ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜನರು ಚೀನಾದ ಉತ್ಪನ್ನಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಾಯ್ ಕಾಟ್ ಮಾಡಲು ಆರಂಭಿಸಿದ್ದಾರೆ. ಈ ಸಂಚಿಕೆಯಲ್ಲಿ, ಚೀನಾದ ಜನಪ್ರಿಯ ಅಪ್ಲಿಕೇಶನ್ ಟಿಕ್ಟಾಕ್‌ನೊಂದಿಗೆ ಸ್ಪರ್ಧಿಸಲು ಮತ್ತೊಂದು ಹೊಸ ಅಪ್ಲಿಕೇಶನ್ 'ಚಿಂಗಾರಿ' ಅನ್ನು ಪ್ರಾರಂಭಿಸಲಾಗಿದೆ. ಕಳೆದ 72 ಗಂಟೆಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆಪ್  5 ಲಕ್ಷಕ್ಕೂ ಅಧಿಕ ಬಾರಿಗೆ ಡೌನ್‌ಲೋಡ್ ಗೆ ಒಳಗಾಗಿದ್ದು, ಬಳಕೆದಾರರಲ್ಲಿ ಹೆಚ್ಚು ಜನಪ್ರೀಯತೆಯನ್ನು ಗಿಟ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಈ ಆಪ್ ನ ವಿಶೇಷತೆ ಏನು?
ಚಿಂಗಾರಿ ಒಂದು ಶಾರ್ಟ್ ವೀಡಿಯೊ ತಯಾರಿಕೆ ಮತ್ತು ಹಂಚಿಕೆಯ ಅಪ್ಲಿಕೇಶನ್‌ ಆಗಿದ್ದು , ಇದು ಬಳಕೆದಾರರಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಮತ್ತು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುವ ಸೌಕರ್ಯವನ್ನು ಸಹ ಒದಗಿಸಲಾಗಿದೆ.


ಹೊಸ ಜನರೊಂದಿಗೆ ಸಂವಹನ ಮಾಡುವುದರ ಜೊತೆಗೆ, ಬಳಕೆದಾರರು ಕಂಟೆಂಟ್ ಅನ್ನು ಹಂಚಿಕೊಳ್ಳಬಹುದು. ಇದರಲ್ಲಿ, ನೀವು ವಾಟ್ಸಾಪ್ ಸ್ಟೇಟಸ್, ವೀಡಿಯೊಗಳು, ಆಡಿಯೊ ತುಣುಕುಗಳು, ಗಿಫ್ ಸ್ಟಿಕ್ಕರ್‌ಗಳು ಮತ್ತು ಫೋಟೋಗಳೊಂದಿಗೆ ಹೊಸ ಸೃಜನಶೀಲತೆಗಳನ್ನು ಪ್ರಯತ್ನಿಸಬಹುದು.


ಇಂಗ್ಲಿಷ್ ಸೇರಿದಂದೆ ಈ ಅಪ್ಲಿಕೇಶನ್ ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಮುಂತಾದ 9 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.


ಈ ಆ್ಯಪ್ ಅನ್ನು ಬೆಂಗಳೂರು ಮೂಲದ ಡೆವಲಪರ್‌ಗಳಾದ ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅಭಿವೃದ್ಧಿಪಡಿಸಿದ್ದಾರೆ. ಆರಂಭದಿಂದ ಈ ಅಪ್ಲಿಕೇಶನ್ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಕಳೆದ 72 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಬಾರಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಲಾಗಿದೆ. ಪ್ರಸ್ತುತ ಈ ಅಪ್ಲಿಕೇಶನ್‌ನ ಬಳಕೆದಾರರ ರೇಟಿಂಗ್ 4.6 ಆಗಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.