ಜಮ್ಮು-ಕಾಶ್ಮೀರದಲ್ಲಿ ಬಾಂಬ್ ಸ್ಪೋಟದಿಂದ ಮೂವರು ಪೋಲೀಸರ ಹತ್ಯೆ
ಸೋಪೋರೆ: ಬಾರಾಮುಲ್ಲಾ ಜಿಲ್ಲೆಯ ಸೋಪೋರೆಯ ಛೋಟಾ ಬಜಾರ್ ಮತ್ತು ಬಡಾ ಬಜಾರ್ ನಲ್ಲಿ ಉಗ್ರಗಾಮಿಗಳು ಐಇಡಿ ಬಾಂಬ್ ಸ್ಪೋಟಿಸಿದ ಪರಿಣಾಮವಾಗಿ ಮೂವರು ಪೊಲೀಸರು ಮೃತಪಟ್ಟಿದ್ದಾರೆ.
ಈ ಘಟನೆಯು ಶನಿವಾರದಂದು ಬೆಳಗ್ಗೆ ಸೋಪೋರನ ಮುಖ್ಯ ಮಾರ್ಕೆಟ್ನಲ್ಲಿ ಐಇಡಿ ಬಾಂಬ್ ನ್ನು ಅಳವಡಿಸಿ ಈ ದುಷ್ಕ್ರತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ.ಈ ಘಟನೆಯಲ್ಲಿ ಮೃತಪಟ್ಟ ಪೊಲೀಸರು ಭಾರತೀಯ ಮೀಸಲು ಪೋಲಿಸ್ ಪಡೆಯ ಮೂರನೆಯ ಬಟಾಲಿನ್ ದವರು ಎಂದು ಹೇಳಲಾಗುತ್ತಿದೆ.
ಈ ಘಟನೆಗೆಯಲ್ಲಿ ಮೃತಪಟ್ಟಿರುವ ಪೊಲೀಸರಿಗೆ ಮೆಹಬೂಬಾ ಮುಫ್ತಿ ಸಂತಾಪ ಸೂಚಿಸಿರುವ ಸೂಚಿಸಿದ್ದಾರೆ. ಈ ಸ್ಥಳದಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಭಾರಿ ಪ್ರಮಾಣದ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.