ಈ ಬಾರಿಯ ಮಹಾ ಕುಂಭಮೇಳ ಅತಿ ದುಬಾರಿ !
ಅಲಹಾಬಾದ್ ನ ತ್ರೀವೇಣಿ ಸಂಗಮದಲ್ಲಿ ನಡೆಯುತ್ತಿರುವ ಈ ಬಾರಿಯ ಮಹಾಕುಂಭ ಮೇಳಕ್ಕೆ ಉತ್ತರಪ್ರದೇಶ ಸರಕಾರವು 4,200 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2013 ರಲ್ಲಿ ನಡೆಸಿದ ಕುಂಭ ಮೇಳಕ್ಕಿಂತಲೂ ಅತ್ಯಧಿಕ ಎನ್ನಲಾಗಿದೆ
ನವದೆಹಲಿ: ಅಲಹಾಬಾದ್ ನ ತ್ರೀವೇಣಿ ಸಂಗಮದಲ್ಲಿ ನಡೆಯುತ್ತಿರುವ ಈ ಬಾರಿಯ ಮಹಾಕುಂಭ ಮೇಳಕ್ಕೆ ಉತ್ತರಪ್ರದೇಶ ಸರಕಾರವು 4,200 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2013 ರಲ್ಲಿ ನಡೆಸಿದ ಕುಂಭ ಮೇಳಕ್ಕಿಂತಲೂ ಅತ್ಯಧಿಕ ಎನ್ನಲಾಗಿದೆ
ಈ ಹಿಂದಿನ ಸರ್ಕಾರವು ಮಹಾಕುಂಭ ಮೇಳಕ್ಕೆ 1,300 ಕೋಟಿ ಮೀಸಲಿಟ್ಟಿತ್ತು ಆದರೆ,ಈ ಬಾರಿ ಉತ್ತರ ಪ್ರದೇಶದ ಸರ್ಕಾರ 4,200 ಕೋಟಿ ರೂಗಳನ್ನು ಮೀಸಲಿಟ್ಟಿದೆ ಎಂದು ರಾಜ್ಯ ಹಣಕಾಸು ಸಚಿವ ರಾಜೇಶ್ ಅಗರ್ವಾಲ್ ಪಿಟಿಐಗೆ ತಿಳಿಸಿದ್ದಾರೆ.
ಇದಲ್ಲದೆ, ಬೇರೆ ಇಲಾಖೆಗಳು ಈ ಮೆಗಾ ಕಾರ್ಯಕ್ಕೆ ಹಣವನ್ನು ಮೀಸಲಿಟ್ಟಿವೆ. ಈ ಬಾರಿ ಕುಂಭಮೇಳ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣವನ್ನು ದ್ವಿಗುಣಗೊಳಿಸಲಾಗಿದೆ ಎಂದು ಅಗರ್ವಾಲ್ ಹೇಳಿದರು. ಇನ್ನು ವಿಸ್ತೀರ್ಣದಲ್ಲಿಯೂ ಕೂಡ ಈ ಹಿಂದೆ 1,600 ಹೆಕ್ಟೇರ್ ಪ್ರದೇಶದಲ್ಲಿ ಮೇಳವನ್ನು ಆಚರಿಸಿದ್ದರೆ ಈ ವರ್ಷದ ಕುಂಭಮೇಳವು 3,200 ಹೆಕ್ಟೇರ್ ಪ್ರದೇಶದಲ್ಲಿದೆ ಎಂದು ಹೇಳಿದರು.
ಯುಪಿ ಸರ್ಕಾರವು ಯಾವಾಗಲೂ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ತಳಮಟ್ಟದ ಮಟ್ಟದಲ್ಲಿ ಸೌಲಭ್ಯಗಳನ್ನು ಸ್ಥಾಪಿಸುವುದರಲ್ಲಿ ಕಾರ್ಯನಿರತವಾಗಿದೆ ಎಂದು ಸಚಿವರು ಹೇಳಿದರು. ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭ ನಡೆದರೆ ಪೂರ್ಣಕುಂಭವು ಪ್ರತಿ 12 ವರ್ಷಗಳಿಗೊಮ್ಮೆ ಬರುತ್ತದೆ. ವಿಶೇಷವೆಂದರೆ ಈ ಯೋಗಿ ಸರ್ಕಾರವು ಈಗ ಅರ್ಧ ಕುಂಭವನ್ನು ಕುಂಭವೆಂದು ಪೂರ್ಣ ಕುಂಭವನ್ನು ಮಹಾಕುಂಭ ಎಂದು ನಾಮಕರಣ ಮಾಡಿದೆ. ಗಂಗಾ,ಯಮುನಾ ,ಮತ್ತು ಸರಸ್ವತಿ ಸಂಗಮದಲ್ಲಿ ಈ ಮೇಳ ನಡೆಯುತ್ತದೆ. ಈ ಮೇಳಕ್ಕೆ ಸಾಧು ಸಂತರು ಹಾಗೂ ಕಲ್ಪವಾಸಿಗಳೆಲ್ಲರು ಸಹಿತ ಈ ಮೇಳಕ್ಕೆ ಆಗಮಿಸುತ್ತಾರೆ.
ಈ ಬಾರಿಯ ಕುಂಭದಲ್ಲಿ - ಮಕರ ಸಂಕ್ರಾಂತಿ (ಜನವರಿ 15), ಪೌಶ್ ಪೂರ್ಣಿಮಾ (ಜನವರಿ 21), ಮಾನಿ ಅಮವಾಸೆ (ಫೆಬ್ರವರಿ 4), ಬಸಂತ್ ಪಂಚಮಿ (ಫೆಬ್ರವರಿ 10), ಮಾಘಿ ಪೂರ್ಣಿಮಾ (ಫೆಬ್ರವರಿ 19) ಮತ್ತು ಮಹಾಶಿವರಾತ್ರಿ (ಮಾರ್ಚ್) 4).ರಂದು ತ್ರೀವೇಣಿ ಸಂಗಮದಲ್ಲಿ ಜನರು ಮಿಯುತ್ತಾರೆ.