ನವದೆಹಲಿ:ದೇಶಾದ್ಯಂತ ಕೊರೊನಾ ವೈರಲ್ ಲಾಕ್ ಡೌನ್ ಬಳಿಕ ಜೂನ್ 8 ರಂದು ದೇಶದ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರ ದರ್ಶನಕ್ಕಾಗಿ ಪುನಃ ತೆರೆಯುವ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿಯೂ ಕೂಡ ಈ ತಯಾರಿ ಭರದಿಂದ ಸಾಗಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಜೂನ್ 8ರಿಂದ ತಿರುಪತಿ ಬಾಲಾಜಿ ಮಂದಿರದ ಕಪಾಟಗಳನ್ನು ತೆರೆಯಲಾಗುತ್ತಿದೆ. ಕಳೆದ ಮಾರ್ಚ್ 20ರಂದು ತಿರುಪತಿಯ ದೇವಸ್ಥಾನವನ್ನು ಸಾರ್ವಜನಿಕ ದರ್ಶನಕ್ಕಾಗಿ ಬಂದ್ ಮಾಡಲಾಗಿತ್ತು.


COMMERCIAL BREAK
SCROLL TO CONTINUE READING

ಜೂನ್ 8-ಜೂನ್ 10ರವರೆಗೆ ದೇವಸ್ಥಾನದ ಆಡಳಿತ ಮಂಡಳಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ದರುಶನಕ್ಕೆ ಅನುಮತಿ ನೀಡಲಾಗುತ್ತಿದೆ. ಇದಕ್ಕಾಗಿ ಅವರೂ ಕೂಡ ಆನ್ಲೈನ್ ಟೈಮ್ ಸ್ಲಾಟ್ ಬುಕ್ ಮಾಡಬೇಕು. ಜೂನ್ 11 ರಿಂದ ಬೆಳಗ್ಗೆ 6.30ರಿಂದ ಸಾಯಂಕಾಲ 7.30ರವರೆಗೆ ಸಾರ್ವಜನಿಕರಿಗಾಗಿ ದರ್ಶನ ವ್ಯವಸ್ಥೆ ಮಾಡಲಾಗುವುದು.


ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ದಿನವೊಂದಕ್ಕೆ ಕೇವಲ 6000 ಜನರು ಮಾತ್ರ ದರ್ಶನ ಮಾಡಬಹುದು. ಅಂದರೆ, ಪ್ರತಿ ಗಂಟೆಗೆ ಕೇವಲ 500 ಭಾವಿಕರಿಗೆ ದರ್ಶನದ ಅನುಮತಿ ಸಿಗಲಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ತಿರುಮಲಾ ಟ್ರಸ್ಟ್ ಅಧಿಕಾರಿಗಳು 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹಾಗೂ 65 ಕ್ಕಿಂತ ಮೇಲ್ಪಟ್ಟವರಿಗಾಗಿ ದರ್ಶನದ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.


ಈ ಬಾರಿ ದೇವಸ್ಥಾನದಲ್ಲಿ ಕೊರೊನಾ ಟೆಸ್ಟ್ ಗಾಗಿ ಪರ್ಮನೆಂಟ್ ಕ್ಯಾಂಪ್ ಕೂಡ ಇರಲಿದ್ದು,ಇದರಲ್ಲಿ ನಿತ್ಯ ಸುಮಾರು 200 ನೌಕರರು ಹಾಗೂ ಭಕ್ತಾದಿಗಳ ರಾಂಡಂ ಟೆಸ್ಟ್ ನಡೆಸಲಾಗುವುದು. ನಿತ್ಯ ದರ್ಶನ ಪಡೆಯುವ 6000 ಭಕ್ತಾದಿಗಳಲ್ಲಿ 3000 ವಿಐಪಿಗಳಿಗೆ ಅನುಮತಿ ನೀಡಲಾಗುವುದು. ಇದಕ್ಕಾಗಿ ಕೂಡ ಆನ್ಲೈನ್ ನಲ್ಲಿ ಸ್ಲಾಟ್ ಬುಕ್ ಮಾಡಬೇಕು. ಈ ಆನ್ಲೈನ್ ಬುಕಿಂಗ್ ಜೂನ್ 8 ರಿಂದ ಆರಂಭಗೊಳ್ಳಲಿದೆ.