ನವದೆಹಲಿ: ಭಾರತಕ್ಕೆ ಸ್ವಾತಂತ್ರ ಸಿಕ್ಕು 7 ದಶಕಗಳು ಕಳೆದರು ಕೂಡಾ ಇಂದಿಗೂ ಬಹುತೇಕ ಗ್ರಾಮಗಳು ತಮ್ಮ ಜೀವನವನ್ನು ಅಂಧಕಾರದಲ್ಲಿಯೇ ಕಳೆಯುತ್ತಿವೆ,ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ, ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಿಂದ 15 ಕಿಲೋಮೀಟರ್ ದೂರದಲ್ಲಿರುವ ಪುತಾರ ಧನ ಗ್ರಾಮದ ನಿವಾಸಿಗಳು ಇಂದಿಗೂ ಕೂಡಾ ವಿದ್ಯುತ್ ದೀಪವಿಲ್ಲದೆ ಚಿಮಿಣಿ ಬುಡ್ಡಿಯಲ್ಲಿ ಜೀವನ ದೂಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

 ಒಟ್ಟು 15 ಕುಟುಂಬಗಳು ವಾಸಿಸುವ ಈ ಪ್ರದೇಶದಲ್ಲಿ  ಸರಿಯಾದ ರಸ್ತೆಗಳಿಲ್ಲದೆ ಮತ್ತು ನೀರಿನ ಸೌಲಭ್ಯವಿಲ್ಲದೆ  ಜನರು ಸಂಕಷ್ಟದಲ್ಲಿ ತಮ್ಮ ಬದುಕನ್ನು ಮುಂದೂಡುತ್ತಿದ್ದಾರೆ.



"ವಿದ್ಯುತ್ ಮತ್ತು  ರಸ್ತೆಗಳ ಸೌಲಭ್ಯ ಇಲ್ಲದಿರುವುದರಿಂದ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ ಪ್ರತಿ ದಿನ ನಾವು ಶಾಲೆಗೆ ತಲುಪಲು 8 ಕಿಲೋಮೀಟರುಗಳಷ್ಟು ಪ್ರಯಾಣಿಸಬೇಕಾಗಿದೆ. ದಿನನಿತ್ಯ ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸಲು ತೈಲ ದೀಪಗಳನ್ನು ಬಳಸುತ್ತೇವೆ" ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. 


ಏತನ್ಮಧ್ಯೆ, ಇಲ್ಲಿನ  ಸ್ಥಳೀಯರು ಹೇಳುವಂತೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಲಾಗಿದೆ. ಆದರೆ ಈ ಕುರಿತು ಸರ್ಕಾರ  ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ .


ಕುತೂಹಲಕರ ಸಂಗತಿ ಎಂದರೆ ಕೇಂದ್ರ ಸರ್ಕಾರವು  'ಸುಭಗ್ಯಾ ಯೋಜನೆ' ಮೂಲಕ , 2018 ರೊಳಗೆ ದೇಶದ 100 ಪ್ರತಿಶತ ವಿದ್ಯುತ್ ನ್ನು ಎಲ್ಲ ಗ್ರಾಮಗಳಿಗೆ ತಲುಪಿಸುವ ಗುರಿಯನ್ನು ಇಟ್ಟುಕೊಂಡಿದೆ, ಆದರೆ  ಕಗ್ಗತಲಿನ ಗ್ರಾಮಗಳು ಇಂಥ ಸೌಕರ್ಯಗಳಿಂದ ವಂಚಿತವಾದ ಬಗ್ಗೆ ಒಂದಿಲ್ಲ ಒಂದು ಸುದ್ದಿ  ಇನ್ನು ಬರುತ್ತಲೇ ಇವೆ, ಎನ್ನುವುದು ಕೂಡಾ ಅಷ್ಟೇ ಸತ್ಯ.



With ANI Inputs