ಆಗ್ರಾ: ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಂದು ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಸಾಕಿದ ಹೆಣ್ಣು ನಾಯಿಯೊಂದನ್ನು ಅದರ ಮಾಲಿಕರ ಮನೆಯಿಂದ ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 11 (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ) ಮತ್ತು 377(ಅಸ್ವಾಭಾವಿಕ ಅಪರಾಧ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಜಲೇಸರ್‌ ರಸ್ತೆ ಪ್ರದೇಶದಲ್ಲಿ ಮಾಲೀಕರ ಮನೆಯಿಂದ ಕೆನಿನ್‌ ಎನ್ನುವ ನಾಯಿಯನ್ನು ಅಪಹರಣ ಮಾಡಿದ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳನ್ನು ದಿನೇಶ್ ಕುಮಾರ್, ಸತೀಶ್ ಮತ್ತು ಅಶೋಕ್ ಎಂದು ಗುರುತಿಸಲಾಗಿದೆ.


ಘಟನೆಯ ಬಗ್ಗೆ ಮಾಹಿತಿ ನೀಡಿರುವ ನಾಯಿಯ ಮಾಲೀಕರಾದ ಸಂತೋಷ್ ದೇವಿ ಅವರು, ಆರೋಪಿ ತಮ್ಮ ಕುಟುಂಬಕ್ಕೆ ಪರಿಚಿತನಾಗಿದ್ದು, ಪಕ್ಕದ ಮನೆಯಲ್ಲೇ ವಾಸವಿದ್ದಾನೆ. ಕಳೆದ ಗುರುವಾರ ಆರೋಪಿಗಳು ನಾಯಿಗೆ ಮೊಟ್ಟೆಯ ಆಮಿಷವೊಡ್ಡಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.


ರಾತ್ರಿ 10 ಗಂಟೆಯ ಬಳಿಕ ಕೆನಿನ್ ಮನೆಯಲ್ಲೆಲ್ಲೂ ಕಾಣಲಿಲ್ಲ. ಎಲ್ಲೋ ಇರಬೇಕು ಎಂದು ಸುಮ್ಮನಾದೆ. ಆದರೆ ಬೆಳ್ಳಿಗೆ ಎಲ್ಲಾ ಕಡೆ ಹುಡುಕಿದರೂ ಕೆನಿನ್ ಸಿಗಲಿಲ್ಲ. ಆದರೆ ಆರೋಪಿ ದಿನೇಶನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನಾಯಿಯನ್ನು ಕಂಡಿದ್ದಾಗಿ ಸಂತೋಷ್ ದೇವಿ ತಿಳಿಸಿದ್ದಾರೆ.


ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ ನಾಯಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ ಎನ್ನಲಾಗಿದೆ.