`ವಂದೇ ಮಾತರಂ ಸ್ವೀಕರಿಸಿದವರು ದೇಶದಲ್ಲಿರಲು ಅರ್ಹರಲ್ಲ`
ಈ ಕುರಿತು ಮಾತನಾಡಿರುವ ಬಿಜೆಪಿ ಸಂಸದ , ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಅಲ್ಪಸಂಖ್ಯಾತರಿಗೆ ನಾಗರಿಕತೆ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆ BJP ಸಂಸದ ಪ್ರತಾಪ್ ಸಾರಂಗಿ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. CAA ಜಾರಿಗೊಳಿಸುವುದು ದೇಶ ವಿಭಜನೆಯ ಪಾಪದ ಪ್ರಾಯಶ್ಚಿತ್ತ ಎಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವವರ ಬಗ್ಗೆ ಕಿಡಿ ಕಾರಿರುವ ಪ್ರತಾಪ್ ಸಾರಂಗಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ, "ಯಾರಿಗೆ ವಂದೇ ಮಾತರಂ ಮಾನ್ಯವಿಲ್ಲವೋ ಅವರಿಗೆ ದೇಶದಲ್ಲಿ ಇರುವ ಅಧಿಕಾರ ಇಲ್ಲ" ಎಂದಿದ್ದಾರೆ.
ಗುಜರಾತ್ ನ ಸೂರತ್ ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿರುವ ಮೇಲೆ ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಾರಂಗಿ, "ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದ್ದು, ಕಾಂಗ್ರೇಸ್ ಇದಕ್ಕೆ ಆಭಾರಿಯಾಗಬೇಕು ಎಂದಿದ್ದಾರೆ.
ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡುವ ಕೆಲಸ ಮಾಡಿದ್ದು, ನಾವು ಅವರು ಮಾಡಿದ ಪಾಪದ ಪ್ರಾಯಶ್ಚಿತ್ತ ಮಾಡುತ್ತಿದ್ದೇವೆ ಎಂದಿದ್ದಾರೆ. ಸದ್ಯ ದೇಶಾದ್ಯಂತ ಕಾಂಗ್ರೆಸ್ ನ ಅಸ್ತಿತ್ವ ಮುಗಿಯಲು ಬಂದಿದ್ದು, ಅವರು ದೇಶಾದ್ಯಂತ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.