Tiruparti  garudseva : ಪ್ರತಿ ಹುಣ್ಣಿಮೆಯಂದು ನಡೆಯುವ ಗರುಡ ಸೇವೆಯ ದಿನದಂದು ಭೇಟಿ ನೀಡಿದರೆ ತಿಮ್ಮಪನ ಆಶೀರ್ವಾದ ಖಂಡಿತವಾಗಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ  ರಾತ್ರಿ 7 ರಿಂದ 9 ಗಂಟೆಯ ನಡುವೆ ಭಕ್ತರಿಗೆ ತಿರುಮಲದ ಬೀದಿಗಳಲ್ಲಿ ಸರ್ವಾಲಂಕಾರ ಅಲಂಕೃತ ಶ್ರೀಮಲಯಪ್ಪ ಸ್ವಾಮಿ ಗರುಡನ ಮೇಲೆ ದರ್ಶನ ನೀಡಲಿದ್ದಾರೆ. 


COMMERCIAL BREAK
SCROLL TO CONTINUE READING

ಈ ದಿನ ತುಂಬಾ ವಿಶೇಷವಾಗಿದ್ದು, ಭಕ್ತರು ಈ ದಿನ ತಿರುಪತಿಗೆ ಭೇಟಿ ನೀಡುವ ಮೂಲಕ ತಿಮ್ಮಪ್ಪನ ಆಶೀರ್ವಾದ ಪಡೆಯಬಹುದು. ಈ ಸೇವೆಯಲ್ಲಿ ಭಾಗವಹಿಸಲು ಬಯಸಿದರೆ ತಿರುಪತಿಗೆ ಭೇಟಿ ನೀಡುವ ಮುನ್ನ ಆನ್‌ಲೈಕ್‌ ಮೂಲಕ  ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶವಿದೆ 


ಇದನ್ನು ಓದಿ IND vs ENG Test: ರಾಂಚಿ ಟೆಸ್ಟ್ ಗೆದ್ದರೆ ಈ ಶ್ರೇಷ್ಠ ದಾಖಲೆ ಬರೆಯಲಿದೆ ಟೀಂ ಇಂಡಿಯಾ! ಯಾವುದದು?


ಕೇವಲ ಇದಿಷ್ಟು ಮಾತ್ರವಲ್ಲದೆ ತಿರುಪತಿಯಲ್ಲಿ ನಡೆಯುವ ಮಾರ್ಚ್‌ ತಿಂಗಳಲ್ಲಿ ನಡೆಯುವ ಸೇವೆಗಳು ಮತ್ತು  ಮಹೋತ್ಸವಗಳಲ್ಲಿ ಭಾಗವಹಿಸಬೇಕೆಂದುಕೊಂಡಲ್ಲಿ ಆನ್‌ಲೈನ್‌ ಮೂಲಕ ಟಿಕೆಟ್ ಬುಕ್ ಮಾಡುವ'ಅವಕಾಶ ಬಿಡುಗಡೆ ಮಾಡಲಾಗಿದೆ. 


ಮಾರ್ಚ್‌ ತಿಂಗಳಲ್ಲಿ ತಿರುಪತಿಯಲ್ಲಿ ನಡೆಯುವ ಸೇವೆಗಳು : 
ತೊಂಡಮಾನಪುರಂ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ಮಾರ್ಚ್ 9 ರಿಂದ 17 ರವರೆಗೆ ನಡೆಯಲಿದೆ. 
ಮಾರ್ಚ್ 8 ರಂದು ಸಂಜೆ 6 ಗಂಟೆಗೆ ಅಂಕುರಾರ್ಪಣ ನಡೆಯಲಿದೆ. 
ಮಾರ್ಚ್ 9 ರಂದು ಬೆಳಿಗ್ಗೆ 7 ರಿಂದ 8 ರವರೆಗೆ ಧ್ವಜಾರೋಹಣದೊಂದಿಗೆ ಬ್ರಹ್ಮೋತ್ಸವ ಪ್ರಾರಂಭವಾಗಲಿದೆ. 
ಪ್ರತಿದಿನ ಸಂಜೆ 7 ರಿಂದ 8.30 ರವರೆಗೆ ವಾಹನಗಳು ಕಾರ್ಯನಿರ್ವಹಿಸುತ್ತವೆ. 
ಮಾರ್ಚ್ 10 ರಂದು ಹಂಸ ವಾಹನ, 
ಮಾರ್ಚ್ 11 ರಂದು ಸಿಂಹ ವಾಹನ,
 ಮಾರ್ಚ್ 12 ರಂದು ಹನುಮಾನ್ ವಾಹನಂ, 
ಮಾರ್ಚ್ 13 ರಂದು ಸಂಜೆ ಕಲ್ಯಾಣೋತ್ಸವ, ರಾತ್ರಿ ಗರುಡ ಸೇವೆ, 
ಮಾರ್ಚ್ 14 ರಂದು ಗಜವಾಹನಂ, 
ಮಾರ್ಚ್ 15 ರಂದು ಚಂದ್ರಪ್ರಭಾ ವಾಹನಂ, 
ಮಾರ್ಚ್ 16 ರಂದು ಬೆಳಿಗ್ಗೆ ತಿರುಚ್ಚಿ ಸೇವೆ  
ಮಾರ್ಚ್ 16 ರಂದು ಬೆಳಿಗ್ಗೆ ರಾತ್ರಿ ಅಶ್ವ ವಾಹನ ಸೇವೆ, 
ಮಾ.17ರಂದು ಬೆಳಗ್ಗೆ 9ರಿಂದ 11ರವರೆಗೆ ಚಕ್ರ ಸ್ನಾನ ಹಾಗೂ ಸಂಜೆ 6.30ರಿಂದ 8ರವರೆಗೆ ಧ್ವಜಾರೋಹಣ ನಡೆಯಲಿದೆ.
ಮಾರ್ಚ್‌ 18ರಂದು ಸಂಜೆ 5.30ಕ್ಕೆ ಪುಷ್ಪಯಾಗ ನಡೆಯಲಿದೆ. 
ಕಪಿಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಫೆಬ್ರವರಿ 25 ರಂದು ಕೋಯಿಲ್ ಆಳ್ವರ ತಿರುಮಂಜನ ನಡೆಯಲಿದೆ.


ಇದನ್ನು ಓದಿ : Xiaomi 14 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಕುರಿತು ಮಾಹಿತಿ ಇಲ್ಲಿದೆ ನೋಡಿ 


ಇದರೊಂದಿಗೆ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ಮಾರ್ಚ್ 1ರಿಂದ 10ರವರೆಗೆ ನಡೆಯಲಿದೆ.


ಫೆ.25ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ಕೊಯಿಲ್ ಆಳ್ವರ ತಿರುಮಂಜನ ನಡೆಯಲಿದೆ. ಈ ಸಂದರ್ಭದಲ್ಲಿ, ಇಡೀ ದೇವಾಲಯ ಮತ್ತು ಪೂಜಾ ಪರಿಕರಗಳನ್ನು ಶುದ್ಧೀಕರಿಸಿ ಸುಗಂಧ ದ್ರವ್ಯಗಳಿಂದ ಪೂಜಿಸಲಾಗುತ್ತದೆ. ಹೀಗಾಗಿ ಸರ್ವದರ್ಶನ ಬೆಳಗ್ಗೆ 8 ರಿಂದ 11 ರವರೆಗೆ ಮತ್ತೆ ಮಧ್ಯಾಹ್ನ 2.30 ರಿಂದ ರಾತ್ರಿ 8 ರವರೆಗೆ ಇರುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.