ನವದೆಹಲಿ: 30 ಸಾವಿರದ ಪಿಜ್ಜಾ ತಿನ್ನುವವರಿಗೆ 12,000 ವೇತನದ ಉದ್ಯೋಗ ಕಾಣಲ್ಲ ಎಂದು ಹೇಳುವ ಮೂಲಕ ಇತ್ತೀಚೆಗಷ್ಟೇ ದೇಶದಲ್ಲಿ ಮೋದಿ ಸರ್ಕಾರ ಉದ್ಯೋಗಾವಕಾಶವನ್ನು ಸೃಷ್ಟಿಸಿಲ್ಲ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ,  ಕೇಂದ್ರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ರಾಜ್ಯ ಖಾತೆ ಸಚಿವ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗ ಗುಜರಾತಿನ ಸಬರಮತಿ ನದಿ ತೀರದಲ್ಲಿ ಬುಧವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್, ನಾವು ನಾಲ್ಕು ದಶಲಕ್ಷ ಜನರಿಗೆ ಉದ್ಯೋಗಗಳನ್ನು ನೀಡಿದ್ದೇವೆ. ಆ ಕೆಲಸಗಳಲ್ಲಿ 70 ಪ್ರತಿಶತದಷ್ಟು ತಿಂಗಳಿಗೆ 12,000 ಕ್ಕಿಂತ ಕಡಿಮೆ ವೇತನದ್ದು. ನಮ್ಮಲ್ಲಿ ಕೌಶಲ್ಯ ಹೊಂದಿರುವವರು ಕೇಳಲ ಶೇ. 5ರಷ್ಟು ಮಾತ್ರ ಇದ್ದಾರೆ. ಕೌಶಲ ತರಬೇತಿ ಬಗ್ಗೆ ಮೊದಲು ದನಿ ಎತ್ತಿದವರು ಪ್ರಧಾನಿ ಮೋದಿ. ಮುದ್ರಾ ಯೋಜನೆಯಡಿ ಸಾಲ ನೀಡುವುದರ ಜೊತೆಗೆ 10 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಸಿಂಗ್ ಹೇಳಿದರು.