ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಾಹನ ನೋಂದಣಿ, ಲರ್ನಿಂಗ್ ಲೈಸನ್ಸ್, ಡ್ರೈವಿಂಗ್ ಲೈಸನ್ಸ್  ಇತ್ಯಾದಿಗಳ ನವೀಕರಣಕ್ಕಾಗಿ ಆಧಾರ್  ಬಯೋಮೆಟ್ರಿಕ್ ನೊಂದಿಗೆ ಲಿಂಕ್ ಮಾಡುವ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ. ಈ ಎಲ್ಲ ಕಾರ್ಯ ಆನ್ಲೈನ್ ನಲ್ಲಿ ನಡೆಸಲಾಗುವ ಕಾರಣ ಇನ್ಮುಂದೆ ಜನರು ಕ್ಷೇತ್ರೀಯ ಸಾರಿಗೆ ಕಾರ್ಯಾಲಯ(RTO)ಕ್ಕೆ ಭೇಟಿ ನೀಡುವುದು ತಪ್ಪಲಿದೆ. ಇದರಿಂದ RTO ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಕೂಡ ತಡೆ ಬೀಳಲಿದೆ.


COMMERCIAL BREAK
SCROLL TO CONTINUE READING

ಮೂಲಗಳು ನೀಡಿರುವ ಮಾಹಿತಿ ಪ್ರಕಾರ ರಸ್ತೆ ಸಾರಿಗೆ  ಹಾಗೂ ರಾಷ್ಟ್ರೀಯ ಮಹಾಮಾರ್ಗ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯದ ಬಳಿ ಪ್ರಸ್ತಾವನೆಯೊಂದನ್ನು ಕಳುಹಿಸಿದೆ ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ರಸ್ತೆ ಸಾರಿಗೆ ಸಚಿವಾಲಯ, ಜನರಿಗೆ ಲರ್ನಿಂಗ್ ಲೈಸನ್ಸ್, ಡ್ರೈವಿಂಗ್ ಲೈಸನ್ಸ್ ಗಾಗಿ ಆನ್ಲೈನ್ ಸೌಕರ್ಯ ಸಿಗಬೇಕು ಎಂದಿದೆ. ಇದಲ್ಲದೆ ವಾಹನ ನೋಂದಣಿ ಪ್ರಮಾಣಪತ್ರ, ಡ್ರೈವಿಂಗ್ ಲೈಸನ್ಸ್, ಅಡ್ರೆಸ್ಸ್ ಚೇಂಜ್ ಇತ್ಯಾದಿಗಳೂ ಕೂಡ ಆಧಾರ್ ಬಯೋಮೆಟ್ರಿಕ್ ಆಧಾರದ ಮೇಲೆ ನಡೆಯಬೇಕು ಎಂದು ಹೇಳಿದೆ.


RTO ಕಚೇರಿಯ ಈ ಎಲ್ಲ ಕಾರ್ಯಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದರಿಂದ ಓರ್ವ ವ್ಯಕ್ತಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಡ್ರೈವಿಂಗ್ ಲೈಸನ್ಸ್ ಮಾಡಿಸಲು ಸಾಧ್ಯವಿಲ್ಲ ಹಾಗೂ ಡಿಎಲ್ ನಲ್ಲಿ ಅವ್ಯವಹಾರ ಕೂಡ ನಿಲ್ಲಲಿದೆ. ಇದಲ್ಲದೆ ವಾಹನವನ್ನು ಆಧಾರ್ ಜೊತೆಗೆ ಜೋಡಣೆ ಮಾಡುವುದರಿಂದ ಕಳುವು ಮಾಡಿದ ವಾಹನಗಳನ್ನು ಬೇರೆ ರಾಜ್ಯಗಳಲ್ಲಿ ಮನೀ ನೋಂದಣಿ ಮಾಡುವುದಕ್ಕೆ ಕಡಿವಾಣ ಬೀಳಲಿದೆ. ಆರ್.ಟಿ.ಓ ಸೇವೆಗಳನ್ನು ಆನ್ಲೈನ್ ಮಾಡುವುದರಿಂದ ಇದರಲ್ಲಿನ ಅವ್ಯವಹಾರ ತಪ್ಪಲಿದೆ ಹಾಗೂ ಕಚೇರಿಗಳಲ್ಲಿನ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ವೆರಿಫಿಕೆಶನ್ ಗಾಗಿ ಆಧಾರ್ ಕಾರ್ಡ್ ಅನ್ನು ವೈಕಲ್ಪಿಕ ದಾಖಲೆಯನ್ನಾಗಿ ಪರಿಗಣಿಸುವ ಅವಶ್ಯಕತೆ ಇದೆ  ಎಂದು ಸಚಿವಾಲಯ ಹೇಳಿದೆ. ಇನ್ನೊಂದೆಡೆ ಸಬ್ಸಿಡಿ ಯೋಜನೆಗಳನ್ನು ಹೊರತುಪಡಿಸಿ ಸರ್ಕಾರಿ ಕಾರ್ಯಗಳಿಗೆ ಆಧಾರ್ ಅನಿವಾರ್ಯ ಮಾಡುವ ಸರ್ಕಾರದ ಘೋಷಣೆಯ ಮೇಲೆ ಸದ್ಯ ತಡೆ ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ.