ನವದೆಹಲಿ: ದೇಶಾದ್ಯಂತ ಕೇಳಿ ಬರುತ್ತಿರುವ 'ಹಮ್ ಕೋ ಚಾಹಿಯೇ ಆಜಾದಿ' ಘೋಷಣೆಗಳ ಮೇಲೆ ತೀವ್ರ ಪ್ರಹಾರ ನಡೆಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಘೋಷಣೆ ಕೂಗುವವರನ್ನು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡಿರುವ ಅನುಪಮ್ ಖೇರ್ "ಗೆಳೆಯರೇ ನಮಗೆ ಸ್ವಾತಂತ್ರ್ಯ ಬೇಕು ಎಂಬ ಘೋಷಣೆಗಳನ್ನು ಮೊಳಗಿಸುವವರು ಯಾವ ಸಂಗತಿಯಿಂದ ಸ್ವಾತಂತ್ರ್ಯ ಬಯಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ನಮ್ಮ ದೇಶಕ್ಕೆ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯತೆ ಸಿಕ್ಕಿದೆ. ಅದಕ್ಕಾಗಿ ನಮ್ಮ ಪೂರ್ವಜರು ಸಾಕಷ್ಟು ಶ್ರಮ ಪಟ್ಟಿದ್ದಾರೆ ಮತ್ತು ಸಂಘರ್ಷ ನಡೆಸಿದ್ದಾರೆ. ಮನುವಾದದಿಂದ ಸ್ವಾತಂತ್ರ್ಯ, ಹಸಿವಿನಿಂದ ಸ್ವಾತಂತ್ರ್ಯ, ಜಾತಿವಾದಿಗಳಿಂದ ಸ್ವಾತಂತ್ರ್ಯ ಬೇಕಾಗಿದ್ದರೆ ಅದಕ್ಕಾಗಿ ಶ್ರಮ ಪಡಬೇಕು. ಸ್ವಾತಂತ್ರ್ಯಕ್ಕಾಗಿ ಹಲವರು ಶ್ರಮಿಸಿದ್ದಾರೆ. ಘೋಷಣೆಗಳಿಂದ ಏನಾಗುತ್ತದೆ. ಮನೆಯಲ್ಲಿಯೇ ಕುಳಿತು ಊಟ ಸಿಗುವುದಿಲ್ಲ, ಅದಕ್ಕಾಗಿ ಕೆಲಸ ಮಾಡಬೇಕು. 1947 ರಿಂದ 2020ರವರೆಗೆ ದೇಶ ಕಂಡ ಅಭಿವೃದ್ಧಿಗಾಗಿ ಹಲವರು ಶ್ರಮಿಸಿದ್ದಾರೆ. ಇವರು ಯಾವ ರೀತಿಯ ಸ್ವಾತಂತ್ರ್ಯ ಬಯಸುತ್ತಿದ್ದಾರೆ. ದೇಶಕ್ಕಾಗಿ ಶ್ರಮಪಡಿ, ಕೇವಲ ಘೋಷಣೆಗಳಿಂದ ಏನು ಸಾಧ್ಯವಾಗುವುದಿಲ್ಲ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಈ ವಿಡಿಯೋ ಅನ್ನು ಹಂಚಿಕೊಂಡಿರುವ ಅನುಪಮ್ ಖೇರ್ " ಸ್ವತಂತ್ರ ಭಾರತದಲ್ಲಿ ನಮಗೆ ಯಾವುದೇ ಒಂದು ಸಂಗತಿಯಿಂದ ಸ್ವಾತಂತ್ರ್ಯ ಬೇಕಾದರೆ ಅದಕ್ಕಾಗಿ ಕೆಲಸ ಮಾಡಬೇಕು ಹಾಗೂ ದೇಶದಲ್ಲಿನ ವಿವಿಧ ಕ್ಷೇತ್ರಗಳಲ್ಲಿನ  ಕೋಟ್ಯಂತರ ಯುವಕರು ಇದಕ್ಕಾಗಿ ಶ್ರಮಿಸುತ್ತಿದ್ದು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಬಯಸುತ್ತಿದ್ದಾರೆ.  ಘೋಷಣೆಗಳನ್ನು ಕೂಗುವುದರ ಮೂಲಕ ಸ್ವಾಂತತ್ರ್ಯತೆ ಪಡೆಯಲು ಬಯಸುವವರು ಘೋಷಣೆಗಳನ್ನು ಹೊರತುಪಡಿಸಿ ದೇಶದ ಪ್ರತಿ ಅವರು ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.



ಇದಕ್ಕೂ ಮೊದಲು ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದ ಅನುಪಮ್ ಖೇರ್, "72 ವರ್ಷಗಳ ಬಳಿಕವೂ ಟ್ರಾಫಿಕ್ ನಿಯಮ ಇನ್ನೂ ಅರ್ಥವಾಗದ ಕೆಲ ಮಹಾನುಭಾವರಿಗೆ, ಬಯಲು ಶೌಚದ ಕುರಿತು ಅರಿವು ಮೂಡಿಸಲು ಲಕ್ಷಾಂತರ ರೂ. ಹಣ ವ್ಯಯಿಸಿ ಜಾಹಿರಾತುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ GST ಅರ್ಥವಾಗದ ಇವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಕೇವಲ ಎರಡೇ ಎರಡು ದಿನಗಳಲ್ಲಿ ಅರ್ಥವಾಗಿದೆ" ಎಂದು ಹೇಳಿದ್ದರು.