ನವದೆಹಲಿ: ಅಕ್ಟೋಬರ್ 6 ರಂದು ನಡೆಸಿದ ಸರಣಿ ದಾಳಿಗಳಲ್ಲಿ ಹೈದರಾಬಾದ್ ಮೂಲದ ಪ್ರಮುಖ ಫಾರ್ಮಾ ಕಂಪನಿಯಿಂದ ದಾಖಲೆ ಇಲ್ಲದೆ ಇರುವ 550 ಕೋಟಿ ರೂ ಮೌಲ್ಯವನ್ನು ಪತ್ತೆ ಹಚ್ಚಿದೆ.ಅದರಲ್ಲಿ 142.87 ಕೋಟಿ ರೂ.ನಗದು ಹಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.


COMMERCIAL BREAK
SCROLL TO CONTINUE READING

ಅಧಿಕೃತ ಹೇಳಿಕೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಔಷಧೀಯ ಗುಂಪು ಮಧ್ಯವರ್ತಿಗಳು, ಸಕ್ರಿಯ ಔಷಧೀಯ ಪದಾರ್ಥಗಳು (ಎಪಿಐ) ಮತ್ತು ಸೂತ್ರೀಕರಣಗಳ ತಯಾರಿಕೆಯಲ್ಲಿ ತೊಡಗಿದೆ ಎಂದು ಹೇಳಿದೆ. ಈ ಉತ್ಪನ್ನಗಳಲ್ಲಿ ಹೆಚ್ಚಿನವು ಯುಎಸ್ಎ, ಯುರೋಪ್, ದುಬೈ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತಾಗುತ್ತವೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.


FY21 ನಲ್ಲಿ ನಿಮ್ಮ ITR ಫೈಲ್ ಮಾಡ್ತೀರಾ? ಹಾಗಿದ್ರೆ ನೆನಪಿನಲ್ಲಿಡಿ ಈ ಪ್ರಮುಖ ಅಂಶಗಳು


ಈ ದಾಳಿಯ ಒಂದು ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ವಿಶೇಷವಾಗಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಅಲ್ಲಿ ಜನರು ನಗದು ತುಂಬಿರುವ ಬೀರುವಿನ ಚಿತ್ರದ ಮೂಲಕ ನಗೆ ಬರಿತ ಕಾಮೆಂಟ್ ಮಾಡುತ್ತಿದ್ದಾರೆ.


ಹೈದರಾಬಾದಿನ ಫಾರ್ಮಾ ಕಂಪನಿಯ ಮೇಲೆ ಐಟಿ ದಾಳಿ ನಡೆಸಿದಾಗ ಇದು ಬಹಿರಂಗವಾಗಿದೆ. ಅವರು ಲಾಕರ್‌ನಲ್ಲಿ ಬಟ್ಟೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬ ಬಳಕೆದಾರರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನೊಬ್ಬರು ಇದನ್ನು  ನನ್ನ ವಾಲ್‌ಪೇಪರ್‌ನಂತೆ ಇಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ITR Benefits : ನಿಮ್ಮ ಆದಾಯಕ್ಕೆ ತೆರಿಗೆ ವಿಧಿಸದಿದ್ದರೂ ITR ಸಲ್ಲಿಸಿದರೆ ನಿಮಗೆ ಸಿಗಲಿದೆ 5 ಪ್ರಯೋಜನಗಳು!


ಆದಾಯ ತೆರಿಗೆ (Income Tax) ಇಲಾಖೆಯು ಔಷಧೀಯ ಗುಂಪಿನ ಹೆಸರನ್ನು ಉಲ್ಲೇಖಿಸದಿದ್ದರೂ, ಮಾಧ್ಯಮ ವರದಿಗಳು ಹೇಳುವಂತೆ ಹೆವಿರೊ ಡ್ರಗ್ಸ್ ನಲ್ಲಿ ದಾಳಿ ನಡೆಸಲಾಗಿದೆ, ಇದು ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸಲಾಗುವ ಕೋವಿಫೋರ್‌ನ ರೆಮ್‌ಡೆಸಿವಿರ್ ಇಂಜೆಕ್ಷನ್‌ನ ಸಾಮಾನ್ಯ ಆವೃತ್ತಿಯನ್ನು ಬಿಡುಗಡೆ ಮಾಡಿದ ಭಾರತದ ಮೊದಲ ಔಷಧೀಯ ಕಂಪನಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.