ಈ ಕ್ಷೇತ್ರದ ನೌಕರರಿಗೆ ಈ ಬಾರಿ ಹೆಚ್ಚು ಇನ್ಕ್ರೀಮೆಂಟ್ ಸಿಗಲಿದೆ.. ನಿಮ್ಮ ಕ್ಷೇತ್ರ ಯಾವುದು?
ಈ ವರ್ಷದ ಅಪ್ರೇಸಲ್ ಪ್ರಕ್ರಿಯೆಯಲ್ಲಿ ನಿಮಗೆ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಎಂಬುದನ್ನು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ.
ನವದೆಹಲಿ:ಇನ್ನೇನು ಕೆಲವೇ ದಿನಗಳಲ್ಲಿ ಫೆಬ್ರವರಿ ತಿಂಗಳು ಅಂತ್ಯಗೊಳ್ಳಲಿದೆ ಹಾಗೂ ನೀವೂ ಕೂಡ ನಿಮ್ಮ ಅಪ್ರೇಸಲ್ ಅರ್ಜಿಯನ್ನು ದಾಖಲಿಸಿರಬಹುದು. ಅಷ್ಟೇ ಅಲ್ಲ ನಿಮ್ಮ ಸಂಬಳ ಹೆಚ್ಚಳದ ಕುರಿತು ಕೂಡ ನೀವು ಆಲೋಚಿಸುತ್ತಿರಬಹುದು. ಮಾರ್ಚ್ ತಿಂಗಳಿನಲ್ಲಿ ನಿಮ್ಮ ಕಂಪನಿ ನಿಮ್ಮ ಸಂಬಳ ಹೆಚ್ಚಳದ ಕುರಿತು ಕೂಡ ನಿಮಗೆ ಪತ್ರ ನೀಡಬಹುದು. ಆದರೆ, ಈ ಬಾರಿ ನಿಮಗೆ ಎಷ್ಟು ಸ್ಯಾಲರಿ ಹೈಕ್ ಸಿಗಲಿದೆ ಎಂಬುದು ನಿಮಗೆ ತಿಳಿದಿದೆಯೇ? ಇಲ್ಲ ಎಂದಾದಲ್ಲಿ ಈ ವರದಿ ತಪ್ಪದೆ ಓದಿ.
ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ?
ಈ ಬಾರಿ ಅಪ್ರೇಸಲ್ ಗಾಗಿ ಹಾಗೂ ಸ್ಯಾಲರಿ ಹೆಚ್ಚಳಕ್ಕೆ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಅನುಕೂಲಕರವಾಗಿಲ್ಲ. AonPlc ನೀಡಿರುವ ತಾಜಾ ವರದಿಯ ಪ್ರಕಾರ ಈ ವರ್ಷ ನಿಮ್ಮ ಸಂಬಳದ ವೃದ್ಧಿಗೆ ಅನುಕೂಲಕರವಾಗಿಲ್ಲ ಎಂದು ಹೇಳಿದೆ. ದೇಶದ GDP ಶೇ.5ರ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹೀಗಾಗಿ ಈ ವರ್ಷ ಸರಾಸರಿ ಸಂಬಳ ವೃದ್ಧಿ ಶೇ.9.1ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಸಂಬಳ ವೃದ್ಧಿ ದರ ಎರಡಂಕಿಯಷ್ಟಿತ್ತು. ಸಂಘಟಿತ ವಲಯಗಳಲ್ಲಿ ಸ್ಯಾಲರಿ ಹೈಕ್ 2009 ರ ಬಳಿಕ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಇರಲಿದೆ.
ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಕಹಿ ಸುದ್ದಿ
ವರದಿಯ ಪ್ರಕಾರ ದೇಶದಲ್ಲಿರುವ ನೌಕರ ವರ್ಗದ ಜನರಿಗೆ ಸರಾಸರಿ ಶೇ.9.1ರಷ್ಟು ಸ್ಯಾಲರಿ ಹೈಕ್ ಸಿಗುವ ಸಾಧ್ಯತೆ ವರ್ತಿಸಲಾಗಿದೆ. ಆದರೆ, ಕೆಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ಸ್ಯಾಲರಿ ವೃದ್ಧಿ ದರ ಗರಿಷ್ಠ ಅಂದರೆ ಶೇ.7.6ರಷ್ಟು ಇರಲಿದೆ. ಇವುಗಳಲ್ಲಿ ಸಾರಿಗೆ ಹಾಗೂ ಲಾಜಿಸ್ಟಿಕ್ ಕ್ಷೇತ್ರಗಳು ಶಾಮೀಲಾಗಿವೆ. ಇನ್ನೊಂದೆಡೆ ಟೆಲಿಕಾಂ, ಆಟೋ, ರಿಯಲ್ ಎಸ್ಟೇಟ್, ಹಾಸ್ಪಿಟಾಲಿಟಿ ಹಾಗೂ ರೆಸ್ಟಾರೆಂಟ್ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅತಿ ಹೆಚ್ಚು ಅಂದರೆ ಶೇ.8.5ರಷ್ಟು ಸಂಬಳ ವೃದ್ಧಿ ಸಿಗಲಿದೆ.
ಈ ಕ್ಷೇತ್ರದಲ್ಲಿನ ನೌಕರರ ಬಲ್ಲೇ.. ಬಲ್ಲೇ..
ಈ ವರ್ಷ ಎಲ್ಲರ ಸಂಬಳ ವೃದ್ಧಿ ಕಡಿಮೆಯಾಗಿಯೇ ಇರಲಿದೆ ಎಂಬುದು ಇದರರ್ಥವಲ್ಲ. ದೇಶದ ಸುಮಾರು ಶೇ.39ರಷ್ಟು ಕಂಪನಿಗಳು ತಮ್ಮ ಕಾರ್ಮಿಕರಿಗೆ ಪ್ರತಿಶತ ಎರಡಂಕಿಗಳಷ್ಟು ಏರಿಕೆ ನೀಡುವ ಸಾಧ್ಯತೆಯನ್ನೂ ಕೂಡ ವರದಿ ವರ್ತಿಸಿದೆ. ಅಂದರೆ, ಈ ಕಂಪನಿಗಳು ತಮ್ಮ ಕಾರ್ಮಿಕರಿಗೆ ಶೇ.10 ಅಥವಾ ಅದಕ್ಕಿಂತ ಹೆಚ್ಚು ಹೈಕ್ ನೀಡುವ ಸಾಧ್ಯತೆ ಇದೆ. ಇವುಗಳಲ್ಲಿ FMCG, ಕೆಮಿಕಲ್ಸ್, ಹೈಟೆಕ್ ಹಾಗೂ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳ ಕಾರ್ಮಿಕರಿಗೆ ಹೆಚ್ಚಿನ ಸ್ಯಾಲರಿ ಹೈಕ್ ಸಿಗುವ ಸಾಧ್ಯತೆ ಇದೆ. ಈ ಕ್ಷೇತ್ರಗಳ ನೌಕರರಿಗೆ ಶೇ.10 ರಷ್ಟು ಹೈಕ್ ಸಿಗುವ ಸಾಧ್ಯತೆ ಇದೆ.