ಕ್ ಮತ್ತು ಫ್ರೆಂಡ್ಸ್ ನಂತಹ ಭಾರತೀಯ ಕಿರು ವಿಡಿಯೋ ತಯಾರಿಕೆ ವೇದಿಕೆಗಳ ಬೇಡಿಕೆ ಕೂಡ ವೇಗವಾಗಿ ಹೆಚ್ಚಾಗಿದೆ.