ನವದೆಹಲಿ: ಚುನಾವಣೆಗಳನ್ನು ಗೆಲ್ಲುವ ಮೂಲಕ ಹತ್ತಾರು ಬಾರಿ ಶಾಸಕರು ಮತ್ತು ಸಂಸದರಾದ ಅನೇಕ ನಾಯಕರ ಬಗ್ಗೆ ನೀವು ಕೇಳಿರಬಹುದು. ಕೆಲವು ನಾಯಕರು ಚುನಾವಣೆಯಲ್ಲಿ ಗೆದ್ದು ದಾಖಲೆಯನ್ನೂ ಮಾಡಿದ್ದಾರೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಚುನಾವಣೆಯಲ್ಲಿ ಸೋತು ದಾಖಲೆ ಮಾಡುತ್ತಿರುವ ನಾಯಕ(Hasnuram Ambedkari)ನ ಬಗ್ಗೆ. ಈ ವ್ಯಕ್ತಿಗೆ ಇಲ್ಲಿಯವರೆಗೆ 94 ಬಾರಿ ಸೋತಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. ಇದು ನಿಮಗೆ ಆಶ್ಚರ್ಯವೆನಿಸಿದರೂ ನಿಜ.


COMMERCIAL BREAK
SCROLL TO CONTINUE READING

ಹಸ್ನೂರಾಮ್ ಅಂಬೇಡ್ಕರ್ ಹೆಸರಿನ ಈ ವ್ಯಕ್ತಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ(UP Assembly Elections 2022)ಯಲ್ಲಿ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಇವರು ತಮ್ಮ ಇಡೀ ಜೀವನದಲ್ಲಿ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ. ಅವರಿಗೆ ಒಂದೇ ಒಂದು ಗೆಲುವು ಕೂಡ ದಕ್ಕಿಲ್ಲ. ಹಸ್ನೂರಾಮ್ ಅವರು ಶೀಘ್ರವೇ ಚುನಾವಣೆಯಲ್ಲಿ ಸೋಲಿನ ಶತಕ ಭಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.  


ಇದನ್ನೂ ಓದಿ: ವಿದೇಶಿ ಕರೆನ್ಸಿ ಕಳ್ಳ ಸಾಗಾಟ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ


ಅಪಹಾಸ್ಯದಿಂದ ಚುನಾವಣೆಗೆ ಸ್ಪರ್ಧಿಸುವ ಉತ್ಸಾಹ


ಹಸ್ನೂರಾಮ್ ಅಂಬೇಡ್ಕರ್ ಆಗ್ರಾದ ಖೇರಗಢ್ ಪಟ್ಟಣದ ನಾಗ್ಲಾ ದುಲ್ಹಾ(Nagla Duleh) ಗ್ರಾಮದ ನಿವಾಸಿ. ಅವರು ಇಲ್ಲಿಯವರೆಗೆ 94 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. 1985ರಿಂದ 2022 ರವರೆಗೆ ಅವರು ಪ್ರತಿ ದೊಡ್ಡ ಮತ್ತು ಸಣ್ಣ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ಪಕ್ಷವೂ ಅವರಿಗೆ ಟಿಕೆಟ್ ನೀಡಿಲ್ಲ, ಪ್ರತಿ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿಯೇ ಅವರು ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದೆ. ಆ ದಿನ 75 ವರ್ಷದ ಹಸ್ನೂರಾಮ್ ನಾಮಪತ್ರವನ್ನು ಪಡೆಯಲು ಆಗ್ರಾ ಜಿಲ್ಲಾಧಿಕಾರಿ ಕಚೇರಿ ತಲುಪಿದ್ದರು.


ವರದಿಗಳ ಪ್ರಕಾರ 1985ರಲ್ಲಿ ಹಸ್ನೂರಾಮ್(Hasnuram Ambedkari) ಅವರು ಪಕ್ಷವೊಂದರಿಂದ ಟಿಕೆಟ್ ಕೇಳಿದ್ದರಂತೆ. ಆದರೆ ನೀನು ಚುನಾವಣೆ(UP Election 2022)ಗೆ ನಿಂತರೆ ಒಂದೂ ವೋಟು ಬೀಳುವುದಿಲ್ಲವೆಂದು ಅನೇಕರು ಅವರನ್ನು ಲೇವಡಿ ಮಾಡಿದ್ದರಂತೆ. ಈ ಅಪಹಾಸ್ಯವೇ ಅವರು ಚುನಾವಣೆಗಳಿಗೆ ಸ್ಪರ್ಧಿಸುವ ಉತ್ಸಾಹವನ್ನು ಹೆಚ್ಚಿಸಿತ್ತು. ನಂತರ ಹಸ್ನೂರಾಮ್ ಸೋಲು-ಗೆಲುವು ಎನ್ನುವುದನ್ನು ಲೆಕ್ಕ ಹಾಕದೆ ಬರುವ ಪ್ರತಿಯೊಂದು ಚುನಾವಣೆಗಳಲ್ಲಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶುರು ಮಾಡಿದರಂತೆ. ಇದೇ ಉತ್ಸಾಹದಲ್ಲಿಯೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಸ್ನೂರಾಮ್ ಎರಡು ಸ್ಥಾನಗಳಿಂದ ಕಣಕ್ಕಿಳಿದಿದ್ದಾರೆ. ಅವರಿಗೆ ತಮ್ಮ ಜೀವನದಲ್ಲಿ 100 ಚುನಾವಣೆಗಳಲ್ಲಿ ಸ್ಪರ್ಧಿಸಬೇಕೆಂಬ ಆಸೆ ಇದೆಯಂತೆ. ಈ ಬಾರಿಯಾದರೂ ಅವರಿಗೆ ಗೆಲುವು ಸಿಗುತ್ತಾ ಕಾದು ನೋಡಬೇಕಿದೆ.


ಇದನ್ನೂ ಓದಿ: ಕಂಡೋರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ಸಿದ್ದರಾಮಯ್ಯ!: ಎಚ್‌ಡಿಕೆ ಆಕ್ರೋಶ


ಕಾಕಾ ಜೋಗಿಂದರ್ ಸಿಂಗ್ ಹೆಸರಿನಲ್ಲಿ ದಾಖಲೆ!


ಭಾರತೀಯ ಚುನಾವಣಾ ಇತಿಹಾಸ(Election History)ದಲ್ಲಿ ಬರೇಲಿಯ ಕಾಕಾ ಜೋಗಿಂದರ್ ಸಿಂಗ್ ಅವರ ಹೆಸರಿನಲ್ಲಿ ಅತಿಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ ದಾಖಲೆ ಇದೆ. ಇವರು ಒಟ್ಟು 300 ದೊಡ್ಡ ಮತ್ತು ಸಣ್ಣ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಸೋಲುವ ಉದ್ದೇಶದಿಂದಲೇ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರಮತೆ. ವಾರ್ಡ್ ಕೌನ್ಸಿಲರ್ ನಿಂದ ಹಿಡಿದು ದೇಶದ ಅಧ್ಯಕ್ಷರ ಚುನಾವಣೆವರೆಗೂ ಇವರು ಸ್ಪರ್ಧಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.