ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಶನಿವಾರ ಮುಂಜಾನೆ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಸೇನಾಪಡೆ ಎನ್​ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ. 


COMMERCIAL BREAK
SCROLL TO CONTINUE READING

ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕಾರ್ಯಾಚರಣೆ ವೇಳೆ ಓರ್ವ ಮಾಜಿ ಸೈನಿಕ ಹಾಗೂ ಇಬ್ಬರು ಸ್ಥಳೀಯ ಯುವಕರು ಸೇರಿದಂತೆ ಮೂವರು ಉಗ್ರರು ಸಾವನ್ನಪ್ಪಿದ್ದು, ಉಳಿದಂತೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ.


ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಇರುವ ಖಚಿತ ಮಾಹಿತಿ ಪಡೆದು ಯೋಧರು ಕಾರ್ಯಾಚರಣೆಗೆ ಇಳಿದಿದ್ದರು. ಕಾರ್ಯಾಚರಣೆ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿಗೈಯಲು ಮುಂದಾದಾಗ ಅದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು ಮೂವರು ಉಗ್ರರ ಹೆಡಮುರಿ ಕಟ್ಟಿದ್ದಾರೆ. 


 ಎನ್​ಕೌಂಟರ್ ಗೆ ಬಲಿಯಾದ ಮೂವರು ಉಗ್ರರಲ್ಲಿ ಝಾಹೂರ್ ಥೋಕಾರ್ ಈ ಹಿಂದೆ ಭಾರತೀಯ ಸೇನೆಯಲ್ಲಿ ಯೋಧನಾಗಿದ್ದ. ಕಳೆದ ವರ್ಷ ಎಕೆ 47 ರೈಫಲ್ ಜೊತೆಗೆ ಆರ್ಮಿ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದು, ಬಳಿಕ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದ ಎನ್ನಲಾಗಿದೆ.