LICಯ ಈ ಯೋಜನೆಯಲ್ಲಿ ಕೇವಲ ಒಂದೇ ಬಾರಿಗೆ ಹಣ ಹೂಡಿಕೆ ಮಾಡಿ, ಜೀವನವಿಡಿ ಪೆನ್ಷನ್ ಪಡೆಯಿರಿ
ಲೈಫ್ ಇನ್ಸುರನ್ಸ್ ಕಾರ್ಪೋರೇಶನ್ (LIC) ಕುರಿತು ನಮ್ಮ-ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದರಲ್ಲಿ ನಾವೆಲ್ಲರೂ ಜೀವ ವಿಮೆ ಪಾಲಸಿ ಕೂಡ ಪಡೆಯುತ್ತೇವೆ. ಆದರೆ, LICಯಲ್ಲಿ ಒಂದು ವಿಶೇಷ ಪಾಲಸಿ ಇದ್ದು, ಇದು ಗ್ರಾಹಕರಿಗೆ ಒಂದೇ ಬಾರಿಗೆ ಹಣ ಹೂಡಿಕೆ ಮಾಡಿ ಜೀವನವಿಡಿ ಪೆನ್ಷನ್ ನೀಡುತ್ತದೆ ಪಡೆಯುವ ಅವಕಾಶ ನೀಡುತ್ತದೆ ಎಂಬುದು ತಿಳಿದಿದೆಯೇ. ಇಲ್ಲ ಎಂದಾದರೆ ಈ ವರದಿಯನ್ನೊಮ್ಮೆ ಓದಿ.
ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC), ದೇಶದಲ್ಲಿ ಇಂದಿಗೂ ಕೂಡ ವಿಮಾ ಪಾಲಸಿ ಪಡೆಯುವ ಒಂದು ವಿಶ್ವಾಸಾರ್ಹ ಬ್ರಾಂಡ್ ಆಗಿದೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ಒಂದು ವಿಶೇಷ ಪಾಲಸಿ ಇದ್ದು, ಇದರಲ್ಲಿ ನೀವು ಕೇವಲ ಒಂದೇ ಬಾರಿಗೆ ಹಣ ಹೂಡಿಕೆ ಮಾಡಿ ಜೀವನ ಪರ್ಯಂತ ಪೆನ್ಷನ್ ಪಡೆಯಬಹುದಾಗಿದೆ. ಈ ಪಾಲಸಿಯ ಕುರಿತು ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದು, ನೀವೂ ಕೂಡ ಇದರಲ್ಲಿ ಹಣ ಹೂಡಿಕೆ ಮಾಡಿ ಜೀವನವಿಡಿ ಆದಾಯ ಗಳಿಕೆ ಮಾಡಬಹುದು.
LICಯ ಪೆನ್ಷನ್ ಯೋಜನೆ
LICಯಡಿ ಬರುವ ಜೀವನ ಶಾಂತಿ ಯೋಜನೆ ರಿಟೈರ್ಮೆಂಟ್ ಬಳಿಕ ತಮ್ಮ ಆದಾಯದಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಮುಂಜಾಗ್ರತೆ ವಹಿಸುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಈ ಪಾಲಸಿ ಮಾಡಿಸುವಾಗ ನಿಮ್ಮ ಬಳಿ ಪೆನ್ಷನ್ ಪಡೆಯುವ ಒಟ್ಟು ಎರಡು ಆಯ್ಕೆಗಳಿರುತ್ತವೆ. ತಕ್ಷಣ (Immidiate) ಇದು ಮೊದಲ ಆಯ್ಕೆಯಾಗಿದ್ದರೆ, ಡೆಫರ್ಡ್ ಎನ್ಯುಟಿ (Differed Annuity) ಇದು ಎರಡನೆಯ ಆಯ್ಕೆಯಾಗಿದೆ. ಈ ಎರಡೂ ಆಯ್ಕೆಗಳು ವಿಭಿನ್ನ ವಿಶೇಷತೆ ಹಾಗೂ ಲಾಭಗಳನ್ನು ಹೊಂದಿವೆ. ರಿಟೈರ್ಮೆಂಟ್ ಬಳಿಕ ಪೆನ್ಷನ್ ಪಡೆಯಲು, ಪಾಲಸಿಧಾರಕರಿಗೆ ಈ ಎರಡು ಆಯ್ಕೆಗಳು ಉತ್ತಮ ವಿಕಲ್ಪಗಳಾಗಿವೆ.
