ಒಂದು ವೇಳೆ ನೀವೂ ಕೂಡ ಇಂಡೆನ್ ಅಡುಗೆ ಅನಿಲ ಕಂಪನಿಯ ಗ್ರಾಹಕರಾಗಿದ್ದರೆ. ಈ ಸುದ್ದಿ ನೀವು ಓದಲೇಬೇಕು ಮತ್ತು ನಿಮ್ಮ ಗ್ಯಾಸ್ ಕನೆಕ್ಷನ್ ಅನ್ನು ನೀವು ಆಧಾರ್ ಜೊತೆ ಲಿಂಕ್ ಮಾಡಲೇಬೇಕು. ಒಂದು ವೇಳೆ ನೀವು ಈ ರೀತಿ ಮಾಡದೆ ಹೋದಲ್ಲಿ ನಿಮ್ಮ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುವುದಿಲ್ಲ. ಒಂದು ವೇಳೆ ನೀವು ನಿಮ್ಮ ಇಂಡೆನ್ ಅಡುಗೆ ಅನಿಲದ ಕನೆಕ್ಷನ್ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ನಿಮಗೆ ಬರಬೇಕಾಗಿರುವ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ. ಈ ಕೆಲಸವನ್ನು ನೀವು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದ್ದು, ತುಂಬಾ ಸರಳವಾಗಿದೆ.


COMMERCIAL BREAK
SCROLL TO CONTINUE READING

ನಿಮ್ಮ ಗ್ಯಾಸ್ ಕನೆಕ್ಷನ್ ಅನ್ನು ನೀವು ವಿವಿಧ ರೀತಿಯಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಜೋಡಿಸಬಹುದು. ಈ ಕೆಲಸವನ್ನು ನೀವು ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡುವ ಮೂಲಕ ಅಥವಾ ಆನ್ಲೈನ್ ಮೂಲಕ ಅಥವಾ IVRS ಪ್ರಕ್ರಿಯೆಯ ಮೂಲಕ ಕೂಡ ಮಾಡಬಹುದು. ಆದರೆ, SMS ಅಥವಾ ಕಸ್ಟಮರ್ ಕೇರ್ ಸಂಖ್ಯೆಯನ್ನು ಡೈಲ್ ಮಾಡುವ ಮೂಲಕ ಮತ್ತಷ್ಟು ಸುಲಭವಾಗಿ ಮಾಡಬಹುದು.


SMS ಮೂಲಕ ಹೀಗೆ ಈ ಕೆಲಸವನ್ನು ಮಾಡಿ
- ಇದಕ್ಕಾಗಿ ಮೊದಲು ನೀವು ನಿಮ್ಮ ಮೊಬೈಲ್ ಸಂಖ್ಯೆ ಇಂಡೆನ್ ಕಂಪನಿಯಲ್ಲಿ ಅಧಿಕೃತ ಸಂಖ್ಯೆಯಾಗಿ ನಮೂದಾಗಿರುವುದನ್ನು ಸುನಿಶ್ಚಿತಗೊಳಿಸಬೇಕು.
- ಮೊಬೈಲ್ ಸಂಖ್ಯೆ ರಿಜಿಸ್ಟರ್ ಮಾಡದೆ ನೀವು ಯಾವ ಕೆಲಸವನ್ನು ಸಹ ಮಾಡಲಾಗುವುದಿಲ್ಲ.
- ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ರಿಜಿಸ್ಟರ್ ಆಗಿರದೆ ಹೋದರೆ, ಒಂದು SMS ಕಳುಹಿಸಿ ನೀವು ಈ ಕೆಲಸ ಮಾಡಬೇಕು.
- ಇದಕ್ಕಾಗಿ ನೀವು ನಿಮ್ಮ ಮೆಸೇಜ್ ಬಾಕ್ಸ್ ಗೆ ಭೇಟಿ ನೀಡಿ IOC<ಗ್ಯಾಸ್ ಏಜೆನ್ಸಿಯ ಟೆಲಿಫೋನ್ ನಂಬರ್ ನ STD ಕೋಡ್><ನಿಮ್ಮ ಕಸ್ಟಮರ್ ಸಂಖ್ಯೆ> ಟೈಪ್ ಮಾಡಬೇಕು.
- ನಿಮ್ಮ ಗ್ಯಾಸ್ ಏಜೆನ್ಸಿ ನಂಬರ್ ತಿಳಿದುಕೊಳ್ಳಲು http://indane.co.in/sms_ivrs.php ಗೆ ಭೇಟಿ ನೀಡಿ.
- ಮೆಸ್ಸೇಜ್ ಕಳುಹಿಸಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ರಿಜಿಸ್ಟರ್ ಆಗಲಿದೆ.
- ಇದಾದ ಬಳಿಕ ನೀವು ನಿಮ್ಮ ಆಧಾರ್ ಸಂಖ್ಯೆ ಹಾಗೂ ಗ್ಯಾಸ್ ಕನೆಕ್ಷನ್ ಲಿಂಕ್ ಮಾಡಲು SMS ಕಳುಹಿಸಬೇಕು.
- ಇದಕ್ಕಾಗಿ ನಿಮ್ಮ ಮೆಸ್ಸೇಜ್ ಬಾಕ್ಸ್ ನಲ್ಲಿ UDI<ಆಧಾರ್ ಸಂಖ್ಯೆ> ಟೈಪ್ ಮಾಡಿ ಅದೇ ನಂಬರ್(ಗ್ಯಾಸ್ ಏಜೆನ್ಸಿ ನಂಬರ್)ಗೆ ಕಳುಹಿಸಬೇಕು.
- ಹೀಗೆ ಮಾಡುವುದರಿಂದ ನಿಮ್ಮ ಗ್ಯಾಸ್ ಕನೆಕ್ಷನ್ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಲಿದೆ ಹಾಗೂ ಈ ಕುರಿತು ನಿಮ್ಮ ಮೊಬೈಲ್ ಸಂಖ್ಯೆಗೂ ಕೂಡ SMS ಬರಲಿದೆ.


ಕಾಲ್ ಮಾಡಿ ಕೂಡ ನೀವು ಲಿಂಕ್ ಮಾಡಬಹುದು
ಒಂದು ವೇಳೆ ನೀವು ಇಂಡೆನ್ ಗ್ಯಾಸ್ ಕನೆಕ್ಷನ್ ಹೊಂದಿದ್ದರೆ ಈ ಕೆಲಸವನ್ನು ನೀವು ಕೇವಲ ಒಂದು ಕಾಲ್ ಮಾಡುವ ಮೂಲಕ ನಿಮ್ಮ ಸಂಖ್ಯೆಯನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಬಹುದು. ಇದಕ್ಕಾಗಿ ನೀವು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 1800 2333 555 ಸಂಖ್ಯೆಗೆ ಕಾಲ್ ಮಾಡಿ ಮಾಡಬಹುದು. ಅಷ್ಟೇ ಅಲ್ಲ ಕಸ್ಟಮರ್ ಕೇರ್ ಸಂಖ್ಯೆಗೂ ಕೂಡ ನೀವು ಡೈಲ್ ಮಾಡಿ ಅಧಿಕಾರಿಯ ಜೊತೆಗೆ ಮಾತನಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಿಮ್ಮ ಗ್ಯಾಸ್ ಕನೆಕ್ಷನ್ ಗೆ ಜೋಡಣೆ ಮಾಡಬಹುದು.