ನವದೆಹಲಿ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಈ ಬಾರಿ ಜನರು ನಮೋಗೆ ವಿದಾಯ ಹೇಳಿ ಜೈ ಭೀಮ್ ಬೆಂಬಲಿಸಲಿದ್ದಾರೆ ಎಂದು ಹೇಳಿದರು. 


COMMERCIAL BREAK
SCROLL TO CONTINUE READING

ಜಲಾಉನ್ ದಲ್ಲಿ ನ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮಾಯಾವತಿ "ಈ ಬಾರಿ ನೀವೆಲ್ಲರೂ ನಮೋ ನಮೋ ಜನರಿಗೆ ಗುಡ್ ಬೈ ಹೇಳಿ ಜೈ ಭೀಮ್ ಅನುಯಾಯಿಗಳಿಗೆ ಬೆಂಬಲ ವ್ಯಕ್ತಪಡಿಸಲಿದ್ದೀರಿ ಎಂದು ಹೇಳಿದರು."ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಿಂದ ಕೆಳಗೆ ಇಳಿಯಲಿದೆ.ಅವರಿಗೆ ಯಾವುದೇ ರೀತಿಯ ಜುಮಲಾಬಾಜಿ ಅಥವಾ ನಾಟಕಬಾಜಿ ಸಹಾಯವಾಗುವುದಿಲ್ಲ. ಅವರ ಹೊಸ ಚೌಕಿದಾರಿಯ ನಾಟಕಬಾಜಿ ಕೂಡ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಚುನಾವಣೆಗೂ ಮೊದಲು ಬಿಜೆಪಿ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ಅವುಗಳೆನ್ನಲ್ಲ ಈಡೇರಿಸಲು ಅದು ವಿಫಲವಾಯಿತು ಎಂದು ಮಾಯಾವತಿ ಕಿಡಿ ಕಾರಿದರು.


ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ ಅವರು ಸ್ವಾತಂತ್ರದ ನಂತರ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಕೊನೆಗೆ ತನ್ನ ನೀತಿಗಳಿಂದಾಗಿ ಅಧಿಕಾರದಿಂದ ಕೆಳಗೆ ಇಳಿಯುವಂತಾಯಿತು ಎಂದು ಹೇಳಿದರು. ಕಾಂಗ್ರೆಸ್ ವಿಶೇಷ ವಾಗಿ ಸರ್ವ ಸಮಾಜ ಅದರಲ್ಲೂ ಶೋಷಿತ ಸಮುದಾಯವನ್ನು ಕಡೆಗಣಿಸಿತು.ಬುಂದೇಲ್ಖಂಡ್  ಪ್ರದೇಶದಲ್ಲಿ ಬಡತನ ನಿವಾರಣೆ ಮತ್ತು ಉದ್ಯೋಗ ಸೃಷ್ಟಿಗಾಗಿ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಮಾಯಾವತಿ ಆರೋಪಿಸಿದರು.