VIDEO: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಿದ `ತಿತ್ಲಿ` ಚಂಡಮಾರುತ, 18 ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಈ ಸೈಕ್ಲೋನ್ ಸಂಭಿಸಿದೆ. ಗಂಟೆಗೆ 120- 140 ಕಿಮೀ ವೇಗದಲ್ಲಿ ಗಾಳಿ ಚಲಿಸಲಿದ್ದು ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಭುವನೇಶ್ವರ್: ಇಂದು ಮುಂಜಾನೆ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಸ್ಸಾದ ಕೆಲವು ಭಾಗಗಳಲ್ಲಿ ಅಪ್ಪಳಿಸಿದ್ದು, ಅತ್ಯುಗ್ರ ಚಂಡಮಾರುತ ಎಂದೇ ಕರೆಸಿಕೊಳ್ಳುತ್ತಿರುವ ತಿತ್ಲಿ ಹಾವಳಿಯಿಂದ ಸಂಭವಿಸಬಹುದಾದ ಜೀವಹಾನಿಯನ್ನು ತಪ್ಪಿಸಲು ಆಂಧ್ರ ಮತ್ತು ಒಡಿಶಾ ಸರ್ಕಾರಗಳು ಅತ್ಯಗತ್ಯ ಕ್ರಮಗಳನ್ನು ಕೈಗೊಂಡಿವೆ. ಬೆಳಿಗ್ಗೆ ಸುಮಾರು ಮೂರು ಲಕ್ಷ ಜನರನ್ನು ಒಡಿಶಾದ ಕರಾವಳಿಯಿಂದ ಆಡಳಿತಾಧಿಕಾರಿಗಳು ಸ್ಥಳಾಂತರಿಸಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು. 18 ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಒಡಿಶಾದಲ್ಲಿ ಚಂಡಮಾರುತದಿಂದಾಗಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆಯು ಅದರ ವೇಗವು ದಿನ ಹತ್ತುವುದು ಹೆಚ್ಚಾಗಬಹುದು ಎಂದು ಅಂದಾಜಿಸಿದೆ ಮತ್ತು ಅದು ಪ್ರತಿ ಗಂಟೆಗೆ 165 ಕಿಲೋಮೀಟರ್ಗಳಷ್ಟು ತಲುಪಬಹುದು ಎಂದು ತಿಳಿಸಿದೆ. ಸಮುದ್ರ ಪ್ರದೇಶದಲ್ಲಿ ಎತ್ತರದ ಅಲೆಗಳು ಏಳುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ತಿತ್ಲಿ ಚಂಡಮಾರುತವನ್ನು ಅತ್ಯುಗ್ರ ಚಂಡಮಾರುತ ಎಂದು ಕರೆದಿರುವ ಹವಾಮಾನ ಇಲಾಖೆ, ಮುಂದಿನ ಕೆಲ ಗಂಟೆಗಳಲ್ಲಿ ತಿತ್ಲಿ ಚಂಡಮಾರುತ ಮತ್ತಷ್ಟು ಪ್ರಬಲಗೊಂಡು ಒಡಿಶಾ ಮತ್ತು ಆಂಧ್ರ ರಾಜ್ಯಗಳ ವಾಯುವ್ಯ ಭಾಗವನ್ನು ದಾಟಿ ಹೋಗಲಿದೆ. ನಂತರ ದುರ್ಬಲಗೊಂಡು ಪಶ್ಚಿಮ ಬಂಗಾಳದ ಗಂಗಾ ಬಯಲಿನತ್ತ ಸಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್:
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಮುದ್ರದಲ್ಲಿ ಉದಯಿಸುತ್ತಿರುವ ಹವಾಮಾನ ತರಂಗ ಮುನ್ಸೂಚನೆಯ ದೃಷ್ಟಿಯಿಂದ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಗಂಜಮ್, ಪುರಿ, ಖುರ್ದಾ, ಕೇಂದ್ರಪಾರಾ ಮತ್ತು ಜಗದತ್ಶಿಪುರ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ತಕ್ಷಣವೇ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಂಡಮಾರುತದಿಂದ ಯಾವುದೇ ಜೀವಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಈ ಪ್ರದೇಶಗಳಲ್ಲಿ ಭಾರೀ ಮಳೆ ಸಂಭವ:
ಐಎಂಡಿ ಅಕ್ಟೋಬರ್ 11ರಿಂದ ಕಂಧಮಲ್, ಬೌದ್ಧ ಮತ್ತು ಧೆಂಕನಲ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಮಳೆ ಜೊತೆಗೆ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಸಂಭಾವ್ಯ ಪ್ರವಾಹ ಪರಿಸ್ಥಿತಿಯ ದೃಷ್ಟಿಯಿಂದ ಒಡಿಶಾ ಸರಕಾರವನ್ನು ಎಚ್ಚರಿಸಿದೆ.
ತಿತ್ಲಿ ಭೂಕಂಪದ ಭಯಂಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋವನ್ನು ನೀವು ಒಮ್ಮೆ ನೋಡಿ...
ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ತಿತ್ಲಿ ಚಂಡಮಾರುತದಿಂದ ಉಂಟಾಗುತ್ತಿರುವ ಭೂಕುಸಿತದ ಇತ್ತೀಚಿನ ದೃಶ್ಯ.