ಅನಂತ್‌ನಾಗ್ : ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ (Anantnag) ಜಿಲ್ಲೆಯ ಖುಲ್‌ಚೋಹರ್ ಪ್ರದೇಶದಲ್ಲಿ ಸೋಮವಾರ (ಜೂನ್ 29) ಬೆಳಿಗ್ಗೆ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಮೂವರು ಅಪರಿಚಿತ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಭಯೋತ್ಪಾದಕರ ಗುರುತುಗಳು ಪತ್ತೆಹಚ್ಚಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಪಡೆಗಳ ತಂಡ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.


ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರ ಜಂಟಿ ತಂಡ, 19 ಆರ್ಆರ್ ಆರ್ಮಿ ಮತ್ತು ಸಿಆರ್ಪಿಎಫ್ ಖುಲ್ಚೋಹರ್ ಪ್ರದೇಶದಲ್ಲಿ ಕಾರ್ಡನ್-ಅಂಡ್-ಸರ್ಚ್-ಆಪರೇಷನ್ ಅನ್ನು ಪ್ರಾರಂಭಿಸಿದ ನಂತರ ಪೊಲೀಸರು ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.


ಜಂಟಿ ತಂಡವು ಶಂಕಿತ ಸ್ಥಳವನ್ನು ಸುತ್ತುವರೆದಿದ್ದರಿಂದ, ತಲೆಮರೆಸಿಕೊಂಡ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಜಂಟಿ ತಂಡವು ಪ್ರತೀಕಾರಕ್ಕೆ ಮುಂದಾಗಿದ್ದು ಮೂವರು ಭಯೋತ್ಪಾದಕರು ಹತರಾಗಿದ್ದಾರೆ.  ಭದ್ರತಾ ಪಡೆಗಳು ಸ್ಥಳದಿಂದ ಮೃತ ದೇಹಗಳನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.


ಈ ಮೂವರು ಭಯೋತ್ಪಾದಕರ ಮುಖಾಮುಖಿಯೊಂದಿಗೆ ಈ ವರ್ಷದಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳ 7 ಕಾರ್ಯಾಚರಣಾ ಕಮಾಂಡರ್‌ಗಳು ಸೇರಿದಂತೆ ಕಣಿವೆಯಲ್ಲಿ ನಿರ್ಮೂಲನಗೊಂಡ ಭಯೋತ್ಪಾದಕರ ಸಂಖ್ಯೆ 116ಕ್ಕೆ ತಲುಪಿದೆ.


ಇದು ಜೂನ್ ತಿಂಗಳಲ್ಲಿ ನಡೆದ 13ನೇ ಎನ್‌ಕೌಂಟರ್‌ (Encounter) ಆಗಿದ್ದು ಈ ತಿಂಗಳಲ್ಲಿ ಈವರೆಗೆ 40 ಕ್ಕೂ ಹೆಚ್ಚು ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಹತರಾಗಿದ್ದಾರೆ.


ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಹಿಜ್ಬುಲ್ ಮುಜಾಹಿದ್ದೀನ್ ಭದ್ರತಾ ಪಡೆಗಳ ಮುಖ್ಯ ಗುರಿಯಾಗಿ ಉಳಿದಿದೆ. 2020ರಲ್ಲಿ ಹಿಜ್ಬುಲ್ನ ದೀರ್ಘಕಾಲೀನ ಕಾರ್ಯಾಚರಣಾ ಕಮಾಂಡರ್ ರಿಯಾಜ್ ನಾಯ್ಕು ಸಹ ಕೊಲ್ಲಲ್ಪಟ್ಟಿರುವುದು ಗಮನಾರ್ಹ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ರಾಲ್ ಈಗ ಹಿಜ್ಬುಲ್ ಭಯೋತ್ಪಾದಕರಿಂದ ಮುಕ್ತವಾಗಿದೆ ಮತ್ತು ಇದು ಒಂದು ಪ್ರಮುಖ ಸಾಧನೆಯಾಗಿದೆ ಎಂದು ಹೇಳಿದ್ದರು. ಏಕೆಂದರೆ ಟ್ರಾಲ್ 1989 ರಿಂದ ಹಿಜ್ಬುಲ್ ಮುಜಾಹಿದ್ದನ್ ಕೇಂದ್ರವಾಗಿ ಉಳಿದಿತ್ತು.