ನವದೆಹಲಿ : ಶತಾಬ್ದಿ ರೈಲುಗಳ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಸದ್ಯದಲ್ಲೇ ರೈಲ್ವೆ ಇಲಾಖೆ ದರಗಳನ್ನು ಕಡಿತಗೊಳ್ಳಲಿದೆ. ಈ ಬಗ್ಗೆ ಪ್ರಭಾತ್ ಖಬರ್ ವರದಿ ಮಾಡಿದ್ದು, 25 ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳ ಟಿಕೇಟ್ ದರಗಳನ್ನು ಕಡಿತಗೊಳಿಸಲಾಗುವುದು ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹೇಳಿದೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷ ಪ್ರಾಯೋಗಿಕ ಆಧಾರದ ಮೇಲೆ ಎರಡು ಮಾರ್ಗಗಳ ರೈಲು ದರಗಳಲ್ಲಿ ಕಡಿತಗೊಳಿಸಲಾಗಿತ್ತು. ಅ ಎರಡು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.63 ರಷ್ಟು ಹೆಚ್ಚಳವಾದ ಕಾರಣ ಭಾರತೀಯ ರೈಲ್ವೆಯ ಆದಾಯದಲ್ಲಿ ಶೇ.17ರಷ್ಟು ಹೆಚ್ಚಳವಾಗಿದ್ದು, ಯಶಸ್ಸು ಸಾಧಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.


ಪ್ರಸ್ತುತ, ಭಾರತೀಯ ರೈಲ್ವೆಯಡಿ 45 ಶತಾಬ್ದಿ ರೈಲುಗಳು ಸಂಚರಿಸುತ್ತಿದ್ದು, ಇವು ದೇಶದಲ್ಲೇ ಅತಿ ವೇಗದ ರೈಲುಗಳಲ್ಲಿ ಒಂದಾಗಿವೆ.