ನವದೆಹಲಿ: ಮುಂಬರುವ ಛತ್ತೀಸ್ ಘಡ್ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತಿ ನಾಗರಿಕನ ವೋಟ್ ಗಳನ್ನು ಮಹತ್ವ ಎನ್ನುವದನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಈ ಹಿನ್ನಡೆಯಲ್ಲಿ ಅದು ಮತದಾರರ ಸಂಖ್ಯೆ ಒಂದೇ ಅಂಕಿಯಲ್ಲಿದ್ದರೂ ಸಹಿತ ಅವರಿಗೆ ಮತದಾನ ಮಾಡುವ ಅವಕಾಶವನ್ನು ಒದಗಿಸಿದೆ..


COMMERCIAL BREAK
SCROLL TO CONTINUE READING

ಈಗ ಅಂತಹ ಒಂದು ಪ್ರಕರಣದಲ್ಲಿ ಭರತ್ಪುರ್-ಸೋನ್ಹಾಟ್ ಅಸೆಂಬ್ಲಿ ಕ್ಷೇತ್ರದಲ್ಲಿ ಕಂಡುಬಂದಿದೆ. ಮತಗಟ್ಟೆ 143 ಶೆರಾಂದಂದ್ ಹಳ್ಳಿಯಲ್ಲಿ ಕೇವಲ ನಾಲ್ಕು ಮತದಾರರು ಮಾತ್ರ ಇದ್ದಾರೆ ಅಚ್ಚರಿಯಂದರೆ ಅವರು ಮೂವರು ಒಂದೇ ಕುಟುಂಬದವರು ಎಂದು ಎಎನ್ಐ ವರದಿ ಮಾಡಿದೆ.


ಈ ಅರಣ್ಯದಲ್ಲಿರುವ ಶೆರಾಂದಂದ್ ಗ್ರಾಮಕ್ಕೆ ಚುನಾವಣಾ ಅಧಿಕಾರಿಗಳು ತಲುಪಬೇಕಾದರೆ 5 ರಿಂದ 6 ಕಿಲೋಮೀಟರುಗಳವರೆಗೆ ರಾಕಿ ಭೂಪ್ರದೇಶದ ಮೂಲಕ ಹೋಗಬೇಕು ಮತ್ತು ನದಿಯನ್ನು ದಾಟಬೇಕು. ಈ ಹಳ್ಳಿಯು ಮುಖ್ಯ ರಸ್ತೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ.ಮತದಾನಕ್ಕೂ ಒಂದು ದಿನ ಮೊದಲು ತೆರಳಿ ಅಲ್ಲಿ ಮತದಾರರಿಗಾಗಿ ಟೆಂಟ್ ನ್ನು ನಿರ್ಮಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎನ್ ಕೆ  ದುಗ್ಗಾ ತಿಳಿಸಿದ್ದಾರೆ.


ಛತ್ತೀಸ್ಗಢದಲ್ಲಿ ಮತದಾನ ಎರಡು ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತದಲ್ಲಿ ನವೆಂಬರ್ 12 ರಂದು ರಾಜ್ಯದ ದಕ್ಷಿಣ ಭಾಗದ 18 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಮತ್ತು ಎರಡನೇ ಹಂತದ ಚುನಾವಣೆ ನವೆಂಬರ್ 20 ರಂದು ನಡೆಯಲಿದೆ.ಎರಡೂ ಹಂತಗಳ ಮತಗಳ ಎಣಿಕೆಯು ಡಿಸೆಂಬರ್ 11 ರಂದು ನಡೆಯಲಿದೆ.