ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ವಾರಣಾಸಿಗೆ ಎರಡನೇ ಬಾರಿ ಭೇಟಿ ನೀಡಿದ ಪ್ರಧಾನಿ ಮೋದಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಬಜೆಟ್ ಟೀಕಿಸುವವರ ವಿರುದ್ಧ ಟೀಕಾ ಪ್ರಹಾರ ನಡೆಸಿ ಅವರನ್ನು ವೃತ್ತಿ ಪರ ನಿರಾಶಾವಾದಿಗಳು ಎಂದು ಹೇಳಿದರು.



COMMERCIAL BREAK
SCROLL TO CONTINUE READING

'5 ಟ್ರಿಲಿಯನ್ ಡಾಲರ್ ಆರ್ಥಿಕತೆ ಎಂದರೆ ಏನು, ಈಗ ಇದರ ಸುತ್ತಲೂ ಕುತೂಹಲವಿದೆ. ಸಾಮಾನ್ಯ ಭಾರತೀಯನಿಗೆ ಆ ಗುರಿಯ ಅರ್ಥವೇನು? ನೀವು ಅದನ್ನು ತಿಳಿದುಕೊಳ್ಳುವುದು ಮುಖ್ಯ. ಭಾರತವೇಕೆ ದೊಡ್ಡ ಕನಸು ಕಾಣಬಾರದು?" ಎಂದು ಮೋದಿ ಶುಕ್ರವಾರದಂದು ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನ್ನು ಉಲ್ಲೇಖಿಸಿ ಮಾತನಾಡಿದರು.  



ಇನ್ನು ಮುಂದುವರೆದು ಮಾತನಾಡಿ "ಸರಳವಾಗಿ ಹೇಳುವುದಾದರೆ, 5 ಟ್ರಿಲಿಯನ್ ಡಾಲರ್ ತಲುಪಲು, ನಮ್ಮ ಆರ್ಥಿಕತೆಯು ಸುಮಾರು ಎರಡು ಪಟ್ಟು ಹೆಚ್ಚಾಗಬೇಕಿದೆ. ಆದರೆ ಇದಕ್ಕೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಾ ಇದು ಭಾರತೀಯರ ಸಾಮರ್ಥ್ಯ ಮೀರಿದ್ದು ಎಂದು ಹೇಳುತ್ತಾರೆ. ಆದರೆ ಭಾರತೀಯರಾದ ನಮಗೆ ಕಷ್ಟಗಳು ಎಂದಿಗೂ ನಮ್ಮನ್ನು ತಡೆಯಲಿಲ್ಲ, ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಿಡಿಯನ್ನು ನಾನು ಇಂದಿನ ಯುವಕರಲ್ಲಿ ನೋಡುತ್ತೇನೆ. ಕಷ್ಟಗಳು ನಮ್ಮನ್ನು ಇನ್ನಷ್ಟು ಬಲಪಡಿಸುತ್ತವೆ. ಮತ್ತು ಇನ್ನಷ್ಟು ಅವು ದೃಢ ನಿಶ್ಚಯವನ್ನುಂಟುಮಾಡುತ್ತವೆ ಎಂದು ಹೇಳಿದರು.