ಕಾಲುವೆಯಲ್ಲಿ ಹರಿದು ಬಂತು ಸಾವಿರಾರು ಮೊಟ್ಟೆ : ಮೊಟ್ಟೆಗಾಗಿ ಮುಗಿಬಿದ್ದ ಜನ
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ, ಹರಿಯವಾನ್ ಪೊಲೀಸ್ ಠಾಣೆ ಪ್ರದೇಶದ ಅಚುವಾಪುರ ಗ್ರಾಮದ ಶಾರದಾ ಕಾಲುವೆಯಲ್ಲಿ ಇದ್ದಕ್ಕಿದ್ದಂತೆ ಕೆಲವು ಬಿಳಿ ವಸ್ತುಗಳು ಹರಿದು ಬರುತ್ತಿರುವುದು ಜನರ ಗಮನಕ್ಕೆ ಬಂದಿದೆ.
ನವದೆಹಲಿ : ಯಾವುದೇ ವಸ್ತು ಉಚಿತವಾಗಿ ಸಿಗುತ್ತದೆ ಎಂದರೆ ಯಾರಿಗೆ ತಾನೇ ಬೇಡ. ಎಲ್ಲಿಯಾದರೂ ಉಚಿತವಾಗಿ ಏನಾದರೂ ಸಿಗುತ್ತದೆ ಎಂದರೆ ಅಲ್ಲಿ ಜನರ ದಂಡೇ ಸೇರುತ್ತದೆ. ಇಂಥದ್ದೇ ದೃಶ್ಯ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಕಂಡು ಬಂತು. ಇಲ್ಲಿಯ, ಶಾರದಾ ಕಾಲುವೆಯಲ್ಲಿ ಇದ್ದಕ್ಕಿದ್ದಂತೆ ಸಾವಿರಾರು ಮಾಲುವೆಯಲ್ಲಿ ಏನೋ ಬಿಳಿ ವಸ್ತು ಹರಿದು ಬರುತ್ತಿದೆ ಎಂದು ಕೊಂಡ ಜನ ಕುತೂಹಲದಿಂದಲೇ ಕಾಲುವೆ ಸಮೀಪ ಬಂದು ಸೇರಿದರು. ನಂತರ ಅದು ಮೊಟ್ಟೆ (Egg flowing in canal) ಎಂದು ಗೊತ್ತಾದಾಗ ಜನರ ಕುತೂಹಲಕ್ಕೆ ಪಾರವೇ ಇರಲಿಲ್ಲ. ಮೊಟ್ಟೆ ಕಾಲುವೆಯಲ್ಲಿ ಹೇಗೆ ಹರಿದು ಬರುತ್ತಿದೆ ಎಂದು ಸ್ವಲ್ಪ ಜನ ಯೋಚಿಸಿದರೆ ಇನ್ನು ಕೆಲವರಂತೂ ಎಲ್ಲಿಂದ ಬಂದರೇನು ಎಂದು ಮೊಟ್ಟೆಗಾಗಿ ಮುಗಿ ಬೀಳಲು ಆರಂಭಿಸಿದರು.
ಉತ್ತರ ಪ್ರದೇಶದ (Uttar Paradesh) ಹರ್ದೋಯ್ ಜಿಲ್ಲೆಯಲ್ಲಿ, ಹರಿಯವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಚುವಾಪುರ ಗ್ರಾಮದ ಶಾರದಾ ಕಾಲುವೆಯಲ್ಲಿ ಇದ್ದಕ್ಕಿದ್ದಂತೆ ಕೆಲವು ಬಿಳಿ ವಸ್ತುಗಳು ಹರಿದು ಬರುತ್ತಿರುವುದು ಜನರ ಗಮನಕ್ಕೆ ಬಂದಿದೆ. ಆಶ್ಚರ್ಯದಿಂದಲೇ ಹತ್ತಿರ ಹೋಗಿ ನೋಡಿದಾಗ ಅದು ಮೊಟ್ಟೆ (Egg) ಎಂದು ಗೊತ್ತಾಗಿದೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಕಾಲುವೆಯಲ್ಲಿ (Canal) ಮೊಟ್ಟೆ ಹರಿದು ಬರುತ್ತಿರುವುದು ಗೊತ್ತಾಗುತ್ತಿದ್ದಂತೆ, ಕಾಲುವೆ ಬಳಿ ಜನ ಸೇರಲು ಆರಂಭಿಸಿದರು. ಕಾಲುವೆಗಳಲ್ಲಿ ಹರಿದು ಬರುತ್ತಿರುವ ಮೊಟ್ಟೆಯನ್ನು (Egg flowing in canal) ಚೀಲಗಳಲ್ಲಿ ತುಂಬಿಸಿ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂತು. ಇನ್ನು ಕೆಲವು ಯುವಕರಂತೂ ಮೊಟ್ಟೆಗಾಗಿ ಕಾಲುವೆಗೆ ಹಾರಿದ್ದಾರೆ.
ಇದನ್ನೂ ಓದಿ: Indian Railways:ಈಗ train miss ಆಗುವ ಭಯವಿಲ್ಲ, ರೈಲ್ವೆ ನೀಡಿದೆ ಹೊಸ ಸೌಲಭ್ಯ
ಸುಮಾರು 2 ಗಂಟೆಗಳ ಕಾಲ ಕಾಲುವೆಯಲ್ಲಿ ಕೋಳಿ ಮೊಟ್ಟೆಗಳು ಹರಿದು ಬರುತ್ತಲೇ ಇತ್ತುಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಮೊಟ್ಟೆಗಳನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು ಎಂದವರು ತಿಳಿಸಿದ್ದಾರೆ. ಕಾಲುವೆಯಲ್ಲಿ ಬಂದ ಮೊಟ್ಟೆಗಳನ್ನು ಎಲ್ಲರೂ ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದರೇ ಹೊರತು ಇದು ಎಲ್ಲಿಂದ ಬಂತು ಎನ್ನುವ ಮಾಹಿತಿ ಮಾತ್ರ ಯಾರಿಗೂ ಇರಲಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಕೋಳಿ ಮೊಟ್ಟೆಗಳು ಕಾಲುವೆಯಲ್ಲಿ ಹರಿದು ಬರಲು ಕಾರಣ ಏನು ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಇದನ್ನೂ ಓದಿ: Automatic Cash Delivery: ಎಟಿಎಂನಿಂದ ಇದ್ದಕ್ಕಿದ್ದಂತೆ 500-500 ನೋಟುಗಳು ಹೊರಬಂದಾಗ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