ಲಕ್ನೋ: ಹಿಂದಿ ರಾಷ್ಟ್ರ ಭಾಷೆ ಅಲ್ಲ ಮತ್ತು ಹಿಂದಿ ಹೇರಿಕೆ ವಿಚಾರ ಮತ್ತೆ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ನಟ ಕಿಚ್ಚ ಸುದೀಪ್ ಅವರ ಹೇಳಿಕೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿದೆ. ಸುದೀಪ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ ‘ಹಿಂದಿ ರಾಷ್ಟ್ರ ಭಾಷೆ’ ಎಂದು ವಾದಿಸಿದ್ದರು. ಇದಕ್ಕೆ ‘ಕಿಚ್ಚ’ ತಮ್ಮ ಸ್ಟೈಲ್‍ನಲ್ಲಿಯೇ ತಿರುಗೇಟು ನೀಡಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ಉತ್ತರಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ವಾಸಿಸುವವರು ಹಿಂದಿಯನ್ನು ಪ್ರೀತಿಸಬೇಕು


ಹಿಂದಿ ಹೇರಿಕೆ ವಿಚಾರವಾಗಿ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಪ್ರತಿಕ್ರಿಯಿಸಿದ್ದು, ‘ಹಿಂದಿಯನ್ನು ಪ್ರೀತಿಸದವರನ್ನು ವಿದೇಶಿಯರು ಅಥವಾ ವಿದೇಶಿ ಶಕ್ತಿಗಳೊಂದಿಗೆ ನಂಟು ಹೊಂದಿರುವವರು ಎಂದು ಭಾವಿಸಲಾಗುವುದು. ಹಿಂದಿ ಮಾತನಾಡಲು ಬಯಸದವರು ಈ ದೇಶವನ್ನು ಬಿಟ್ಟು ಬೇರೆಡೆಗೆ ಹೋಗಬೇಕು’ ಎಂದು ಹೇಳಿದ್ದಾರೆ.


ಇದನ್ನೂ ಓದಿ: PSI ನೇಮಕಾತಿ ಅಕ್ರಮ: ತಡರಾತ್ರಿವರಗೆ ನಿದ್ರೆ ಬರದೆ ಪರದಾಡಿದ ದಿವ್ಯಾ ಹಾಗರಗಿ


‘ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕು. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ. ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ, ಈ ದೇಶವು ಒಂದು ಮತ್ತು ಭಾರತದ ಸಂವಿಧಾನವು ಹೇಳುತ್ತದೆ ಭಾರತವು ‘ಹಿಂದೂಸ್ತಾನ್’ ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳವಾಗಿದೆ. ಹಿಂದುಸ್ತಾನ ಹಿಂದಿ ಬಾರದವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆ ಹೋಗಬೇಕು’ ಎಂದು ನಿಶಾದ್ ಹೇಳಿದ್ದಾರೆ.


ಸಂಜಯ್ ನಿಶಾದ್ ಅವರು ‘ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಳ್’ ಪಕ್ಷದ ಸ್ಥಾಪಕರಾಗಿದ್ದಾರೆ. ಇದನ್ನು ನಿಶಾದ್ (NISHAD Party) ಎಂತಲೂ ಕರೆಯಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಇದು ಬಿಜೆಪಿಯ ಮಿತ್ರ ಪಕ್ಷವಾಗಿದೆ.


ಇದನ್ನೂ ಓದಿ: ನಿಮ್ಮ ಅಧಿನಾಯಕಿ ಮತ್ತು ಯುವರಾಜ ಕನ್ನಡ ಮಾತನಾಡುತ್ತಾರೆಯೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ


ಹಿಂದಿಯು ಭಾರತದ ರಾಷ್ಟ್ರೀಯ ಭಾಷೆಯಲ್ಲ. ಆದರೆ, ಸರ್ಕಾರಗಳು ಬಳಸಬಹುದಾದ ಅಧಿಕೃತ ಭಾಷೆ ಎಂಬುದು ಇತ್ಯರ್ಥವಾದ ವಿಷಯವಾಗಿದ್ದರೂ, ರಾಜಕಾರಣಿಗಳು ಇತರ ಭಾರತೀಯ ಭಾಷೆಗಳಿಗಿಂತ ಭಾಷೆಯ ಪ್ರಾಮುಖ್ಯತೆಗಾಗಿ ಆಗಾಗ ವಾದಿಸುತ್ತಾರೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ವಿವಿಧ ಭಾಷೆಗಳನ್ನು ಮಾತನಾಡುವ ನಾಗರಿಕರು ಪರಸ್ಪರ ಸಂವಹನ ನಡೆಸುವಾಗ ‘ಅದು ಭಾರತದ ಭಾಷೆಯಲ್ಲಿ ಇರಬೇಕು’ ಎಂದು ಹಿಂದಿಯನ್ನು ಅರ್ಥೈಸಿದ್ದರು.


ಶಾ ಅವರ ಈ ಹೇಳಿಕೆಗೆ ಹಲವು ವಿರೋಧ ಪಕ್ಷದ ನಾಯಕರಿಂದ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಶಾ ಅವರ ಹಿಂದಿ ಹೇರಿಕೆಯು ಭಾರತದ ‘ಸಮಗ್ರತೆ ಮತ್ತು ಬಹುತ್ವ’ಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಅವರ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ ಈ ಹಿಂದೆ ಹಿಂದಿ ವಿರೋಧಿ ಚಳವಳಿಗಳಲ್ಲಿ ಮುಂಚೂಣಿಯಲ್ಲಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.