ಭಾರತದಲ್ಲಿ ಹುಲಿಗಳ ಸಂಖ್ಯೆ ಶೇಕಡಾ 33% ರಷ್ಟು ಹೆಚ್ಚಳ
ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಇತ್ತೀಚಿಗಿನ ಅಂಕಿ ಅಂಶಗಳು ಸಾಬೀತು ಮಾಡಿವೆ.
ನವದೆಹಲಿ: ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಇತ್ತೀಚಿಗಿನ ಅಂಕಿ ಅಂಶಗಳು ಸಾಬೀತು ಮಾಡಿವೆ.
ಸೋಮವಾರದಂದು ಪ್ರಧಾನಿ ಬಿಡುಗಡೆ ಮಾಡಿರುವ ಅಖಿಲ ಭಾರತ ಹುಲಿ ಅಂದಾಜು - 2018 ರ ಅಂಕಿಅಂಶಗಳ ಪ್ರಕಾರ ಹುಲಿಗಳ ಸಂಖ್ಯೆ ಸಂಖ್ಯೆಯಲ್ಲಿ 33.28 ರಷ್ಟು ಹೆಚ್ಚಳವಾಗಿದೆ.ಈಗ 2014 ರಲ್ಲಿ 2,226 ರಿಂದ 2018 ರಲ್ಲಿ 2,967 ಕ್ಕೆ ಏರಿಕೆಯಾಗಿದೆ.
ಈಗ ನೂತನ ಹುಲಿಗಳ ಸಮೀಕ್ಷೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ 'ಒಂಬತ್ತು ವರ್ಷಗಳ ಹಿಂದೆ, ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಹುಲಿಗಳ ಜನಸಂಖ್ಯೆಯನ್ನು 2022ಕ್ಕೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಯಿತು. ಭಾರತದಲ್ಲಿ ನಾವು ನಾಲ್ಕು ವರ್ಷಗಳ ಹಿಂದೆಯೇ ಈ ಗುರಿಯನ್ನು ಪೂರ್ಣಗೊಳಿಸಿದ್ದೇವೆ' ಎಂದು ಹೇಳಿದರು. ಹುಲಿ ಜನಗಣತಿಯ ಫಲಿತಾಂಶಗಳು ಪ್ರತಿಯೊಬ್ಬ ಭಾರತೀಯ ಹಾಗೂ ಪ್ರಕೃತಿ ಪ್ರೇಮಿ ಸಂತಸಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆಯ ದುಷ್ಪರಿಣಾಮವನ್ನು ತಗ್ಗಿಸುವಲ್ಲಿ ಸರ್ಕಾರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹುಲಿಗಳ ಆರ್ಥಿಕ ಮೌಲ್ಯಮಾಪನವನ್ನು ಸಹ ನಡೆಸಿದೆ. ಅಂತಹ ಮಧ್ಯಸ್ಥಿಕೆಗಳು ಮತ್ತು ಪ್ರಕ್ರಿಯೆಗಳನ್ನು ಸಾಂಸ್ಥಿಕಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಾನೂನುಬದ್ಧವಾಗಿ ಕಡ್ಡಾಯ ಹುಲಿ ಸಂರಕ್ಷಣಾ ಯೋಜನೆಯ ಮೂಲಕ ಕಾರ್ಯಗತಗೊಳಿಸಲಾಗಿದೆ.
ಇದು ಭಾರತಕ್ಕೆ ಒಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ ಪಿಎಂ ಮೋದಿ ಅವರು ಹುಲಿಯನ್ನು ರಕ್ಷಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಹುಲಿ ಸಂರಕ್ಷಣೆಗಾಗಿ ಇನ್ನೂ ಹೆಚ್ಚಿನ ಪ್ರಯತ್ನಗಳಿಗೆ ಕರೆ ನೀಡಿದ ಅವರು, ಇದನ್ನು ಸಾಧಿಸಲು ವಿವಿಧ ಪಾಲುದಾರರು ಸಹಕರಿಸಿದ್ದನ್ನು ಪ್ರಧಾನಿ ಶ್ಲಾಘಿಸಿದರು.
ಭಾರತವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆಯನ್ನು ನಡೆಸುತ್ತದೆ. ಈಗಾಗಲೇ 2006, 2010 ಮತ್ತು 2014 ರಲ್ಲಿ ಈ ಅಂದಾಜು ಸಮೀಕ್ಷೆ ಪೂರ್ಣಗೊಂಡಿವೆ.ಭಾರತದಲ್ಲಿನ ಹುಲಿಗಳ ಎಣಿಕೆ ಕಾರ್ಯವು ಜಗತ್ತಿನಲ್ಲಿ ಅತಿದೊಡ್ಡ ವನ್ಯಜೀವಿ ಸಮೀಕ್ಷೆಯ ಪ್ರಯತ್ನವೆಂದು ನಂಬಲಾಗಿದೆ.