ನವದೆಹಲಿ/ಇಸ್ಲಾಮಾಬಾದ್: ಪಂಜಾಬ್‌ನ ಅಮೃತಸರ ಜಿಲ್ಲೆಯ ಅತ್ತಾರಿ ಗಡಿಯಲ್ಲಿರುವ ಕರ್ತಾರ್‌ಪುರ ಕಾರಿಡಾರ್ ಕುರಿತು ಭಾರತೀಯ ಮತ್ತು ಪಾಕಿಸ್ತಾನದ ಅಧಿಕಾರಿಗಳು ಬುಧವಾರ ಮೂರನೇ ಸುತ್ತಿನ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಒಪ್ಪಂದವನ್ನು ಅಂತಿಮಗೊಳಿಸುವುದು ಮತ್ತು ತಾತ್ಕಾಲಿಕ ರಸ್ತೆ ಜೋಡಣೆ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಕಾರ್ತಾರ್‌ಪುರ ಕಾರಿಡಾರ್‌ನಲ್ಲಿ ಭಾರತೀಯ ಮತ್ತು ಪಾಕಿಸ್ತಾನದ ಅಧಿಕಾರಿಗಳ ನಡುವೆ ಎರಡನೇ ಸುತ್ತಿನ ಮಾತುಕತೆ ಜುಲೈ 14 ರಂದು ನಡೆದಿತ್ತು ಮತ್ತು ಆ ಸಭೆಯಲ್ಲಿ, ಗುರುದ್ವಾರಕ್ಕೆ ಎಲ್ಲಾ ಹವಾಮಾನ ತೀರ್ಥಯಾತ್ರೆಗೆ ಅನುವು ಮಾಡಿಕೊಡುವ ಹಳೆಯ ರಾವಿ ಕೊಲ್ಲಿಯ ಮೇಲೆ ಸೇತುವೆ ನಿರ್ಮಿಸಲು ಇಸ್ಲಾಮಾಬಾದ್ ಒಪ್ಪಿಕೊಂಡಿತ್ತು ಎಂಬುದು ಗಮನಾರ್ಹವಾಗಿದೆ. 


ಬುಧವಾರದ ಮಾತುಕತೆ ವೇಳೆ, ಕಾರಿಡಾರ್‌ನ ಕಾರ್ಯಾಚರಣೆಯ ಸಮಯದಲ್ಲಿ, ವೈದ್ಯಕೀಯ ಪ್ರಕರಣಗಳಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕಾರಿಡಾರ್ ಮತ್ತು ವಿಧಾನಗಳನ್ನು ಬಳಸುವ ಬಗ್ಗೆ ವಿನಿಮಯ ಮಾಹಿತಿಯ ವಿಧಾನಗಳನ್ನು ಅಂತಿಮಗೊಳಿಸುವ ಕುರಿತು ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ.


ಕರ್ತಾರ್‌ಪುರ ಕಾರಿಡಾರ್ ಪ್ರಾರಂಭವಾದ ನಂತರ, ದಿನಕ್ಕೆ 5,000 ಭಾರತೀಯ ಯಾತ್ರಾರ್ಥಿಗಳಿಗೆ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶವಿದೆ. ಯಾತ್ರಾರ್ಥಿಗಳಿಗೆ ವ್ಯಕ್ತಿಗಳಾಗಿ ಅಥವಾ ಗುಂಪುಗಳಾಗಿ ಮತ್ತು ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.


ಗಡಿಯಾಚೆಗಿನ ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ನಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆ ಬಗ್ಗೆ ಒಪ್ಪಂದದ ಅಂತಿಮಗೊಳಿಸುವ ಕಡೆಗೆ ಸಂವಹನ ಮಾರ್ಗವನ್ನು ನಿರ್ವಹಿಸಲು ಇಸ್ಲಾಮಾಬಾದ್ ಸಹಮತ ವ್ಯಕ್ತಪಡಿಸಿದೆ. ಅದಲ್ಲದೆ "ಭಾರತ ವಿರೋಧಿ ಚಟುವಟಿಕೆಯನ್ನು ಅನುಮತಿಸುವುದಿಲ್ಲ" ಎಂದು ಭರವಸೆ ನೀಡಿದರು.


ಅಕ್ಟೋಬರ್ 31 ರೊಳಗೆ ಈ ಕಾರಿಡಾರ್ ಪೂರ್ಣಗೊಳ್ಳಲಿದೆ. ರಾವಿ ನದಿಗೆ ಅಡ್ಡಲಾಗಿರುವ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರವನ್ನು ಐತಿಹಾಸಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ, ಅಲ್ಲಿ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ತಮ್ಮ ಅಂತಿಮ ದಿನಗಳನ್ನು ಕಳೆದಿದ್ದರು ಎಂದು ನಂಬಲಾಗಿದ್ದು, ಈ ಸ್ಥಳವನ್ನು ಸಿಖ್ ಸಮುದಾಯವು ಹೆಚ್ಚು ಪೂಜಿಸುತ್ತದೆ.