ಇದು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ : ಇದರ ಬೆಲೆ ಕೇಳಿದರೆ ಆಗುತ್ತೆ ಶಾಕ್!
ದೀಪಾವಳಿಯ ಸಂದರ್ಭದಲ್ಲಿ, ಅನೇಕ ಕ್ಷೇತ್ರಗಳಲ್ಲಿ ವ್ಯವಹರಿಸುವ ಐಟಿಸಿ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಅನ್ನು ಬಿಡುಗಡೆ ಮಾಡಿದೆ. ಚಾಕೊಲೇಟ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ...!
ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ವ್ಯವಹರಿಸುವ ಐಟಿಸಿ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಅನ್ನು ಬಿಡುಗಡೆ ಮಾಡಿದೆ. ಚಾಕೊಲೇಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು 4.3 ಲಕ್ಷ ರೂ. ಕಂಪನಿಯು ಫೇಬಲ್ ಬ್ರಾಂಡ್ನೊಂದಿಗೆ ಚಾಕೊಲೇಟ್ ಅನ್ನು ಪರಿಚಯಿಸಿದೆ. ದುಬಾರಿ ಚಾಕೊಲೇಟ್ ವಿಷಯದಲ್ಲಿ, ಐಟಿಸಿಯ ಈ ಉತ್ಪನ್ನವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರಿಕೊಂಡಿದೆ. ಇಂತಹ ದುಬಾರಿ ಚಾಕೊಲೇಟ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವುದು ಇದೇ ಮೊದಲೇನಲ್ಲ. ಈ ಮೊದಲು 2012 ರಲ್ಲಿ, ಡೆನ್ಮಾರ್ಕ್‌ನ ಕುಶಲಕರ್ಮಿ ಚಾಕೊಲೇಟಿಯರ್ ಫ್ರಿಟ್ಜ್ ನಿಪ್ಸ್‌ಚೈಲ್ಡ್ ಡೆನ್ಮಾರ್ಕ್ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಆ ಚಾಕೊಲೇಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು 3.39 ಲಕ್ಷ ರೂ. ಆಗಿತ್ತು.
ಉತ್ಪನ್ನವು ಪ್ರಪಂಚದಾದ್ಯಂತ ಲಭ್ಯ:
ಐಟಿಸಿಯ ಆಹಾರ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಚಾಕೊಲೇಟ್, ಮಿಠಾಯಿ, ಕಾಫಿ ಮತ್ತು ಹೊಸ ವರ್ಗ) ಅನುಜ್ ರುಸ್ತಗಿ ಅವರ ಪ್ರಕಾರ, ಬ್ರಾಂಡ್‌ನಲ್ಲಿ ಹೊಸ ಮಾನದಂಡವನ್ನು ಹೊಂದಿಸಲು ಫೇಬಲ್ ಸಾಕಷ್ಟು ಸಂತೋಷವಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಒಂದು ದೊಡ್ಡ ಸಾಧನೆಯಾಗಿದೆ. ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಳ್ಳುವುದು ಹೆಮ್ಮೆಯ ವಿಷಯ ಎಂದಿದ್ದಾರೆ.
ಒಂದು ಲಕ್ಷ ರೂಪಾಯಿಯ ಚಾಕೊಲೇಟ್ ಬಾಕ್ಸ್:
ಚಾಕೊಲೇಟ್ ಬೆಲೆಯ ಜೊತೆಗೆ, ಚಾಕೊಲೇಟ್ ಪೆಟ್ಟಿಗೆಯ ಬೆಲೆಯೂ ಸಹ ನಿಮಗೆ ಆಶ್ಚರ್ಯ ಉಂಟುಮಾಡುತ್ತದೆ. ಚಾಕೊಲೇಟ್ನ ಈ ಸೀಮಿತ ಆವೃತ್ತಿಯು ಕೈಯಿಂದ ಮಾಡಿದ ಮರದ ಪೆಟ್ಟಿಗೆಯಲ್ಲಿ ಕಂಡುಬರುತ್ತದೆ. ಅವುಗಳಲ್ಲಿ 15 ಗ್ರಾಂನ 15 ಟ್ರಫಲ್ಸ್ ಇರುತ್ತದೆ. ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ ಈ ಪೆಟ್ಟಿಗೆಯ ಬೆಲೆ ಒಂದು ಲಕ್ಷ ರೂಪಾಯಿಗಳಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.
ಆಸಕ್ತಿ ತೋರಿದ ಎಚ್‌ಎನ್‌ಐ :
ಅನುಜ್ ರುಸ್ತಗಿ ಪ್ರಕಾರ, ಚಾಕೊಲೇಟ್ ವ್ಯವಹಾರವು ಹೆಚ್ಚು ಲಾಭದಾಯಕವಾಗಿದೆ. ಫೇಬಲ್ನ ಹೊಸ ಚಾಕೊಲೇಟ್ಗಾಗಿ ಪ್ರತ್ಯೇಕ ಆದೇಶವನ್ನು ಮಾಡಬೇಕಾಗಿದೆ, ಆದ್ದರಿಂದ ಇದನ್ನು ದೀಪಾವಳಿಯ ಮೊದಲು ಪ್ರಾರಂಭಿಸಲಾಗಿದೆ. ಅನೇಕ ಎಚ್‌ಎನ್‌ಐಗಳು ಈ ಉತ್ಪನ್ನಗಳಲ್ಲಿ ಆಸಕ್ತಿ ತೋರಿಸಿವೆ.