ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಮೈತ್ರಿ ಬಿಕ್ಕಟ್ಟಿಗೆ ಇಂದು ಸದನದಲ್ಲಿ ಉತ್ತರ ಸಿಗುವ ನಿರೀಕ್ಷೆಯ ಬೆನ್ನಲ್ಲೇ "ಮಾತನಾಡಬೇಕಿದ್ದ ಮಹಾಶೂರರು ವಿಧಾನ ಸಭೆಯಲ್ಲಿ ನಾಪತ್ತೆ" ಎಂದು ಕರ್ನಾಟಕ ಬಿಜೆಪಿ ಮಾಡಿರುವ ಟ್ವೀಟ್‌ಗೆ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

ಮುಂಬೈನ ರೆನೈಸೆನ್ಸ್ ರೆಸಾರ್ಟ್ ನಲ್ಲಿ ತಂಗಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದರೂ ಸಹ ಅವರು ಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ "ಮಾತನಾಡಬೇಕಿದ್ದ ಮಹಾಶೂರರು ವಿಧಾನ ಸಭೆಯಲ್ಲಿ ನಾಪತ್ತೆ" ಎಂದು ವ್ಯಂಗ್ಯವಾಡಿತ್ತು.


ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸ್, "ಮಾತನಾಡಬೇಕಿರುವ ಮಹಾಶೂರರು ಮುಂಬೈ ರೆಸಾರ್ಟ್ಲಲ್ಲಿ ನಿಮ್ಮ ಸುಪರ್ದಿಯಲ್ಲೇ ಇದ್ದಾರೆ. ಬಿಜೆಪಿ ಅವರನ್ನು ಅಪಹರಿಸಿದೆ. ಮಾತನಾಡದಂತೆ ಹಣ-ಅಧಿಕಾರದ ಆಮಿಷ ಒಡ್ಡಿದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಿರುವ ಶಾಸಕರಿಗೆ ಐಟಿ-ಇಡಿ ದಾಳಿಯ ಬೆದರಿಕೆಯೊಡ್ಡಿ ಬಾಯಿಮುಚ್ಚಿಸಲಾಗಿದೆ" ಎಂದು ಹೇಳಿದೆ.