ಜೀವನ ಶಾಂತಿ ಯೋಜನೆ
ಜೀವನ ಶಾಂತಿ ಯೋಜನೆಯ ಅಡಿ ಪಾಲಸಿ ಪಾಲಸಿ ಪಡೆಯುವ ಗ್ರಾಹಕರು ಕನಿಷ್ಠ ಅಂದರೆ 1.5 ಲಕ್ಷ ರೂ. ಹಣ ಹೂಡಿಕೆ ಮಾಡುವುದು ಆವಶ್ಯಕವಾಗಿದೆ. ಇದರಲ್ಲಿ ಗರಿಷ್ಟ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಇದರಲ್ಲಿ 5 ಲಕ್ಷ ಅಥವಾ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣ ಹೂಡಿಕೆ ಮಾಡಬಹುದು. ನೀವು ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಹಣ ಹೂಡಿಕೆ ಮಾಡುವಿರೋ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಉತ್ತಮ ಆದಾಯವನ್ನು ನೀವು ಪಡೆಯಬಹುದಾಗಿದೆ.
ಏನಿದು Immediate ಮತ್ತು Differed Annunity ಪ್ಲಾನ್
Immediate ಅರ್ಥ ಪಾಲಸಿ ಪಡೆದ ಕ್ಷಣದಿಂದಲೇ ನೀವು ಪೆನ್ಷನ್ ಪಡೆಯಲು ಆರಂಭಿಸುವಿರಿ. ಅದೇ, ಡೆಫರ್ಡ್ ಎನ್ಯುಟಿ ಪ್ಲಾನ್ ಅಡಿ ಪಾಲಸಿ ಪಡೆದ ಕೆಲ ಸಮಯದ ನಂತರ (5.10.15,20 ವರ್ಷಗಳು) ಪೆನ್ಷನ್ ಪಡೆಯಲು ಆರಂಬಿಸುವಿರಿ. Immediate ಪಾಲಸಿಯ ಅಡಿ ನಿಮಗೆ ಮತ್ತೆ 7 ವಿಕಲ್ಪಗಳು ಸಿಗಲಿವೆ. ಆದರೆ, Deffered Annuity ಪ್ಲಾನ್ ಅಡಿ ನಿಮಗೆ ಕೇವಲ ಎರಡು ಆಯ್ಕೆಗಳು ಮಾತ್ರ ಸಿಗುತ್ತವೆ. ಈ ಪಾಲಸಿಯಲ್ಲಿ ನೀವು ಸಾಲವನ್ನು ಪಡೆಯಬಹುದಾಗಿದೆ. ಜೊತೆಗೆ 3 ತಿಂಗಳ ಬಳಿಕ ನೀವು ಯಾವಾಗ ಬೇಕಾದರೂ ಕೂಡ ಇದನ್ನು ಸರೆಂಡರ್ ಮಾಡಬಹುದಾಗಿದೆ.
ಹೂಡಿಕೆಗೆ 30 ವರ್ಷ ವಯಸ್ಸು ಕಡ್ಡಾಯ
ಈ ಎರಡೂ ವಿಧದ ಪಾಲಸಿ ಪಡೆಯಲು ನಿಮ್ಮ ವಯಸ್ಸು ಕನಿಷ್ಠ ಅಂದರೆ 30 ಇರಬೇಕು. ತಕ್ಷಣ ಪೆನ್ಷನ್ ಬೇಕಾದರೆ ಗರಿಷ್ಠ ವಯಸ್ಸು 85 ಆಗಿರಬೇಕು. Differment ಪ್ಲಾನ್ ಗೆ ನಿಮ್ಮ ಗರಿಷ್ಠ ವಯಸ್ಸು 79 ವರ್ಷ ಆಗಿರಬೇಕು. LIC ಈ ಪ್ಲಾನ್ ನಲ್ಲಿ ನೀವು ಕೇವಲ ಒಂದೇ ಬಾರಿಗೆ ಹಣ ಹೂಡಿಕೆ ಮಾಡಬೇಕು. ಆದರೆ, ಜೀವನವಿಡಿ ನೀವು ಪೆನ್ಷನ್ ಪಡೆಯಬಹುದು ಹಾಗೂ ಇದು ಗ್ಯಾರಂಟಿ ಪೆನ್ಷನ್ ಆಗಿರುತ್ತದೆ. ಪಾಲಸಿಯನ್ನು ನೀವು ತಂದೆ-ತಾಯಿ, ಸಹೋದರ-ಸಹೋದರಿಯರ ಜೊತೆಗೆ ಸೇರಿ ಜಂಟಿಯಾಗಿಯೂ ಕೂಡ ಪಡೆಯಬಹುದು. ಇದಲ್ಲದೆ ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಎನ್ಯುಟಿ ಆಪ್ಶನ್ ಆಯ್ಕೆ ಮಾಡಬಹುದು.