ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಚಲಿಸುವ ಬೈಕುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಆದರೆ ಇಲ್ಲೊಂದು ಬೈಕ್ ತುಂಬಾ ವೇಗವಾಗಿ ಚಲಿಸುತ್ತೆ. ಆದರೆ ಈ ಬೈಕಿಗೆ ಪೆಟ್ರೋಲ್ ಹಾಕುವ ಅಗತ್ಯವೇ ಇಲ್ಲ! ಆಶ್ಚರ್ಯ ಆಗ್ತಿದೆ ಆಲ್ವಾ? ಅದೇ ಈ ಬೈಕಿನ ವಿಶೇಷ!


COMMERCIAL BREAK
SCROLL TO CONTINUE READING

ಈ ವಿಶೇಷ ಬೈಕಿನ ಟ್ಯಾಂಕಿಗೆ ಪೆಟ್ರೋಲ್ ಹಾಕುವ ಬದಲಿಗೆ ಗಾಳಿಯನ್ನು ತುಂಬಿದರೆ ಸಾಕು. ಕೇವಲ ಒಂದು ರೂಪಾಯಿಯಲ್ಲಿ 8 ಕಿ.ಮೀ. ದೂರ ಕ್ರಮಿಸಬಹುದು. ಇದೊಂದು ಹೊಸ ಆವಿಷ್ಕಾರವಾಗಿದ್ದು, ಯಶಸ್ವಿಯಾಗಿ ಪ್ರಯೋಗ ಮಾಡಿ, ಗಾಳಿಯಿಂದಲೇ ಚಲಿಸುತ್ತದೆ ಕೂಡ...


9 ವರ್ಷಗಳ ಹಿಂದೆ ಆವಿಷ್ಕಾರ
ಲಕ್ನೋ ಮೂಲದ ವಿಜ್ಞಾನಿಯೊಬ್ಬರು 9 ವರ್ಷಗಳ ಹಿಂದೆ ಈ ಬೈಕಿನ ಇಂಜಿನ್ ಆವಿಷ್ಕಾರ ಮಾಡಿದ್ದರು. ಅದಕ್ಕೀಗ ಏರೋ ಬೈಕ್ ರೂಪ ನೀಡಿದ್ದಾರೆ. ಇದು ಇಂಧನ ವೆಚ್ಚವನ್ನು ಉಳಿಸುತ್ತದೆಯಲ್ಲದೆ, ಜಾಗತಿಕ ತಾಪಮಾನದ ಸಮಸ್ಯೆಯನ್ನೂ ಕಡಿಮೆ ಮಾಡಬಲ್ಲದು.


ಮಾಲಿನ್ಯ ಸಮಸ್ಯೆ ನಿವಾರಣೆ
ಉತ್ತರಪ್ರದೇಶ ರಾಜ್ಯ ನಿರ್ಮಾಣ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿರುವ ಭರತ್ ರಾಜ್ ಸಿಂಗ್ ಅವರು ಗಾಳಿಯಿಂದ ಚಲಿಸುವ ಬೈಕಿನ ಎಂಜಿನ್ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿ.ಆರ್. ಸಿಂಗ್ ಪ್ರಸ್ತುತ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ನಿರ್ದೇಶಕರಾಗಿದ್ದಾರೆ. ಈ ಬೈಕ್ ರಸ್ತೆಗಿಳಿದರೆ ಶೇ.50ರಷ್ಟು ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.


5 ರೂ.ನಲ್ಲಿ 40 ಕಿ.ಮೀ. ಪ್ರಯಾಣ
ಪೆಟ್ರೋಲ್ ಮತ್ತು ಡೀಸಲ್ ಇಂಜಿನ್ಗಳನ್ನು ಬದಲಾಯಿಸಿ ಗಾಳಿಯಿಂದ ಚಲಿಸುವ ಬೈಕುಗಳ ಆವಿಷ್ಕಾರಕ್ಕಾಗಿ ಈ ಇಂಜಿನ್ ಸಿದ್ಧಪಡಿಸಲಾಗಿದೆ. ಇದರ ವೆಚ್ಚವೂ ಸಹ ಕಡಿಮೆ. ಮೊದಲಿಗೆ ದ್ವಿಚಕ್ರ ವಾಹನಗಳಲ್ಲಿ ಇದನ್ನು ಅಳವಡಿಸಿ ಯಶಸ್ವಿಯಾಗಿದ್ದೇವೆ. ಕೇವಲ 5 ರೂ.ಗಳಲ್ಲಿ 40 ಕಿ.ಮೀ. ದೂರ ಪ್ರಯಾಣಿಸಬಹುದು. ಅಷ್ಟೇ ಅಲ್ಲ, ಈ ಬೈಕ್ ಗಂಟೆಗೆ 70-80 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಸದ್ಯ ಈ ಬೈಕ್ ಅನ್ನು ಸರ್ಕಾರದ ಅನುಮೋದನೆಗಾಗಿ ಭರತ್ ಸಿಂಗ್ ಕಳುಹಿಸಿದ್ದಾರೆ.