ನವದೆಹಲಿ: ಹಾಲಿವುಡ್‌ನ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರದ ನಟ ಟೈರ್ಸ್ ಗಿಬ್ಸನ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ದೊಡ್ಡ ಫ್ಯಾನ್ ಅಂತೆ. ಅಷ್ಟೇ ಅಲ್ಲ, ಸದ್ಯದಲ್ಲಿ ಅಮಿತಾಬ್ ಬಚ್ಚನ್ ಅವರನ್ನ ಭೇಟಿ ಮಾಡೋ ಕಾತುರ ಅವರಲ್ಲಿದೆಯಂತೆ. ಹಾಗಂತ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಟೈರ್ಸ್ ಗಿಬ್ಸನ್ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ಈ ಮಹಾನ್ ನಟನನ್ನು ಭೇಟಿ ಮಾಡುವ, ಅವರ ಹ್ಯಾಂಡ್ ಶೇಕ್ ಮಾಡುವ, ಅವರೊಂದಿಗೆ ಮಾತನಾಡುವ ಅವಕಾಶ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. ಬಾಲಿವುಡ್ ನಲ್ಲಿ 190ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ಮಹಾನ್ ನಟ ಅಮಿತಾಬ್" ಎಂದು ಬರೆದಿದ್ದಾರೆ.


ಅಷ್ಟೇ ಅಲ್ಲದೆ, ಭಾರತೀಯ ಚಿತ್ರರಂಗಕ್ಕೆ ಬಿಗ್ ಬಿ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಿಬ್ಸನ್,  ಬಾಲಿವುಡ್ನಲ್ಲಿ 'ಝಂಜೀರ್', 'ದೀವಾರ್', 'ಶೋಲೇ' ಮತ್ತು 'ಆಂಗ್ರಿ ಯಂಗ್ ಮ್ಯಾನ್'ನಂತಹ ಚಲನಚಿತ್ರಗಳಿಂದ ಪ್ರಸಿದ್ಧರಾಗಿದ್ದಾರೆ. ಬಾಲಿವುಡ್ನ ಮಹಾನಾಯಕ, ಸ್ಟಾರ್ ಆಫ್ ಮಿಲೇನಿಯಮ್ ಅಥವಾ ಬಿಗ್ ಬಿ ಹೆಸರಿನಿಂದ ಜನಪ್ರಿಯವಾಗಿರುವ ಅಮಿತಾಬ್ ಐದು ದಶಕಗಳ ಸಿನಿಮಾ ವೃತ್ತಿಜೀವನದಲ್ಲಿ 190 ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದಿದ್ದಾರೆ.