ಕರೋನವೈರಸ್ ಸೋಂಕಿಗೆ ತುತ್ತಾಗಿ TMC ಶಾಸಕ ತಮೋನಾಶ್ ಘೋಷ್
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ತಮೋನಾಶ್ ಘೋಷ್ ಬುಧವಾರ (ಜೂನ್ 24) ಆಸ್ಪತ್ರೆಯಲ್ಲಿ ನಿಧನರಾದರು. ಮೇ ತಿಂಗಳಲ್ಲಿ ಘೋಷ್ ಅವರಿಗೆ ಕರೋನವೈರಸ್ COVID-19 ಪಾಸಿಟಿವ್ ಕಂಡು ಬಂದಿತ್ತು.
ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಶಾಸಕ ತಮೋನಾಶ್ ಘೋಷ್ ಕರೋನವೈರಸ್‌ನಿಂದಾಗಿ ಆಸ್ಪತ್ರೆಯಲ್ಲಿ ಇಂದು (ಜೂನ್ 24) ನಿಧನರಾದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಟ್ವಿಟರ್‌ನಲ್ಲಿ ಘೋಷ್ ಅವರ ನಿಧಾನಕ್ಕೆ ಸಂತಾಪ ಸೂಚಿಸಿದ್ದು ತಮೋನಾಶ್ ಘೋಷ್ ಅವರ ನಿಧನದಿಂದ ತುಂಬಾ ದುಃಖವಾಗಿದೆ. 1998 ರಿಂದ ಫಾಲ್ಟಾ ಮತ್ತು ಪಕ್ಷದ ಖಜಾಂಚಿಯಾಗಿದ್ದು 3 ಬಾರಿ ಶಾಸಕರಾದ ತಮೋನಾಶ್ ಘೋಷ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. 35 ವರ್ಷಗಳಿಂದ ನಮ್ಮೊಂದಿಗೆ ಇದ್ದರು, ಅವರು ಜನರ ಮತ್ತು ಪಕ್ಷದ ಕಾರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಅವರ ಸಾಮಾಜಿಕ ಸೇವೆ, ಕೊಡುಗೆ ಅಪಾರ ಎಂದು ಹೇಳಿದ್ದಾರೆ.
ಘೋಷ್ ಅವರ ಸಾಮಾಜಿಕ ಕಳಕಳಿ, ನಿಸ್ವಾರ್ಥ ಸೇವೆಗೆ ನಾವು ಆಭಾರಿಗಲಾಗಿದ್ದೇವೆ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ಪರವಾಗಿ ಅವರ ಪತ್ನಿ ಜರ್ನಾ, ಅವರ ಮಕ್ಕಳು ಮತ್ತು ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಮಮತಾ ಬ್ಯಾನರ್ಜಿ ಮತ್ತೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಘೋಷ್ 1998 ರಿಂದ ಟಿಎಂಸಿ ಖಜಾಂಚಿಯಾಗಿದ್ದರು ಮತ್ತು ಸಿಎಂ ಮಮತಾ ಬ್ಯಾನರ್ಜಿಯ ಆಪ್ತ ಸಹಾಯಕರಾಗಿ ಪರಿಗಣಿಸಲ್ಪಟ್ಟರು.